Asianet Suvarna News Asianet Suvarna News

ಈ ಹುಡುಗರ ವಿರುದ್ಧ ದೂರು ನೀಡುತ್ತಿದ್ದೀನಿ, ಹೆತ್ತವರ ಮಾಹಿತಿ ಕೊಟ್ಟವರಿಗೆ ಬಹುಮಾನ ಇದೆ; ಸಿಡಿದೆದ್ದ ಉರ್ಫಿ

ನಟಿ ಉರ್ಫಿ ಜಾವೇದ್ ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ 10 ಜನ ಹುಡುಗರ ವಿರುದ್ಧ ಸಿಡಿದೆದಿದ್ದಾರೆ. ಪೊಲೀಸ್ ದೂರು ನೀಡುವುದಾಗಿ ಉರ್ಫಿ ಹೇಳಿದ್ದಾರೆ.  

Urfi Javed slams a teenage group for calling and abusing her constantly sgk
Author
First Published Dec 5, 2022, 11:25 AM IST

ಬಿಗ್ ಬಾಸ್ ಒಟಿಟಿ ಮೂಲಕ ಖ್ಯಾತಿ ಗಳಿಸಿದ ಕಿರುತೆರೆ ನಟಿ ಮತ್ತು ಸಾಮಾಜಿಕ ಜಾಲತಾಣದ ಸ್ಟಾರ್ ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಬಿಗ್ ಬಾಸ್ ಒಟಿಟಿಗಿಂತ ಹೆಚ್ಚಾಗಿ ಉರ್ಫಿ ಚಿತ್ರವಿಚಿತ್ರ ಬಟ್ಟೆಗಳನ್ನು ಧರಿಸಿಯೇ ಹೆಚ್ಚು ಪ್ರಸಿದ್ಧಿ ಪಡೆದರು. ಇತ್ತೀಚಿಗಷ್ಟೆ ಖ್ಯಾತ ಲೇಖಕ ಚೇತನ್ ಭಗತ್ ವಿರುದ್ಧ ಸಿಡಿದೆದಿದ್ದ ಉರ್ಫಿ ಇದೀಗ 10 ಜನ ಹುಡುಗರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಉರ್ಫಿ ತನ್ನ ಡ್ರೆಸ್ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ. ಆದರೆ ಟ್ರೋಲ್ ಗಳಿಗೆ ಹೆಚ್ಚು ತಲೆಕಿಡಿಸಿಕೊಳ್ಳದ ಉರ್ಫಿ ತನ್ನ ವಿಚಿತ್ರ ಡ್ರೆಸ್ ಗಳ ಮೂಲಕ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಾರೆ, ಮಸ್ತ್ ಪೋಸ್ ನೀಡಿ ಸಂಭ್ರಮಿಸುತ್ತಾರೆ. ಟ್ರೋಲ್ ಗಳನ್ನು, ವಿವಾದಗಳವನ್ನು ಬುದ್ದಿವಂತಿಕೆಯಿಂದಲೇ ಹ್ಯಾಂಡಲ್ ಮಾಡುವ ಉರ್ಫಿ ಇದೀಗ ನಿರಂತರವಾಗಿ ಕರೆ ಮಾಡಿ ನಿಂದಿಸುವ ಮತ್ತು ಕಿರುಕುಳ ನೀಡುತ್ತಿದ್ದ ಯುವಕರ ಗುಂಪನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಪೋಲಿಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಉರ್ಫಿ ಜಾವೇದ್‌ಗೆ ಯುವಕರ ಗುಪೊಂದು ನಿರಂತರವಾಗಿ ಕರೆ ಮಾಡಿ ಕೆಟ್ಟ ಪದಗಳಿಂದ ನಿಂದಿಸುತ್ತಿದ್ದಾರೆ. ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಯುವಕರ ಫೋಟೋಗಳನ್ನು ಶೇರ್ ಮಾಡಿ ಉರ್ಫಿ ಕಿಡಿ ಕಾರಿದ್ದಾರೆ. ಪೊಲೀಸರಿಗೆ ದೂರು ನೀಡುತ್ತೀನಿ ಅವರ ಹೆತ್ತವರ ಬಗ್ಗೆ ಮಾಹಿತಿ ಇದ್ರೆ ತಿಳಿಸಿ ಎಂದು ಕೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಹುಡುಗರ ಫೋಟೋ ಸಮೇತ ಉರ್ಫಿ ದೀರ್ಘವಾಗಿ ಬರೆದುಕೊಂಡಿದ್ದಾರೆ. 

ಚೇತನ್ ಭಗತ್ ವಿರುದ್ಧ ಉರ್ಫಿ ಕಿಡಿ; '2 ಸ್ಟೇಟ್ಸ್' ಲೇಖಕನ ವಾಟ್ಸಪ್ ಚಾಟ್ ಲೀಕ್ ಮಾಡಿ ಸಿಡಿದೆದ್ದ ನಟಿ

'ಈ  ಹುಡುಗ ಮತ್ತು ಅವನ 10 ಸ್ನೇಹಿತರು ನನಗೆ ನಿರಂತರವಾಗಿ ಕರೆ ಮಾಡುತ್ತಿದ್ದಾರೆ.  ಕರೆ ಮಾಡಿ ನಿಂದಿಸುತ್ತಿದ್ದಾರೆ. ಈಗಿನ ಜನರೇಶನ್ ಮಕ್ಕಳಿಗೆ ಏನಾಗಿದೆ? ವಿನಾಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆ. ನಾನು ಆ 10 ಜನರ ವಿರುದ್ಧ ಪೊಲೀಸ್ ದೂರು ನೀಡುತ್ತಿದ್ದೀನಿ. ಯಾರಿಗಾದರೂ ಅವರ ಹೆತ್ತವರ ಬಗ್ಗೆ ತಿಳಿದಿದ್ದರೆ, ನನಗೆ ತಿಳಿಸಿ. ನಾನು ನಿಮಗೆ ಬಹುಮಾನ ನೀಡುತ್ತೇನೆ' ಎಂದು ಹೇಳಿದ್ದಾರೆ. 

'ಮುಂದಿನ ಪೀಳಿಗೆಯು ಅವನತಿ ಹೊಂದುತ್ತಿದೆ. ಈ ಮಕ್ಕಳು ತುಂಬಾ ಹೆಮ್ಮೆಯಿಂದ ಎಲ್ಲಾ ಶೇರ್ ಮಾಡುತ್ತಿದ್ದಾರೆ. ಈ ಹುಡುಗ ಮತ್ತು ಅವನ ಸ್ನೇಹಿತರು ಹುಡುಗಿಯರನ್ನು ನಿಂದಿಸುತ್ತಿದ್ದಾರೆ ಮತ್ತು ಹುಡುಗಿಯರ ಬಗ್ಗೆ ಕೆಟ್ಟಾದಾಗಿ ಮಾತನಾಡುತ್ತಾರೆ.  ಕ್ಷಮೆ ಕೇಳುತ್ತಿಲ್ಲ' ಎಂದು ಹೇಳಿದ್ದಾರೆ. 

Urfi Javed ಬೆತ್ತಲಾಗಿ ಬಲೆಯಲ್ಲಿ ಸಿಕ್ಕಾಕೊಂಡ ನಟಿ; ಬಿಡಿಸೋಕೆ ನಾನ್ ರೆಡಿ ಎಂದು ಕಾಲೆಳೆದ ನೆಟ್ಟಿಗರು

ಅಂದಹಾಗೆ ಸೆಲೆಬ್ರಿಟಿಗಳಿಗೆ ನೆಟ್ಟಿಗರಿಂದ ಮತ್ತು ಅನಾಮದೇಯ ವ್ಯಕ್ತಿಗಳಿಂದ ನಿಂದನೆ ಮತ್ತು ಕೆಟ್ಟ ಪದಳ ಬಳಕೆ, ಕಿರುಕುಳ  ಪ್ರಕರಣಗಳು ಇದೇ ಮೊದಲಲ್ಲ. ಈಗಾಗಲೇ ಅನೇಕ ನಟಿಯರು ಇಂತ ವ್ಯಕ್ತಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ದೂರು ನೀಡಿದ್ದಾರೆ. ಇದೀಗ ಉರ್ಫಿ ಕೂಡ ಅದೇ ಸಮಸ್ಯೆ ಎದುರಿಸುತ್ತಿದ್ದಾರೆ. ಈ 10 ಹುಡುಗರಿಗೆ ಬುದ್ದಿವಾದ ಹೇಳಿ ಸುಮ್ಮನಾಗುತ್ತಾರೋ ಅಥವಾ ಪೊಲೀಸರಿಗೆ ದೂರು ನೀಡುತ್ತಾರಾ ಕಾದು ನೋಡಬೇಕು. 

 

Follow Us:
Download App:
  • android
  • ios