Cannes 2023ಯಲ್ಲಿ ಇಶಾ ಗುಪ್ತಾ: ಮೇಲಂತೂ ಓಪನ್ನು, ಚಡ್ಡಿಯಾದ್ರೂ ಹಾಕ್ಬಾರ್ದಾ ಎಂದ ಟ್ರೋಲಿಗರು!

ಕೇನ್ಸ್​ ಉತ್ಸವದಲ್ಲಿ ಕಾಣಿಸಿಕೊಂಡಿರೋ ಬಾಲಿವುಡ್​ ನಟಿ ಇಶಾ ಗುಪ್ತಾ ಟ್ರೋಲ್​ಗೆ ಒಳಗಾಗಿದ್ದಾರೆ. ಕಾರಣವೇನು?
 

Esha Gupta marks her debut at the opening ceremony wearing a dangerously high slit gown

ಸಿನಿರಂಗದ ಅತ್ಯಂತ ಪ್ರತಿಷ್ಠಿತ ಈ ವರ್ಷದ ಕೇನ್ಸ್​ ಫಿಲ್ಮ್​ ಫೆಸ್ಟಿವಲ್​ (Cannes Film Festival) ಕೇನ್ಸ್​ನಲ್ಲಿ ಅದ್ಧೂರಿಯಾಗಿ ಶುರುವಾಗಿದೆ. ಮೇ 16ರಿಂದ 10 ದಿನಗಳ ಈ ಕೇನ್ಸ್‌ ಫೆಸ್ಟಿವಲ್‌ನಲ್ಲಿ ವಿವಿಧ ದೇಶದ ಹೆಸರಾಂತ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಭಾರತದಿಂದಲೂ ಹಲವಾರು ಸೆಲೆಬ್ರಿಟಿಗಳು ಈ ಹಬ್ಬಕ್ಕೆ  ಪ್ರತಿವರ್ಷ ಭಾಗವಹಿಸಲಿದ್ದು,  ಸೆಲೆಬ್ರಿಟಿಗಳು ತಮ್ಮ ಫ್ಯಾಷನ್ ಲುಕ್‌ನಿಂದ ಸಾಕಷ್ಟು ಗಮನ ಸೆಳೆಯುತ್ತಾರೆ.   ಫ್ರಾನ್ಸ್‌ನ ಫ್ರೆಂಚ್‌ ರಿವೇರಿಯಾದ ಕ್ಯಾನೆಸ್ ಪಟ್ಟಣದಲ್ಲಿ ಈ ಕೇನ್ಸ್ ಚಲನ ಚಿತ್ರೋತ್ಸವ ಅದ್ಧೂರಿಯಾಗಿ ನಡೆಯಲಿದೆ.  ಮೇ 27 ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ,  ಸ್ಟಾರ್‌ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು, ನೃತ್ಯ ಕಲಾವಿದರು, ಗಾಯಕರು ಸೇರಿದಂತೆ ಸಿನಿ ಕ್ಷೇತ್ರದ ದಿಗ್ಗಜರು ಪಾಲ್ಗೊಳ್ಳಲಿದ್ದು, ಇದಾಗಿದೆ ನಿನ್ನೆ ನಡೆದ ಕಾರ್ಯಕ್ರಮದಲ್ಲಿಯೂ ಹಲವು ತಾರೆಯರು ಭಾಗವಹಿಸಿದ್ದರು. ಈ ವರ್ಷ ಚಲನಚಿತ್ರೋತ್ಸವದ ಆರಂಭದ ದಿನ ಭಾಗವಹಿಸಿದ  ತಾರೆಗಳೆಂದರೆ ಸಾರಾ ಅಲಿ ಖಾನ್, ಅನುಷ್ಕಾ ಶರ್ಮಾ, ಮೃಣಾಲ್ ಠಾಕೂರ್ ಮತ್ತು ಮಾನುಷಿ ಚಿಲ್ಲರ್ ಮುಂತಾದವರು. ಕಂಟೆಂಟ್ ಕ್ರಿಯೇಟರ್ ಡಾಲಿ ಸಿಂಗ್, ಟಿವಿ ರಿಯಾಲಿಟಿ ಶೋ ತಾರೆ ಸಾಕ್ಷಿ ಪ್ರಧಾನ್ ಹಾಗೂ ಕೇನ್ಸ್‌ನಲ್ಲಿ ಈ ಹಿಂದೆ ಹಲವಾರು ಭಾಗವಹಿಸಿದ್ದ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಗಮನ ಸೆಳೆದವರು ನಟಿ ಇಶಾ ಗುಪ್ತಾ.  

 ಇಶಾ ಗುಪ್ತಾ   ಬೋಲ್ಡ್‌ನೆಸ್‌ಗೆ (Boldness) ಸಾಕಷ್ಟು ಹೆಸರುವಾಸಿಯಾದ ನಟಿ. ಇತ್ತೀಚಿಗೆ ಬಹುತೇಕ ಬಾಲಿವುಡ್​ನ ಎಲ್ಲಾ ನಟಿಯರೂ ಜಿದ್ದಿಗೆ ಬಿದ್ದವರಂತೆ ಮೈಮಾಟ ಪ್ರದರ್ಶನ ಮಾಡುವುದು ಮಾಮೂಲಿಯಾಗಿದೆ. ಅವರ ಸಾಲಿನಲ್ಲಿ ಇಶಾ ಗುಪ್ತಾ ಮುಂಚೂಣಿಯಲ್ಲಿ ನಿಂತಿದ್ದಾರೆ.  ಚಲನಚಿತ್ರಗಳಿಗಿಂತ ಹೆಚ್ಚಾಗಿ, ಅವರು ಒಂದು  ಹಾಟ್ ಫೋಟೋಶೂಟ್ ಅಥವಾ ವೀಡಿಯೋಗಳನ್ನು ಶೇರ್​ ಮಾಡಿಕೊಂಡೇ ಪ್ರಸಿದ್ಧಿಗೆ ಬರುತ್ತಿದ್ದಾರೆ.  ಇತ್ತೀಚೆಗೆ ಇಶಾ ಗುಪ್ತಾರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅದರಲ್ಲಿ ನಟಿ ತುಂಬಾ ಹಾಟ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದರಿಂದ ಟ್ರೋಲ್​ಗೂ ಒಳಗಾದರು. ಆದರೆ ಟ್ರೋಲ್​ ಆದಷ್ಟೂ ಹೆಚ್ಚಿನ ಫೇಮಸ್​ ಆಗುವುದು ತಿಳಿದಿರುವುದರಿಂದಲೇ ನಟಿಯರು ಇಂಥ ಫೋಟೋಗಳನ್ನು ಶೇರ್​ ಮಾಡುವುದು ಏನೂ ಗುಟ್ಟಾಗಿ ಉಳಿದಿಲ್ಲ. 

ರೆಡ್​ ಕಾರ್ಪೆಟ್​ ಮೇಲೆ ಎಡವಿ ಬಿದ್ದ ಪ್ರಿಯಾಂಕಾ ಚೋಪ್ರಾ: ಮುಂದಾಗಿದ್ದೇ ಬೇರೆ...

ಇದೀಗ ಇದೇ ಅವತಾರ ಮಾಡಿಕೊಂಡು ಇಶಾ (Isha Guptha) ಕೇನ್ಸ್​ ಫೆಸ್ಟಿವಲ್​ನಲ್ಲಿಯೂ ಕಾಣಿಸಿಕೊಂಡಿದ್ದಾರೆ.  ರೆಡ್ ಕಾರ್ಪೆಟ್ ಮೇಲೆ ಕ್ಯಾಟ್​ ವಾಕ್​ ಮಾಡುತ್ತಿದ್ದಂತೆಯೇ ಅಲ್ಲಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಆಕರ್ಷಕ ಗುಲಾಬಿ ಬಣ್ಣದ ಗೌನ್‌ನಲ್ಲಿ ಇಶಾ ರೆಡ್ ಕಾರ್ಪೆಟ್‌ನಲ್ಲಿ ನಡೆಯುವ ಮೂಲಕ ನೆರೆದವರ ಗಮನ ಸೆಳೆದಿದ್ದಾರೆ.  ಭಾರತ ಸರ್ಕಾರದ ನಿಯೋಗದ ಭಾಗವಾಗಿ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ ಇಶಾ ವಿಶೇಷ ಉಡುಗೆಯಲ್ಲಿ ಕಾಣಿಸಿಕೊಂಡರು. ಜಾನಿ ಡೆಪ್ ಅವರ ಪುನರಾಗಮನದ ಚಲನಚಿತ್ರವಾದ ಜೀನ್ ಡು ಬ್ಯಾರಿ ಎಂಬ ಆರಂಭಿಕ ಚಲನಚಿತ್ರದ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಪ್ರದರ್ಶನದಲ್ಲಿ ಇಶಾ ಭಾಗವಹಿಸಿದ್ದರು. 

  "ಭಾರತ ಸರ್ಕಾರದ ನಿಯೋಗದ ಭಾಗವಾಗಿ 2023 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ನಾನು ಸಂತೋಷಪಡುತ್ತೇನೆ. ಜಾಗತಿಕ ವೇದಿಕೆಯಲ್ಲಿ ಈ ಅವಕಾಶ ಒದಗಿಸಿದ್ದಕ್ಕೆ ಭಾರತ ಸರ್ಕಾರ ಮತ್ತು FICCI ಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಈ ಕ್ಷಣದಲ್ಲಿ ಬಯಸುತ್ತೇನೆ. ಭಾರತವು ಈಗ ಸಿನಿಮಾ ಜಗತ್ತಿನಲ್ಲಿ ಜಾಗತಿಕ ವೇದಿಕೆಯಲ್ಲಿದೆ ಮತ್ತು ಸಿನಿಮಾ ಜಗತ್ತಿನಲ್ಲಿ ತನ್ನ ವಿಶಿಷ್ಟ ಧ್ವನಿ ಮತ್ತು ದೃಷ್ಟಿಕೋನವನ್ನು ಜಗತ್ತಿಗೆ ಪ್ರದರ್ಶಿಸಲು ನನ್ನ ದೇಶವನ್ನು ಪ್ರತಿನಿಧಿಸುತ್ತಿರುವುದು ಸಂತೋಷವಾಗಿದೆ. ಕೇನ್ಸ್‌ನಲ್ಲಿ ರೆಡ್ ಕಾರ್ಪೆಟ್ (Red Carpet) ವಾಕಿಂಗ್ ಕನಸು ನನಸಾಗುವುದಲ್ಲದೆ ಬೇರೇನೂ ಇಲ್ಲ" ಎಂದು ಇಶಾ ಬರೆದುಕೊಂಡಿದ್ದಾರೆ.

Katrina-Vicky Kaushal: ಡಿವೋರ್ಸ್​ಗೆ ರೆಡಿಯಾಯ್ತಾ ಕತ್ರಿನಾ-ವಿಕ್ಕಿ ಕ್ಯೂಟ್​ ಜೋಡಿ?

ಫ್ಯಾಷನ್​ ಜಗತ್ತಿನಲ್ಲಿ ಇದೆಲ್ಲಾ ಮಾಮೂಲಿ ಎನಿಸಿದರೂ ಭಾರತೀಯರಿಗೆ ಮಾತ್ರ ಈಕೆಯ ವೇಷ ಹಿಡಿಸಿದಂತಿಲ್ಲ. ಪುನಃ ಇಶಾ ಟ್ರೋಲ್​ಗೆ ಒಳಗಾಗಿದ್ದಾರೆ. ಒಳ ಉಡುಪು ಇಲ್ಲದೆಯೇ ಈ ಡ್ರೆಸ್​ ಧರಿಸಿರುವುದಾಗಿ ಟ್ರೋಲಿಗರು ಟೀಕಿಸುತ್ತಿದ್ದಾರೆ. ಅಸಲಿಗೆ ಇಶಾ,  ನಿಕೋಲಸ್ ಜೆಬ್ರಾನ್ ಎಂಬ ಲೇಬಲ್ ಬಿಳಿ ಗೌನ್ ಧರಿಸಿದ್ದರು. ಈ ಗೌನ್​ ಹೊಕ್ಕುಳದವರೆಗೂ ಸೀಳಿರುವ ಕಾರಣದಿಂದಾಗಿ ಒಳ ಉಡುಪು ಹಾಕಿದಂತೆ ಕಾಣುತ್ತಿಲ್ಲ ಎನ್ನುವುದು ನೆಟ್ಟಿಗರ ಅಭಿಮತ. ದೇಹಸಿರಿಯನ್ನು ತೋರಿಸಿರುವ ನಟಿ ಇಶಾ ಅವರನ್ನು ನೋಡಿ ಮೇಲಿನ ಒಳ ಉಡುಪು ಹಾಕದೇ ಇರುವುದು ಈಗಿನ ನಟಿಯರಿಗೆ ಮಾಮೂಲಾಗಿ ಹೋಗಿದೆ, ಕೊನೆಯ ಪಕ್ಷ ಚಡ್ಡಿಯಾದ್ರೂ  ಹಾಕಬಾರದಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸರಿಯಾಗಿ ನೋಡಿ, ಒಂದು ಚೂರು ಕಾಣಿಸ್ತಿದೆ ಎಂದು ಕಾಲೆಳೆದಿದ್ದಾರೆ. ಮೇಲೆ- ಕೆಳಗೆ ಎರಡೂ ಒಳ ಉಡುಪು ಹಾಕದೇ ಹೀಗೆ ಅಸಹ್ಯವಾಗಿ ಕಾಣಿಸಿಕೊಳ್ಳುವುದು ಭಾರತೀಯ ನಾರಿಗೆ ಸರಿ ಹೊಂದುವುದಿಲ್ಲ ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ಇಶಾ ಅವರ ಈ ಡ್ರೆಸ್​ಗೆ ಮನಸೋತಿದ್ದಾರೆ.  ಇಶಾ ತಮ್ಮ ಸೌಂದರ್ಯದಿಂದ ತಲೆ ತಿರುಗುವಂತೆ ಮಾಡಿದ್ದಾರೆ, ವ್ಹಾವ್​ ಸುಂದರ ಬಟ್ಟೆ ಎಂದು ಹಾಡಿ ಹೊಗಳಿಸಿದ್ದಾರೆ.

 

Latest Videos
Follow Us:
Download App:
  • android
  • ios