Cannes 2023: ಕಿಸ್ ಮಾಡುವಲ್ಲೂ ಐಶ್ವರ್ಯಾ ರೈ ಕಾಪಿ ಮಾಡಿದ್ರಾ ನಟಿ ಊರ್ವಶಿ ರೌಟೇಲಾ?
ಕೇನ್ಸ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡ ನಟಿ ಊರ್ವಶಿ ರೌಟೇಲಾ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಏಕದು?
ಸಿನಿರಂಗದ ಅತ್ಯಂತ ಪ್ರತಿಷ್ಠಿತ ಈ ವರ್ಷದ ಕೇನ್ಸ್ ಫಿಲ್ಮ್ ಫೆಸ್ಟಿವಲ್ (Cannes Film Festival) ಕೇನ್ಸ್‌ನಲ್ಲಿ ಅದ್ಧೂರಿಯಾಗಿ ಶುರುವಾಗಿದೆ. ಮೇ 16ರಿಂದ 10 ದಿನಗಳ ಈ ಕೇನ್ಸ್ ಫೆಸ್ಟಿವಲ್‌ನಲ್ಲಿ ವಿವಿಧ ದೇಶಗಳ ಹೆಸರಾಂತ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಭಾರತದಿಂದಲೂ ಹಲವಾರು ಸೆಲೆಬ್ರಿಟಿಗಳು ಈ ಹಬ್ಬಕ್ಕೆ ಪ್ರತಿವರ್ಷ ಭಾಗವಹಿಸಲಿದ್ದು, ಸೆಲೆಬ್ರಿಟಿಗಳು ತಮ್ಮ ಫ್ಯಾಷನ್ ಲುಕ್‌ನಿಂದ ಸಾಕಷ್ಟು ಗಮನ ಸೆಳೆಯುತ್ತಾರೆ. ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದ ಕ್ಯಾನೆಸ್ ಪಟ್ಟಣದಲ್ಲಿ ಈ ಕೇನ್ಸ್ ಚಲನ ಚಿತ್ರೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಮೇ 27 ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ, ಸ್ಟಾರ್ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ನೃತ್ಯ ಕಲಾವಿದರು, ಗಾಯಕರು ಸೇರಿದಂತೆ ಸಿನಿ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ (Red Carpet) ಮೇಲೆ ಹೆಜ್ಜೆ ಹಾಕಿರೋದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಸುಂದರ ಉಡುಗೆಗಳನ್ನು ತೊಟ್ಟು ಅವರೆಲ್ಲ ಪೋಸ್ ನೀಡುತ್ತಿದ್ದಾರೆ. ಈ ವರ್ಷ ಚಲನಚಿತ್ರೋತ್ಸವದ ಆರಂಭದ ದಿನ ಭಾಗವಹಿಸಿದ ತಾರೆಗಳೆಂದರೆ ಸಾರಾ ಅಲಿ ಖಾನ್, ಅನುಷ್ಕಾ ಶರ್ಮಾ, ಮೃಣಾಲ್ ಠಾಕೂರ್ ಮತ್ತು ಮಾನುಷಿ ಚಿಲ್ಲರ್ ಮುಂತಾದವರು. ಕಂಟೆಂಟ್ ಕ್ರಿಯೇಟರ್ ಡಾಲಿ ಸಿಂಗ್, ಟಿವಿ ರಿಯಾಲಿಟಿ ಶೋ ತಾರೆ ಸಾಕ್ಷಿ ಪ್ರಧಾನ್ ಹಾಗೂ ಕೇನ್ಸ್‌ನಲ್ಲಿ ಈ ಹಿಂದೆ ಹಲವಾರು ಭಾಗವಹಿಸಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಅದರಂತೆಯೇ ಕನ್ನಡದ ‘ಐರಾವತ’ ಬೆಡಗಿ ಬಹುಭಾಷಾ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಕಾನ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡಿರುವ ಲುಕ್ ಹೈಲೈಟ್ ಆಗಿದೆ. ಇಷ್ಟೇ ಆಗಿದ್ದರೆ ಊರ್ವಶಿ ಅವರು ಹೆಚ್ಚು ಸುದ್ದಿ ಆಗುತ್ತಿರಲಿಲ್ಲವೇನೋ. ಆದರೆ, ಅವರು ಧರಿಸಿರೋ ನೆಕ್‌ಪೀಸ್ ಎಲ್ಲರ ಗಮನ ಸೆಳೆದಿದೆ. ಮೊಸಳೆ ಮರಿಯ ನೆಕ್‌ಪೀಸ್ ಎಲ್ಲರ ಗಮನ ಸೆಳೆದಿದೆ. ಊರ್ವಶಿ ಅವರು ಫ್ಯಾಷನ್‌ಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಪ್ರತಿ ಕಾರ್ಯಕ್ರಮದಲ್ಲಿ ಭಿನ್ನವಾಗಿ ಕಾಣಿಸಿಕೊಂಡರು. ಅದೇ ರೀತಿ ಕೇನ್ಸ್ನಲ್ಲಿಯೂ ಕಾಣಿಸಿಕೊಂಡರು. ಊರ್ವಶಿ (Urvashi Rautela) ತೊಟ್ಟಿದ್ದ ಟ್ಯೂಲ್ ಗೌನ್‌ಗಿಂತ ಗಮನ ಸೆಳೆದಿದ್ದು ಆಕೆಯ ನೆಕ್ಲೆಸ್. ಮೊಸಳೆ ಮರಿಗಳ ರೀತಿ ಕಾಣುವ ಚಿನ್ನದ ಬಣ್ಣದ ವಿಭಿನ್ನ ನೆಕ್ಲೆಸ್ ಆಕೆಯ ಕುತ್ತಿಗೆಯಲ್ಲಿತ್ತು. 3 ಮೊಸಳೆ ಮರಿಗಳು ಆಕೆಯ ಕುತ್ತಿಗೆಯನ್ನು ಸುತ್ತುವರೆದಂತೆ ಇದ್ದ ಆಭರಣ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ. ಇನ್ನು ಕಿವಿಯಲ್ಲಿ ಅದೇ ತರಹದ ಮೊಸಳೆ ಡಿಸೈನಿನ ಓಲೆ (ear ring) ನೇತಾಡುತ್ತಿತ್ತು.
Cannes 2023ಯಲ್ಲಿ ಇಶಾ ಗುಪ್ತಾ: ಮೇಲಂತೂ ಓಪನ್ನು, ಚಡ್ಡಿಯಾದ್ರೂ ಹಾಕ್ಬಾರ್ದಾ ಎಂದ ಟ್ರೋಲಿಗರು!
ಇದೇನು ಅವತಾರ ಎಂದು ಕೆಲವು ನೆಟ್ಟಿಗರುಪ್ರಶ್ನೆ ಮಾಡಿದ್ದರೂ ಅವರು ಟ್ರೋಲ್ಗೆ ಒಳಗಾಗಿದ್ದು ಕಿಸ್ಸಿಂಗ್ ಪೋಸ್ನಿಂದಾಗಿ. ಕ್ಯಾನೆಸ್ ಚಲನಚಿತ್ರೋತ್ಸವದ ಎರಡನೇ ದಿನದಂದು ಕಿತ್ತಳೆ ಬಣ್ಣದ ರಫಲ್ ಗೌನ್‌ನಲ್ಲಿ ಊರ್ವಶಿ ರೌಟೇಲಾ ರೆಡ್ ಕಾರ್ಪೆಟ್ ಮೇಲೆ ನಡೆದರು. ಈ ಸಂದರ್ಭದಲ್ಲಿ ಅವರು ಅಲ್ಲಿದ್ದವರಿಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ, ಜತೆಗೆ ಹೃದಯದ ಕೈ ಸನ್ನೆಗಳನ್ನು ಮಾಡಿದ್ದಾರೆ. ಈ ಗೆಸ್ಚರ್‌ಗಾಗಿ ನಟಿಯನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಇದು 'ಐಶ್ವರ್ಯಾ ರೈ ಅವರ ಗೆಸ್ಚರ್ ಎನ್ನುವ ಕಾರಣಕ್ಕೆ. ಊರ್ವಶಿ, ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ನಟಿ ಮಾಧ್ಯಮದತ್ತ ಕೈ ಬೀಸುವುದು, ಪೋಸ್ ನೀಡುವುದು ಮತ್ತು ಚುಂಬಿಸುವುದನ್ನು ಕಾಣಬಹುದು. 'ಸೊಂಟದ ಮೇಲೆ ಕೈಗಳು, ಮಾಧ್ಯಮಗಳಿಗೆ ಚುಂಬಿಸುವಿಕೆ, ಹೃದಯದ ಕೈಗಳು. ಅವರು ಐಶ್ವರ್ಯಾ ರೈ ಅವರನ್ನು ಅನುಸರಿಸುವುದು ಸ್ಪಷ್ಟವಾಗಿದೆ. ಸ್ವಂತಿಕೆ ಇಲ್ಲದೇ ಬೇರೆಯವರ ಗೆಸ್ಚರ್ ಕದಿಯುವುದು ಏಕೆ? ಐಶ್ವರ್ಯಾ ರೈ ಅವರನ್ನು ಕಾಪಿ ಮಾಡುವುದು ಏಕೆ ಎಂದು ನೆಟ್ಟಿಗರು ಪ್ರಸ್ನಿಸುತ್ತಿದ್ದಾರೆ.
ಬಾಲಿವುಡ್ ಬೆಡಗಿ ಊವರ್ಶಿ ರೌಟೇಲಾ ಕನ್ನಡದ 'ಐರಾವತ' (Airavata) ಸಿನಿಮಾದಲ್ಲಿ ದರ್ಶನ್ ಜೋಡಿಯಾಗಿ ನಟಿಸಿದ್ದರು. ಎ. ಪಿ ಅರ್ಜುನ್ ನಿರ್ದೇಶನದ ಈ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಇನ್ನು ಊರ್ವಶಿ ನಟಿಸಿದ್ದಕ್ಕಿಂತ ಐಟಂ ಸಾಂಗ್‌ಗಳಲ್ಲಿ ಕುಣಿದಿರೋದೇ ಹೆಚ್ಚು. ಇನ್ನು ಜನಪ್ರಿಯ ವೇದಿಕೆಗಳಲ್ಲಿ ರ್ಯಾಂಪ್ ವಾಕ್ ಮಾಡಿ ಸುದ್ದಿ ಮಾಡಿದ್ದಾರೆ. ಇತ್ತೀಚೆಗೆ ತೆಲುಗಿನ 'ವಾಲ್ತೇರು ವೀರಯ್ಯ' ಚಿತ್ರದಲ್ಲಿ ಬಿಂದಾಸ್ ಸಾಂಗ್‌ಗೆ ಕುಣಿದಿದ್ದರು. ಅವರು ಕೊನೆಯದಾಗಿ ಏಜೆಂಟ್ ಚಿತ್ರದಲ್ಲಿ ಕಾಣಿಸಿಕೊಂಡರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದೆ. ನಟಿ ಮುಂದಿನ ವೆಬ್ ಸರಣಿಯಲ್ಲಿ ಇನ್ಸ್‌ಪೆಕ್ಟರ್ ಅವಿನಾಶ್ ಎಂಬ ಶೀರ್ಷಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೀರಜ್ ಪಾಠಕ್ ಅವರ ನೇತೃತ್ವದಲ್ಲಿ, ವೆಬ್ ಸರಣಿಯಲ್ಲಿ ರಣದೀಪ್ ಹೂಡಾ, ಅಭಿಮನ್ಯು ಸಿಂಗ್, ಅಮಿತ್ ಸಿಯಾಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವೆಬ್ ಸರಣಿಯು ಮೇ 18 ರಿಂದ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಸ್ಟ್ರೀಮ್ ಆಗಲಿದೆ.
Cannes 2023: ಫಸ್ಟ್ ಟೈಂ Cannes ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಇಶಾ, ಮಾನುಷಿ, ಸಾರಾ, ಹೇಗಿದೆ ಲುಕ್