Asianet Suvarna News Asianet Suvarna News

ಬೆರಳಿಗೆ ಗಾಯವಾಗಿದ್ದಕ್ಕೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ನಟಿಯನ್ನು ಗುಲಾಬಿಯಲ್ಲಿ ಮಳುಗಿಸಿದ ಅಭಿಮಾನಿಗಳು

ಬೆರಳಿಗೆ ಸಣ್ಣದಾದ ಗಾಯಗೊಂಡಿದಕ್ಕೆ ಆಸ್ಪತ್ರೆಗೆ  ದಾಖಲಾಗಿರುವ ನಟಿ ಊರ್ವಶಿ ರೌತೆಲಾ, ತಮಗಾಗಿ ಅಭಿಮಾನಿಗಳು 1 ಲಕ್ಷ ಲಕ್ಷುರಿ ಗುಲಾಬಿಗಳನ್ನು ಕಳುಹಿಸಿದ್ದಾರೆ.

Urvashi rautela die hard fans send 1 lakh luxury roses for speedy recovery mrq
Author
First Published Aug 25, 2024, 3:17 PM IST | Last Updated Aug 25, 2024, 4:03 PM IST

ಮುಂಬೈ: ಬೆರಳಿಗೆ ಸಣ್ಣ ಗಾಯವಾಗಿದ್ದಕ್ಕೆ ಆಸ್ಪತ್ರೆಯ ಐಸಿಯು ರೂಮ್‌ನಲ್ಲಿ ಅಡ್ಮಿಟ್‌ ಆಗಿದ್ದ ನಟಿ ಊರ್ವಶಿ ರೌತಲಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇದೀಗ ಟ್ರೋಲ್ ಬೆನ್ನಲ್ಲೇ ತಾವು ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ಅಭಿಮಾನಿಗಳು ತಮಗಾಗಿ ಕಳುಹಿಸಿದ್ದಾರೆ ಎನ್ನಲಾದ ಗುಲಾಬಿ ಹೂಗಳ ಮುಂದೆ ಕುಳಿತು ವಿಡಿಯೋ ಮಾಡಿಕೊಂಡು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಹ ಟ್ರೋಲ್ ಆಗುತ್ತಿದ್ದು, ಇಷ್ಟು ಹೂಗಳಿಗೆ ಎಷ್ಟು ಹಣ ನೀಡಿದ್ದೀರಿ ಎಂದು ಕೇಳುತ್ತಿದ್ದಾರೆ. ಬಾಲಿವುಡ್ ನಟಿ ಊರ್ವಶಿ ರೌತೆಲಾ ತಮ್ಮ ಸಿನಿಮಾಗಳಿಗಿಂತ ಖಾಸಗಿ ವಿಷಯಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಮೂರು ದಿನಗಳ ಹಿಂದೆ ಬೆರಳಿಗೆ ಗಾಯವಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನನ್ನ ಆರೋಗ್ಯದ ಚೇತರಿಕೆಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದರು. 

ಈ ವಿಡಿಯೋದಲ್ಲಿ ಬೆರಳಿಗೆ ಗಾಯವಾಗಿರುವ ವಿಡಿಯೋ ಸಹ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿದ ನೆಟ್ಟಿಗರು, ಬೆರಳಿಗೆ ಇಷ್ಟು ಸಣ್ಣ ಗಾಯವಾಗಿದ್ದಕ್ಕೆ ಆಸ್ಪತ್ರೆಗೆ ದಾಖಲಾದ ಭಾರತದ ಮೊದಲ ಮಹಿಳೆ ನೀವೇ ಎಂದು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದರು. ಕೆಲ ಅಭಿಮಾನಿಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ರು. ಬೇಗ ಗುಣಮುಖರಾಗಿ ಎಂದು ಹಾರೈಸಿದ್ದರು. ಈ ಬಗ್ಗೆ ತರೇಹವಾರಿ ಕಮೆಂಟ್‌ಗಳು ಬಂದಿದ್ದವು. 

ಶನಿವಾರ ಒಂದು ವಿಡಿಯೋ ಹಂಚಿಕೊಂಡಿರುವ ಊರ್ವಶಿ ರೌತೆಲಾ, ನನ್ ಡೈಹಾರ್ಡ್ ಫ್ಯಾನ್ಸ್ ನನಗಾಗಿ 1 ಲಕ್ಷುರಿ ಗುಲಾಬಿಗಳನ್ನು ಕಳುಹಿಸಿದ್ದಾರೆ. ಲವ್ ಯು ಆಲ್ ಎಂದು ಬರೆದುಕೊಂಡು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಹೇಗೆ ಎಲ್ಲಾ ಅಭಿಮಾನಿಗಳು ಒಂದೇ ರೀತಿಯ ಹೂಗಳನ್ನು ಕಳುಹಿಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ನಿಮಗೆ ಇಷ್ಟು ಸೀರಿಯಸ್ ಆಗಿದೆ ಅಂತ ನಮಗೆ ಗೊತ್ತಿರಲಿಲ್ಲ. ಮುಂಜಾಗ್ರತ ಕ್ರಮವಾಗಿ ದೆಹಲಿಯ ಏಮ್ಸ್‌ಗೆ ಬಂದು ದಾಖಲಾಗಿ ಎಂದು ತಮಾಷೆ ಮಾಡಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ದರ್ಶನ್ ಸಿನಿಮಾ ನಟಿಯ ಸ್ನಾನದ ವಿಡಿಯೋ

ಬಹುತೇಕರು ಇದು ಯಾವುದೋ ಸಿನಿಮಾ ಚಿತ್ರೀಕರಣ ಇರಬಹುದು. ಬೆರಳುಗಳ ಮೇಲೆ ರಕ್ತ ಮಾತ್ರ ಕಾಣುತ್ತಿದೆಯೇ ಹೊರತು ಯಾವುದೇ ಗಾಯ ಮಾತ್ರ ಕಾಣಿಸುತ್ತಿಲ್ಲ. ಇತ್ತೀಚೆಗೆ ನಟಿಯರು ಪ್ರಚಾರಕ್ಕಾಗಿ ಏನೇನು ಮಾಡುತ್ತಿರೋದಕ್ಕೆ ಊರ್ವಶಿಯವರು ಈ ಪೋಸ್ಟ್‌ಗಳು ಕಾರಣ ಎಂದು ಬರೆದುಕೊಳ್ಳುತ್ತಿದ್ದಾರೆ. ಆದ್ರೆ ಈ ಟ್ರೋಲ್ ಮತ್ತು ವ್ಯಂಗ್ಯಕ್ಕೆ ನಟಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಈ ಹಿಂದೆ ಊರ್ವಶಿ ರೌತೆಲಾರದ್ದು ಎನ್ನಲಾದ ಬಾತ್‌ರೂಮ್ ವಿಡಿಯೋ ಲೀಕ್ ಆಗಿತ್ತು. ಆರಂಭದಲ್ಲಿ ಇದು ಸಿನಿಮಾದ ವಿಡಿಯೋ ತುಣುಕು ಎಂದು ಹೇಳಲಾಗಿತ್ತು. ಆನಂತರ ಮ್ಯಾನೇಜರ್ ಜೊತೆ ಊರ್ವಶಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಹ ಲೀಕ್ ಆಗಿತ್ತು. ಆ ಆಡಿಯೋ ಕೇಳಿದ ನೆಟ್ಟಿಗರು, ಊರ್ವಶಿ ಅವಕಾಶಗಳ ಕೊರತೆಯಿಂದ ಕಾಮಪ್ರಚೋದಕ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ರಾ ಎಂಬ ಚರ್ಚೆಗಳು ಬಾಲಿವುಡ್ ಅಂಗಳದಲ್ಲಿ ಶುರುವಾಗಿದ್ದವು. ಆದ್ರೆ ಈ ವಿಡಿಯೋ ಕುರಿತು ಊರ್ವಶಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. 

ನೀವ್ ಬಿಡಿ ಎರಡನೇ ಪೂನಂ ಪಾಂಡೆ; ಬಾಲಿವುಡ್ ನಟಿಗೆ ಹಿಂಗಾ ಅನ್ನೋದಾ?

Latest Videos
Follow Us:
Download App:
  • android
  • ios