ಇಂದು ಟಾಪ್ ನಟಿಯರಲ್ಲಿ (Actress) ಒಬ್ಬರಾಗಿರುವ ಇವರು, ಮಾಡೆಲ್ ಲೋಕದಲ್ಲಿಯೂ ಚಿರಪರಿಚಿತರು. ದರ್ಶನ್ ಸಿನಿಮಾದಲ್ಲಿ ನಟಿಯಾಗಿಯೂ ಇವರು ನಟಿಸಿದ್ದಾರೆ.

ಮುಂಬೈ: ಬಾಲಿವುಡ್ ಅಂಗಳದಲ್ಲಿ (Bollywood Cine Industry) ಎಲ್ಲರೂ ಶಾಕ್ ಪಡುವಂತಹ ಸುದ್ದಿಯೊಂದು ಹೊರ ಬಂದಿದೆ. ಇಂದು ಟಾಪ್ ನಟಿಯರಲ್ಲಿ (Actress) ಒಬ್ಬರಾಗಿರುವ ಇವರು, ಮಾಡೆಲ್ ಲೋಕದಲ್ಲಿಯೂ ಚಿರಪರಿಚಿತರು. ಕನ್ನಡದ ಐರವಾತ ಸಿನಿಮಾದಲ್ಲಿ (Mr. Airavata) ಈ ನಟಿ ನಟಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟಿ ಊರ್ವಶಿ ರೌತೆಲಾರದ್ದು (Actress Urvashi Rautela) ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಪಾದರಸದಂತೆ ಹರಿದಾಡುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ತರೇಹವಾರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋ ವೈರಲ್ (Viral Video) ಬೆನ್ನಲ್ಲೇ ಇದರ ಹಿಂದಿನ ಸತ್ಯವೂ ಸಹ ಬೆಳಕಿಗೆ ಬಂದಿದೆ. ಹಾಗಾದ್ರೆ ವೈರಲ್ ಆಗುತ್ತಿರುವ ವಿಡಿಯೋ ಹಿಂದಿನ ಅಸಲಿ ಕಹಾನಿ ಏನು? 

ಊರ್ವಶಿ ರೌತೆಲಾರ ಬಾತ್‌ರೂಮ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರೋದು ನಿಜ. ಆದ್ರೆ ಇದು ಸಿನಿಮಾದ ದೃಶ್ಯವಾಗಿದೆ ಎಂಬುವುದು ದೃಢವಾಗಿದೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಊರ್ವಶಿ ಕೊರಳಲ್ಲಿ ಮಾಂಗಲ್ಯ ಕಾಣಿಸುತ್ತದೆ. ಒಂದು ವೇಳೆ ನಿಜ ಜೀವನದ ವಿಡಿಯೋ ಆಗಿದ್ರೆ ಮದುವೆಯಾಗದೇ ಊರ್ವಶಿ ಮಾಂಗಲ್ಯ ಯಾಕೆ ಹಾಕಿಕೊಳ್ತಾರೆ ಎಂದು ನಟಿಯ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

ಅಭಿಮಾನಿಗಳಿಂದ ಬಂದ ಪ್ರತಿಕ್ರಿಯೆ ಏನು? 

ಹುಡುಗರೇ ರಿಲ್ಯಾಕ್ಸ್ ಆಗಿ, ಇದು ಸಿನಿಮಾವೊಂದರ ಕ್ಲಿಪ್ ಆಗಿದೆ. ಸಿನಿಮಾದ ವಿಡಿಯೋವನ್ನು ರಿಯಲ್ ಲೈಫ್ ದೃಶ್ಯ ಎಂದು ಬಿಂಬಿಸಿ ಶೇರ್ ಮಾಡುತ್ತಿರೋರಿಗೆ ನಾಚಿಕೆ ಆಗಬೇಕು. ವಿಡಿಯೋ ಅಸಲಿ ಸತ್ಯ ತಿಳಿದುಕೊಂಡು ಕಮೆಂಟ್ ಮಾಡಿ ಎಂದು ಊರ್ವಶಿ ರೌತೆಲಾ ಅಭಿಮಾನಿಗಳು ಕಿಡಿಗೇಡಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೆಲ ಬಳಕೆದಾರರು ವಿಡಿಯೋ ಲಿಂಕ್ ಶೇರ್ ಮಾಡಿ ಎಂದು ಬೇಡಿಕೊಂಡಿದ್ದಾರೆ.

ಶ್ರೀದೇವಿ ಮೂರನೇ ಮಗಳ ಬಗ್ಗೆ ನಿಮಗೆ ಗೊತ್ತಿದೆಯಾ? ಈ ಸೀಕ್ರೆಟ್ ರಿವೀಲ್ ಆಗಿದ್ದೇಗೆ?

ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕಿತ್ತಾಟ! 

ಕೆಲ ಬಳಕೆದಾರರು, ಈ ನಟಿಯ ಯಾವುದಾದ್ರೂ ಸಿನಿಮಾ ಬರುತ್ತಿರಬಹುದು. ಅದಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿದು ಚಿತ್ರದ ಪ್ರಚಾರ ನಡೆಸುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ವೈರಲ್ ಆಗುತ್ತಿರುವ ವಿಡಿಯೋಗೆ ನೂರಾರು ಕಮೆಂಟ್‌ಗಳು ಬಂದಿವೆ. ಕೆಲ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿಯೇ ಕಿತ್ತಾಡಿಕೊಂಡಿದ್ದಾರೆ.

ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ಊರ್ವಶಿ 

ಬಾಲಕೃಷ್ಣ ನಂದಮೂರಿ ಅವರ ಎನ್‌ಬಿಕೆ 109 ಚಿತ್ರದ ಶೂಟಿಂಗ್‌ನಲ್ಲಿ ಊರ್ವಶಿ ರೌತೆಲಾ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ವೇಳೆ ಊರ್ವಶಿ ಗಾಯಗೊಂಡಿದ್ದಾರೆ ಎಂದ ಸುದ್ದಿಯೊಂದು ಹೊರ ಬಂದಿತ್ತು. ಈ ವಿಷಯ ತಿಳಿದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಗಾಯಗೊಂಡಿದ್ದ ಊರ್ವಶಿಯವರಿಗೆ ಕೂಡಲೇ ಚಿಕಿತ್ಸೆ ಕೊಡಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿತ್ತು. ಇದೇ ಸಿನಿಮಾದಲ್ಲಿ ಬಾಬಿ ದಿಯೋಲ್, ದಲ್ಕರ್ ಸಲ್ಮಾನ್, ಅಫ್ತಾಬ್ ಶಿವದಾಸನಿ ಸೇರಿದಂತೆ ದೊಡ್ಡ ತಾರಾ ಬಳಗವನ್ನ ಎನ್‌ಬಿಕೆ 109 ಹೊಂದಿದೆ.

ಕತ್ರಿನಾ ಕೈಫ್​ ಹುಟ್ಟುಹಬ್ಬದಂದೇ ಮಂಚದ ವಿಷಯ ರಿವೀಲ್​ ಮಾಡಿದ ಪತಿ ವಿಕ್ಕಿ ಕೌಶಲ್​!

ಸನ್ನಿ ಡಿಯೋಲ್ ಮತ್ತು ಸಂಜಯ್ ದತ್ ಜೊತೆಗೆ ಹಾಲಿವುಡ್ ಬ್ಲಾಕ್‌ಬಸ್ಟರ್‌ ಎಕ್ಸ್‌ಪೆಂಡಬಲ್ಸ್ ಮತ್ತು ಬಾಪ್‌ನಲ್ಲಿಯೂ ಊರ್ವಶಿ ನಟಿಸಿದ್ದಾರೆ. ಇನ್ಸ್‌ಪೆಕ್ಟರ್ ಅವಿನಾಶ್ 2 ವೆಬ್‌ ಸಿರೀಸ್‌ನಲ್ಲಿ ರಣ್‌ದೀಪ್‌ ಹೂಡಾಗೆ ಊರ್ವಶಿ ಜೊತೆಯಾಗಿದ್ದಾರೆ. 

View post on Instagram