Asianet Suvarna News Asianet Suvarna News

Rishabh Pant; ಪಂತ್ ಹಿಂದೆ ಬಿದ್ದಿರುವ ಊರ್ವಶಿ; ಆಸ್ಪತ್ರೆ ಫೋಟೋ ಶೇರ್ ಮಾಡಿದ ನಟಿಗೆ ನಟ್ಟಿಗರ ತರಾಟೆ

ರಿಷಬ್ ಪಂತ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಫೋಟೋ ಶೇರ್ ಮಾಡಿದ ನಟಿ ಊರ್ವಶಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. 

Urvashi Rautela gets trolled for shared a photo of Mumbai hospital where Rishabh Pant is admitted sgk
Author
First Published Jan 6, 2023, 1:22 PM IST

ಬಹುಭಾಷಾ ನಟಿ ಊರ್ವಶಿ ರೌಟೇಲಾ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಪಂತ್ ಹಿಂದೆ ಬಿದ್ದಿರುವ ಊರ್ವಶಿ ಬಿಟ್ಟು ಬಿಡದೆ ಕಾಡುತ್ತಿದ್ದಾರೆ. ಸದ್ಯ ರಿಷಬ್ ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಪಂತ್‌ನ ಸುಮ್ಮನೆ ಬಿಡುತ್ತಿಲ್ಲ ನಟಿ ಊರ್ವಶಿ. ಹಾಗಾಗಿ ನೆಟ್ಟಿಗರು ಊರ್ವಶಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಈ ಮೊದಲು ಕೂಡ ಪಂತ್ ಅವರನ್ನು ಸಿಕ್ಕಾಪಟ್ಟೆ ಕಾಡಿದ್ದರು ಊರ್ವಶಿ. ಈ ಮೂಲಕ ಸದಾ ಸುದ್ದಿಯಲ್ಲಿರುತ್ತಿದ್ದರು. ಸಿನಿಮಾಗಿಂತ ಹೆಚ್ಚಾಗಿ ಊರ್ವಶಿ ಪಂತ್ ವಿಚಾರವಾಗಿ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಊರ್ವಶಿ ಇದೀಗ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಫೋಟೋ ಶೇರ್ ಮಾಡುವ ಮೂಲಕ ಪಂತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ರಿಷಬ್ ಪಂತ್ ಸದ್ಯ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಡೆಹ್ರಾಡೂನ್ ಆಸ್ಪತ್ರೆಯಿಂದ ಏರ್ ಲಿಫ್ಟ್ ಮಾಡಲಾಗಿದ್ದು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂತ್ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಊರ್ವಶಿ ಆಸ್ಪತ್ರೆಯ ಪೋಟೋ ಶೇರ್ ಮಾಡಿದ್ದರು. ಊರ್ವಶಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಪಂತ್ ನೋಡಲು ಆಸ್ಪತ್ರೆಗ ತೆರಳಿದ್ರಾ ಎನ್ನುವ ಅನುಮಾನ ಮೂಡಿದೆ. ಊರ್ವಶಿ ನಡೆಗೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.  

ರಿಷಬ್ ಪಂತ್ ಅಪಘಾತ, ಪ್ರಾರ್ಥನೆ ಸಂದೇಶದೊಂದಿಗೆ ಸಸ್ಪೆನ್ಸ್ ಮುಂದುವರಿಸಿದ ನಟಿ ಊರ್ವಶಿ!

ಪಂತ್ ಅಭಿಮಾನಿಗಳು ನಟಿಯ ವಿರುದ್ಧ ಕೆಂಡ ಕಾರುತ್ತಿದ್ದಾರೆ. 'ಒಬ್ಬ ಮಹಿಳೆಯಾಗಿ ಇದು ತಮಾಷೆಯಂತೆ ಕಾಣುತ್ತಿಲ್ಲ, ಇದು ಸರಿಯಿಲ್ಲ' ಎಂದು ಹೇಳಿದ್ದಾರೆ. ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿ, ಇದು ಕಿರುಕುಳ ತಾನೆ? ಅದೇ ಪುರುಷರ್ ಮಹಿಳೆಯರಿಗೆ ಹೀಗೆ ಮಾಡಿದ್ರೆ ಸಮಾಜ ಒಪ್ಪಿಕೊಳ್ಳುತ್ತದೆಯೇ? ಎಂದು ಹೇಳಿದ್ದಾರೆ. ಊರ್ವಶಿ ವಿರುದ್ಧ ಅನೇಕ ಕಾಮೆಂಟ್ ಗಳು ಹರಿದು ಬಂದಿದ್ದು ಆಕ್ರೋಶ ಹೊರಹಾಕುತ್ತಿದ್ದಾರೆ. 

ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ಪ್ರೈವೇಟ್‌ ವಾರ್ಡ್‌ಗೆ ಶಿಫ್ಟ್‌..!

 ಊರ್ವಶಿ ಮತ್ತು ಪಂತ್ ನಡುವೆ ಕಳೆದ ಕೆಲ ದಿನಗಳಿಂದ ಕಿತ್ತಾಟ ನಡೆಯುತ್ತಿತ್ತು. ಈಗ ರಿಷಭ್ ಪಂತ್ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಲೂ ಊರ್ವಶಿ ಹೀಗೆ ಮಾಡುತ್ತಿರುವುದು ಪಂತ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.  ಅಂದಹಾಗೆ ರಿಷಭ್​ಗೆ ಅಪಘಾತದವಾಗಿದೆ ಎನ್ನುವ ವಿಚಾರ ತಿಳಿದಾಗ ಪ್ರಾರ್ಥನೆ ಎಂದು ಮಾತ್ರ ಬರೆದುಕೊಂಡಿದ್ದರು. ಊರ್ವಶಿ ತಾಯಿ ಕೂಡ ರಿಷಭ್ ಬೇಗ ಚೇತರಿಕೆ ಕಾಣಲಿ ಎಂದು ಬರೆದುಕೊಂಡಿದ್ದರು. ಇದೀಗ ಆಸ್ಪತ್ರೆ ಫೋಟೋ ಹಂಚಿಕೊಂಡಿದ್ದಾರೆ. ಅಷ್ಟೆ ಟ್ರೋಲ್ ಮಾಡಿದರೂ, ಛೀಮಾರಿ ಹಾಕಿದರೂ ಊರ್ವಶಿ ಮಾತ್ರ ಪಂತ್‌ನ ಕಾಡುವುದನ್ನು ಬಿಟ್ಟಿಲ್ಲ. 

Follow Us:
Download App:
  • android
  • ios