ರಿಷಬ್ ಪಂತ್ ಅಪಘಾತ, ಪ್ರಾರ್ಥನೆ ಸಂದೇಶದೊಂದಿಗೆ ಸಸ್ಪೆನ್ಸ್ ಮುಂದುವರಿಸಿದ ನಟಿ ಊರ್ವಶಿ!
ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಅಪಘಾತ ಸುದ್ದಿ ಕೇಳಿದ ಭಾರತ ಬೆಚ್ಚಿ ಬಿದ್ದಿದೆ. ವಿದೇಶಿ ಕ್ರಿಕೆಟಿಗರು, ಸೆಲೆಬ್ರೆಟಿಗಳು ಪಂತ್ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಇತ್ತ ಪಂತ್ ಜೊತೆಗೆ ಗುದ್ದಾಟ ನಡೆಸಿದ್ದ ನಟಿ ಊರ್ವಶಿ ರೌಟೇಲಾ ಇದೀಗ ಮತ್ತೆ ಸಸ್ಪೆನ್ಸ್ ಸಂದೇಶ ಪೋಸ್ಟ್ ಮಾಡಿದ್ದಾರೆ.
ಮುಂಬೈ(ಡಿ.30): ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಜ್ಜಾಗಿರುವ ಭಾರತೀಯರನ್ನು ಇಂದು ಬೆಳಗ್ಗೆ ಹಲವು ಶಾಕಿಂಗ್ ಸುದ್ದಿಗಳು ಬೆಚ್ಚಿ ಬೀಳಿಸಿತ್ತು. ಪ್ರಧಾನಿ ಮೋದಿ ತಾಯಿ ನಿಧನ, ಕ್ರಿಕೆಟಿಗ ರಿಷಬ್ ಪಂತ್ ಅಪಘಾತ ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು. ಪಂತ್ ಅಪಘಾತದ ದೃಶ್ಯಗಳು ಎಲ್ಲರ ಭೀತಿ ಹೆಚ್ಚಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಬ್ ಪಂತ್ ಆರೋಗ್ಯ ಸ್ಥಿರವಾಗಿದೆ. ಕೈ , ಕಾಲು ಹಾಗೂ ಬೆನ್ನಿನ ಮೂಳೆ ಮುರಿತಕ್ಕೊಳಗಾಗಿದೆ. ಪಂತ್ ಚೇತರಿಕೆಗೆ ಹೆಚ್ಚಿನ ಸಮಯದ ಅವಶ್ಯಕತೆ ಇದೆ. ಇತ್ತ ದೇಶ ವಿದೇಶದ ಕ್ರಿಕೆಟಿಗರು ಪಂತ್ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪಂತ್ ಆರೋಗ್ಯ ವಿಚಾರಿಸಿ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಇತ್ತ ರಿಷಬ್ ಪಂತ್ ಜೊತೆ ಮುಸುಕಿನ ಗುದ್ದಾಟ ಬಹಿರಂಗ ಗುದ್ದಾಟ ನಡೆಸಿದ್ದ ನಟಿ ಊರ್ವಶಿ ರೌಟೇಲಾ ಕೂಡ ಪಾರ್ಥಿಸಿದ್ದಾರೆ. ಆದರೆ ಈ ಪ್ರಾರ್ಥನೆಯಲ್ಲೂ ಒಂದು ಸಸ್ಪೆನ್ಸ್ ಇಟ್ಟಿದ್ದಾರೆ. ಕಾರಣ ಊರ್ವಶಿ ರೌಟೇಲಾ ತನ್ನದೇ ಫೋಟೋ ಪೋಸ್ಟ್ ಮಾಡಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಆದರೆ ಯಾರಿಗಾಗಿ ಅನ್ನೋ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
ರಿಷಬ್ ಪಂತ್ ಅಪಘಾತದ ಬೆನ್ನಲ್ಲೇ ಊರ್ವಶಿ ರೌಟೇಲಾ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹಾಕಿದ್ದಾರೆ. ಹೀಗಾಗಿ ಪಂತ್ ಆರೋಗ್ಯ ಚೇತರಿಕೆಗಾಗಿ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ ಅನ್ನೋದು ಹಲವರ ವಾದ. ಮತ್ತೆ ಕೆಲವರು ಪಂತ್ ಜೊತೆ ಕಿತ್ತಾಡಿಕೊಂಡು ಇದೀಗ ನೇರವಾಗಿ ಪಂತ್ ಹೆಸರು ಹೇಳಲು ಸಾಧ್ಯವಾಗದೇ ಪ್ರಾರ್ಥನೆ ಎಂದು ಹಾಕಿದ್ದಾರೆ ಎಂದಿದ್ದಾರೆ. ಏನೇ ಆದರೂ ಊರ್ವಶಿ ಪಂತ್‌ಗಾಗಿ ಪ್ರಾರ್ಥಿಸಿದ್ದಾರೆ. ಇದು ಮುಖ್ಯ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಿಷಬ್ ಪಂತ್ ಅಪಘಾತಕ್ಕೆ ಆತಂಕ, ಕ್ರಿಕೆಟಿಗನ ತಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ!
2018ರಲ್ಲಿ ರಿಷಬ್ ಪಂತ್ ಹಾಗೂ ಊರ್ವಶಿ ರೌಟೇಲಾ ರೆಸ್ಟೋರೆಂಟ್ ಒಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಲ್ಲಿಂದ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾಹಿತಿಗಳು ಹರಿದಾಡತೊಡಗಿತ್ತು. ಇದಕ್ಕೆ ಪೂರಕವಾಗಿ ಇವರಿಬ್ಬರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಸದ್ದು ಮಾಡುತ್ತಿತ್ತು. ಆಧರೆ 2019ರಲ್ಲಿ ರಿಷಬ್ ಪಂತ್ ರೂಮರ್‌ಗೆ ತೆರೆಎಳೆದರು. ಇಶಾ ನೇಗಿ ಜೊತೆ ರಿಲೇಶಿನ್‌ನಲ್ಲಿರುವುದಾಗಿ ಹೇಳಿಕೊಂಡಿದ್ದರು. ಇಲ್ಲಿಂದ ಪಂತ್ ಹಾಗೂ ರೌಟೇಲಾ ನಡುವಿನ ಮುಸುಕಿನ ಗುದ್ದಾಟ ಆರಂಭಗೊಂಡಿತ್ತು.
ಕೆಲ ತಿಂಗಳ ಬಲಿಕ ಊರ್ವಶಿ ರೌಟೇಲಾ ಚೋಟೋ ಬಯ್ಯಾ ಎಂದು ಪಂತ್ ಕರೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಇದಾದ ಬಳಿಕ ಪಂತ್ ಕೆಲ ಸಂದೇಶ ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಊರ್ವಶಿ ಸಂದರ್ಶನ ಒಂದರಲ್ಲಿ ಪಂತ್ ತನಗಾಗಿ ಹೊಟೆಲ್ ಲಾಬಿಯಲ್ಲಿ ಕಾಯುತ್ತಿದ್ದರು. ಹಲವು ಬಾರಿ ಕರೆ ಮಾಡುತ್ತಿದ್ದರು ಎಂದಿದ್ದರು. ಇದು ಕ್ರಿಕೆಟಿಗ ಹಾಗೂ ಬಾಲಿವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
"ನಾನು ರಿಷಭ್ ಪಂತ್": ರಕ್ಷಿಸಲು ಬಂದ ಬಸ್ ಡ್ರೈವರ್ ಬಳಿ ಪಂತ್ ಹೇಳಿದ್ದೇನು..?
ಕೆಲವರು ಪ್ರಚಾರಕ್ಕಾಗಿ ಸಂದರ್ಶನದಲ್ಲಿ ತಮಗೆ ಬೇಕಾದಂತೆ ಹೇಳುತ್ತಾರೆ ಎಂದು ಪಂತ್ ತಿರುಗೇಟು ನೀಡಿದ್ದರು. ಕಿತ್ತಾಟ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಬಳಿಕ ತಣ್ಣಗಾಗಿತ್ತು. ಇದೀಗ ರಿಷಬ್ ಪಂತ್ ಅಪಘಾತದ ಸುದ್ದಿ ತಿಳಿದು ರೌಟೇಲಾ ಮಾಡಿರುವ ಪೋಸ್ಟ್ ಮತ್ತೆ ನೆಟ್ಟಿಗರಿಗೆ ಆಹಾರವಾಗಿದೆ.