Asianet Suvarna News Asianet Suvarna News

ರಾಖಿ ಹಾದಿಯಲ್ಲಿ ಉರ್ಫಿ: ಬದುಕಿದ್ದು ಈಗ ಸಾರ್ಥಕವಾಯ್ತು ಎಂದ ನೆಟ್ಟಿಗರ ಶ್ಲಾಘನೆ!

ಬಟ್ಟೆಯ ಸೆನ್ಸ್​ನಿಂದ ಸದಾ ತರಾಟೆಗೆ ಒಳಗಾಗುತ್ತಿರುವ ನಟಿ ಉರ್ಫಿ ಜಾವೇದ್​, ಈಗ ಬಹಳ ಶ್ಲಾಘನೆಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣವೇನು? 
 

Urfi Javed doles out Rs 500 note to poor kids post dinner at Bandra restaurant
Author
First Published May 12, 2023, 3:15 PM IST | Last Updated May 12, 2023, 3:15 PM IST

ನಟಿ ಉರ್ಫಿ ಜಾವೇದ್​ ಎಂದಾಕ್ಷಣ ಏನು ನೆನಪಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಫ್ಯಾಷನ್​ (Fashion) ಲೋಕದಲ್ಲಿ ಕಾಣಸಿಗದ ಎಲ್ಲಾ ವಸ್ತುಗಳನ್ನೂ ತನ್ನ ಮೈಮೇಲೆ ಹಾಕಿಕೊಂಡು ದಿನವೂ ವಿಚಿತ್ರ ವೇಷದಲ್ಲಿ ಕಾಣಿಸಿಕೊಳ್ಳುತ್ತಿರೋ ಈ ನಟಿ ದಿನವೂ ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ. ಇದೇ ಆಕೆಗೆ ಖುಷಿ. ಬಟ್ಟೆ ಹಾಕಿಕೊಂಡರೆ ಮೈಮೇಲೆಲ್ಲಾ ಗುಳ್ಳೆಗಳು ಏಳುತ್ತದೆ ಎಂದು ಹೇಳಿಕೊಂಡಿರೋ ಉರ್ಫಿ (Urfi Javed) ಅಂಗಾಂಗ ಪ್ರದರ್ಶನ ಮಾಡದೇ ಯಾವ ಬಟ್ಟೆಗಳನ್ನೂ ಹಾಕಿಕೊಳ್ಳುವುದಿಲ್ಲ. ಇದೇ ಕಾರಣಕ್ಕೆ ಹಲವರಿಂದ ಹಲವು ರೀತಿಯ ಟ್ರೋಲ್​ಗಳನ್ನು ಈಕೆ ಅನುಭವಿಸುತ್ತಲೇ ಇರುತ್ತಾರೆ. ಇವುಗಳ ಹೊರತಾಗಿಯೂ ಈಕೆಯ ಫ್ಯಾನ್ಸ್​ಗೂ ಕಮ್ಮಿಯೇನಿಲ್ಲ.  ನಟಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಅವರ ಡ್ರೆಸ್ಸಿಂಗ್ ಸೆನ್ಸ್‌ಗಾಗಿ ಆಗಾಗ್ಗೆ ಮೆಚ್ಚುಗೆಗೂ ಒಳಗಾಗುತ್ತಾರೆ. ಒಂದು ಕಡೆ ಡ್ರಾಮಾ ಕ್ವೀನ್​ ಎಂದು ಖ್ಯಾತಿ ಪಡೆದಿರುವ ರಾಖಿ ಸಾವಂತ್​ ಮದುವೆಯ ಕುರಿತು ಹೈಡ್ರಾಮಾ ಮಾಡಿ ಖ್ಯಾತಿ ಗಳಿಸಿದರೆ, ಉರ್ಫಿ ಬಟ್ಟೆಯಿಂದ ಟ್ರೋಲ್​ ಆದವರು.

ಆದರೆ ಇತ್ತೀಚೆಗೆ ರಾಖಿ ಸಾವಂತ್​ ಬಹಳ ಶ್ಲಾಘನೆಗೆ ಒಳಗಾಗಿದ್ದರು. ಸದಾ ರಾಖಿಯನ್ನು ನಿಂದಿಸುತ್ತಲೇ ಇದ್ದ ಟ್ರೋಲಿಗರು ಕೂಡ ರಾಖಿ ಅವರನ್ನು ಹಾಡಿ ಹೊರಳಿದ್ದರು. ಅದಕ್ಕೆ ಕಾರಣ ರಾಖಿ ಸಾಂವತ್​,  ರಸ್ತೆ ಬದಿ ಫುಟ್​ಪಾತ್​ನಲ್ಲಿ (Footpath) ಬಡ ಕುಟುಂಬವೊಂದಕ್ಕೆ ಸಹಾಯ ಮಾಡಿದ್ದರು.  ಪುಟ್ಟ ಬಾಲಕಿಯನ್ನು ಕರೆದುಕೊಂಡು ಚಿಕಿತ್ಸೆ ಕೊಡಲು ಹೋಗುತ್ತಿದ್ದ ಮಹಿಳೆಯ ಖಾತೆಗೆ ಅವರ ನಂಬರ್ ಕೇಳಿ 5 ಸಾವಿರ ಕಳುಹಿಸಿದ್ದರು ರಾಖಿ.  ಚಿಕಿತ್ಸೆಗೆ ಕುಟುಂಬದ ಕೈಯಲ್ಲಿ ಅಗತ್ಯ ಹಣ ಇರದ ಕಾರಣ ರಾಖಿ ಸಾವಂತ್ ನೆರವಾಗಿದ್ದರು. ಇದರ ವಿಡಿಯೋ ವೈರಲ್​ ಆಗಿದೆ.  ರಾಖಿ ಅವರ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಲಕಿಗೆ ಶೀಘ್ರ ಚಿಕಿತ್ಸೆ ಕೊಡಿಸಬೇಕು. ಆಕೆಗೆ ದಿನವೂ ಹಣ ಕಳುಹಿಸುವುದಾಗಿ ರಾಖಿ ಸಾವಂತ್ ಹೇಳಿದ್ದರು. ನೀವು ಒಬ್ಬಂಟಿ ಎಂದು ಭಾವಿಸಬೇಡಿ ಎಂದು ರಾಖಿ ಮಹಿಳೆಗೆ ಧೈರ್ಯ ಹೇಳಿದ್ದರು. ಈ ಸಂದರ್ಭದಲ್ಲಿ  ಬಾಲಕಿ ಹಾಗೂ ತಾಯಿಯೊಂದಿಗೆ ವಿಶೇಷಚೇತನ ಹಿರಿಯ ಮಹಿಳೆಯೂ ಇದ್ದುದನ್ನು ವಿಡಿಯೋದಲ್ಲಿ ನೋಡಬಹುದು. ಈ ನೆರವಿಗೆ ಕರಗಿಹೋದ ಹಿರಿಯ ಜೀವ,  ರಾಖಿ ಸಾವಂತ್ ಅವರನ್ನು ಹತ್ತಿರ ಕರೆದು ಮುತ್ತುಕೊಟ್ಟು ಭಾವುಕರಾಗಿರುವ ದೃಶ್ಯವಿದೆ (Emotional scene).  ನಟಿ ರಾಖಿ ಸಾವಂತ್ ಕೂಡಾ ತಿರುಗಿ ವೃದ್ಧೆಗೆ ಮುತ್ತುಕೊಟ್ಟಿದ್ದರು.

Drama Queen ರಾಖಿ ಸಾವಂತ್​ ಬಾಯಲ್ಲಿ ಇಂಥ ಮಾತಾ? ಮನಸೋತ ನೆಟ್ಟಿಗರು

ಇದೀಗ ಶ್ಲಾಘನೆಗೆ ಒಳಗಾಗುತ್ತಲೇ, ನಟಿ ಉರ್ಫಿ ಜಾವೇದ್​,  ಬಡ ಮಕ್ಕಳಿಗೆ ರಾ 500 ನೋಟು ನೀಡಿ ಗಮನ ಸೆಳೆದಿದ್ದಾರೆ.   ಬಾಂದ್ರಾದ ರೆಸ್ಟೋರೆಂಟ್‌ನಲ್ಲಿ ತಮ್ಮ ಸಹೋದರಿಯೊಂದಿಗೆ ಊಟ ಮಾಡಿದ ನಂತರ ಉರ್ಫಿ ಜಾವೇದ್ ಮನೆಗೆ ಹಿಂದಿರುಗುತ್ತಿರುವ ವೀಡಿಯೊವನ್ನು ವೂಮ್ಪ್ಲಾ ಎನ್ನುವವರು ಪೋಸ್ಟ್​ (Vedio post) ಮಾಡಿದ್ದಾರೆ. ಈ ಸಂದರ್ಭದಲ್ಲಿ  ನಟಿ ಬಣ್ಣಬಣ್ಣದ ಉಣ್ಣೆಯ ಎರಡು ತುಂಡುಗಳನ್ನು ಧರಿಸಿರುವುದನ್ನು ನೋಡಬಹುದು. ಆದರೆ  ಊಟದ ಬಳಿಕ  ರೆಸ್ಟೋರೆಂಟ್‌ನಿಂದ ಹೊರಬರುತ್ತಿದ್ದಂತೆ ನಟಿ ಬಡ ಮಕ್ಕಳಿಗೆ 500 ರೂ ನೋಟನ್ನು ನೀಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. 

ನೆಟಿಜನ್‌ಗಳು ಉರ್ಫಿ ಜಾವೇದ್ ಅವರ ನಡೆಯನ್ನು ಶ್ಲಾಘಿಸಿದ್ದಾರೆ ಮತ್ತು ಕಾಮೆಂಟ್ ವಿಭಾಗದಲ್ಲಿ ನಟಿಯನ್ನು ಶ್ಲಾಘಿಸಿದ್ದಾರೆ. ಒಬ್ಬರ ಬಟ್ಟೆಯಿಂದ ಅವರ ವ್ಯಕ್ತಿತ್ವವನ್ನು ಅಳೆಯುವುದು ಸರಿಯಲ್ಲ. ಉರ್ಫಿ ಅವರಲ್ಲಿಯೂ ಒಳ್ಳೆಯ ಮನಸ್ಸಿದೆ. ಅವರ  ಫ್ಯಾಷನ್ ಸೆನ್ಸ್ (Fashion sense) ಎಷ್ಟೇ ಕೆಟ್ಟದಾಗಿದ್ದರೂ, ಅವರ ಹೃದಯ ಒಳ್ಳೆಯದು ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ನೀವು ಬದುಕಿದ್ದು ಈಗ ಸಾರ್ಥಕವಾಯ್ತು ಎಂದು ಹಲವರು ಹೇಳುತ್ತಿದ್ದರು. 

ನಿಜವಾಗ್ಲೂ ಇದು 21ನೇ ಶತಮಾನನಾ ಎಂದು ಕೆಂಡಾಮಂಡಲವಾದ Urfi Javed!

 

 
 
 
 
 
 
 
 
 
 
 
 
 
 
 

A post shared by Voompla (@voompla)

Latest Videos
Follow Us:
Download App:
  • android
  • ios