Cannes 2023: ಫಸ್ಟ್ ಟೈಂ Cannes ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಇಶಾ, ಮಾನುಷಿ, ಸಾರಾ, ಹೇಗಿದೆ ಲುಕ್
ಕಾನ್ 2023 ಫಿಲ್ಮ್‌ಫೆಸ್ಟಿವಲ್ ಫ್ರಾನ್ಸ್‌ನಲ್ಲಿ ಅದ್ದೂರಿಯಾಗಿ ಪ್ರಾರಂಭವಾಗಿದೆ. ಮೊದಲ ದಿನವೇ ಅನೇಕ ಸಿನಿ ಗಣ್ಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಕಾನ್ 2023 ಫಿಲ್ಮ್‌ಫೆಸ್ಟಿವಲ್ ಅದ್ದೂರಿಯಾಗಿ ಪ್ರಾರಂಭವಾಗಿದೆ. ಮೊದಲ ದಿನವೇ ಅನೇಕ ಸಿನಿ ಗಣ್ಯರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.
ವಿಶೇಷ ಎಂದರೆ ಈ ಬಾರಿ ಬಾಲಿವುಡ್‌ನ ಅನೇಕ ಮಂದಿ ಮೊದಲ ಬಾರಿಗೆ ಪ್ರತಿಷ್ಠಿತ ಕಾನ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದಾರೆ. ವಿಭಿನ್ನ ಲುಕ್‌ನಲ್ಲಿ ಮಿಂಚುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಈಗಾಗಲೇ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಫ್ರಾನ್ಸ್‌ಗೆ ಹಾರಿದ್ದಾರೆ. ಮೊದಲ ದಿನ ಸಾರಾ ಅಲಿ ಖಾನ್, ಮಾನುಷಿ ಚಿಲ್ಲರ್, ಇಶಾ ಗುಪ್ತಾ ಹಾಗೂ ಊರ್ವಶಿ ಮಿಂಚಿದ್ದಾರೆ. ಫಸ್ಟ್ ಟೈಂ ಮಿಂಚಿದ ನಟಿಯರ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾರಾ ಅಲಿ ಖಾನ್ ದೇಸಿ ಲುಕ್‌ನಲ್ಲಿ ಮಿಂಚಿದ್ರೆ ಇಶಾ ಮತ್ತು ಮಾನುಷಿ ಲಾಂಗ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾನುಷಿ ಮತ್ತು ಇಶಾ ಇಬ್ಬರೂ ಬಿಳಿ ಬಣ್ಣದ ಗೌನ್ ಧರಿಸಿ ಹೆಜ್ಜೆ ಹಾಕಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಸಾರಾ ಅಲಿ ಖಾನ್ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಡಿಸೈನರ್ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಡಿಸೈನ್ ಮಾಡಿದ ಲೆಹಂಗಾ ಇದಾಗಿದೆ. ರೆಡ್ ಕಾರ್ಪೆಟ್ ಮೇಲೆ ಮೊದಲ ಬಾರಿಗೆ ಹೆಜ್ಜೆ ಹಾಕಿದ ನಟಿಯರು ಫುಲ್ ಖುಷ್ ಆಗಿದ್ದಾರೆ.
ನಟಿ ಇಶಾ ಗುಪ್ತಾ ಬಿಳಿ ಬಣ್ಣದ ಹೈ ಸ್ಲಿಟ್ ಗೌನ್‌ನಲ್ಲಿ ಮಿಂಚಿದ್ದಾರೆ. ಇಶಾ ಲುಕ್ ಮತ್ತು ವಾಕ್ ಅಭಿಮಾನಿಗಳ ಗಮನ ಸೆಳೆದಿದ್ದು ಫೋಟೋಗಳು ವೈರಲ್ ಆಗಿವೆ.