Drama Queen ರಾಖಿ ಸಾವಂತ್​ ಬಾಯಲ್ಲಿ ಇಂಥ ಮಾತಾ? ಮನಸೋತ ನೆಟ್ಟಿಗರು

ಡ್ರಾಮಾ ಕ್ವೀನ್​ ಎಂದೇ ಖ್ಯಾತಿ ಪಡೆದಿರುವ ನಟಿ ರಾಖಿ ಸಾವಂತ್​ ಅವರೀಗ ಒಂದೊಳ್ಳೆ  ಕಾರ್ಯದಿಂದ ಬಹಳ ಫೇಮಸ್​ ಆಗುತ್ತಿದ್ದಾರೆ. ಏನದು? 
 

Heres how Rakhi Sawant helped a needy little girl

ರಾಖಿ ಸಾವಂತ್ (Rakhi Sawanth)​ ಎಂದಾಕ್ಷಣ ಎಲ್ಲರ ಕಣ್ಣೆದುರು ಬರುವುದು ಹೈಡ್ರಾಮಾ ಕ್ವೀನ್​. ಒಂದಿಲ್ಲೊಂದು ಡ್ರಾಮಾ ಮಾಡುತ್ತಾ ಇರುವಲ್ಲಿ ಫೇಮಸ್​ ಈಕೆ. ಮೈಸೂರಿನ ಯುವಕ ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ಇಸ್ಲಾಂ ಸ್ವೀಕರಿಸಿ ಫಾತೀಮಾ ಆಗಿರುವುದು ಈಗ ಹಳೆಯ ಸುದ್ದಿ. ಪತಿಯ ವಿರುದ್ಧ ವಿವಿಧ ಆರೋಪ ಮಾಡಿ ಅವರನ್ನು ಜೈಲಿಗೆ ಅಟ್ಟಿರೋ ನಟಿ ರಂಜಾನ್​ ಆಚರಣೆ ಮಾಡಿ, ಅದರ ಫೋಟೋ ಶೇರ್​ (Photo share) ಮಾಡಿಕೊಂಡಿದ್ದರು.  ರಂಜಾನ್ (Ramdan) ಸಮಯದಲ್ಲಿ ರಾಖಿ ಸಾವಂತ್ ಉಮ್ರಾಗೆ ಹೋಗುತ್ತೇನೆ ಎಂದು ಹೇಳುವ ಮೂಲಕವೂ ಸುದ್ದಿಯಾಗಿದ್ದರು. ಹಿಜಾಬ್​ ಧರಿಸಿ ಬಂದು ಇಸ್ಲಾಂ ಸ್ವೀಕರಿಸಿರುವ ಬಗ್ಗೆ ಜಗಜ್ಜಾಹೀರ ಮಾಡಿದ್ದರು. ವಿಡಿಯೋ  ಹಂಚಿಕೊಂಡಿದ್ದು,   ಅದರ ಶೀರ್ಷಿಕೆಯಲ್ಲಿ 'ನನ್ನ ಮೊದಲ ರೋಸಾ' ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ ಅವರು,  'ಎಲ್ಲರಿಗೂ ಸಲಾಮ್ ವಾಲೇಕುಮ್. ಇಂದು ನನ್ನ ಮೊದಲ ರೋಜಾ. ಮತ್ತು ನನ್ನನ್ನು ನಂಬಿರಿ, 4 ಗಂಟೆಯಿಂದ ಉಪವಾಸವಿದ್ದೇನೆ. ಆದರೂ  ನನಗೆ ಹಸಿವಾಗುತ್ತಿಲ್ಲ. ನಾನು ನಮಾಜ್ ಮಾಡುತ್ತಿದ್ದೇನೆ. ನಾನು ಪ್ರಾರ್ಥಿಸುತ್ತೇನೆ. ನಾನು ಒಳಗಿನಿಂದ ತುಂಬಾ ನಿರಾಳವಾಗಿದ್ದೇನೆ ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ' ಎಂದಿದ್ದರು.

ಇವೆಲ್ಲಾ ಡ್ರಾಮಾಗಳ ಮಧ್ಯೆ, ರಾಖಿ ಸಾವಂತ್​ ಈಗ ಒಂದೊಳ್ಳೆ ವಿಷಯದ ಕುರಿತು ಚರ್ಚೆಗೆ ಒಳಗಾಗಿದ್ದಾರೆ. ಕೇವಲ ವಿವಾದಗಳಿಂದಲೇ ಬದುಕು ಸವೆಸಿ ಖುಷಿ ಪಡುತ್ತಿರೋ ನಟಿ ಈಗ ಒಳ್ಳೆಯ ಕೆಲಸದ ಮೂಲಕ ಸದ್ದು ಮಾಡುತ್ತಿದ್ದಾರೆ. ಹೌದು.  ಇವರು ಈಚೆಗೆ  ರಸ್ತೆ ಬದಿ ಫುಟ್​ಪಾತ್​ನಲ್ಲಿ (Footpath) ಬಡ ಕುಟುಂಬವೊಂದಕ್ಕೆ ಸಹಾಯ ಮಾಡಿದ್ದಾರೆ ರಾಖಿ. ಪುಟ್ಟ ಬಾಲಕಿಯನ್ನು ಕರೆದುಕೊಂಡು ಚಿಕಿತ್ಸೆ ಕೊಡಲು ಹೋಗುತ್ತಿದ್ದ ಮಹಿಳೆಯ ಖಾತೆಗೆ ಅವರ ನಂಬರ್ ಕೇಳಿ 5 ಸಾವಿರ ಕಳುಹಿಸಿದ್ದಾರೆ ರಾಖಿ ಸಾವಂತ್. ಚಿಕಿತ್ಸೆಗೆ ಕುಟುಂಬದ ಕೈಯಲ್ಲಿ ಅಗತ್ಯ ಹಣ ಇರದ ಕಾರಣ ರಾಖಿ ಸಾವಂತ್ ನೆರವಾಗಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ.  ರಾಖಿ ಅವರ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮೊದಲ ರೋಜಾದ ವೀಡಿಯೋ ಶೇರ್ ಮಾಡಿದ ರಾಖಿ ಸಾವಂತ್, ಕಾಲೆಳೆದ ನೆಟ್ಟಿಗರು!

ಬಾಲಕಿಗೆ ಶೀಘ್ರ ಚಿಕಿತ್ಸೆ ಕೊಡಿಸಬೇಕು. ಆಕೆಗೆ ದಿನವೂ ಹಣ ಕಳುಹಿಸುವುದಾಗಿ ರಾಖಿ ಸಾವಂತ್ ಹೇಳಿದ್ದಾರೆ. ನೀವು ಒಬ್ಬಂಟಿ ಎಂದು ಭಾವಿಸಬೇಡಿ ಎಂದು ರಾಖಿ ಮಹಿಳೆಗೆ ಧೈರ್ಯ ಹೇಳಿದರು. ಈ ಸಂದರ್ಭದಲ್ಲಿ  ಬಾಲಕಿ ಹಾಗೂ ತಾಯಿಯೊಂದಿಗೆ ವಿಶೇಷಚೇತನ ಹಿರಿಯ ಮಹಿಳೆಯೂ ಇದ್ದುದನ್ನು ವಿಡಿಯೋದಲ್ಲಿ ನೋಡಬಹುದು. ಈ ನೆರವಿಗೆ ಕರಗಿಹೋದ ಹಿರಿಯ ಜೀವ,  ರಾಖಿ ಸಾವಂತ್ ಅವರನ್ನು ಹತ್ತಿರ ಕರೆದು ಮುತ್ತುಕೊಟ್ಟು ಭಾವುಕರಾಗಿರುವ ದೃಶ್ಯವಿದೆ (Emotional scene).  ನಟಿ ರಾಖಿ ಸಾವಂತ್ ಕೂಡಾ ತಿರುಗಿ ವೃದ್ಧೆಗೆ ಮುತ್ತುಕೊಟ್ಟಿದ್ದಾರೆ.  

ಈ ಬಗ್ಗೆ ರಾಖಿ ಅವರನ್ನು ಪ್ರಶ್ನಿಸಿದಾಗ, ನಾಳೆ ನಾನು ಬದುಕಿರುತ್ತೇನೋ, ಇಲ್ಲವೋ ಗೊತ್ತಿಲ್ಲ. ಜೀವ ಇರುವಾಗಲೇ ಉಪಕಾರ ಮಾಡಬೇಕು ಎಂದುಕೊಂಡಿದ್ದೇನೆ. ನಾನು ಯಾವಾಗಲೂ ಸಮಾಜಕ್ಕೆ ಹಿಂದಿರುಗಿಸಿ ಕೊಡುವುದರಲ್ಲಿ ನಂಬಿಕೆ ಇಟ್ಟವಳು.  ನಾನು ಸತ್ತ ಮೇಲೆ ಜಗತ್ತು  ನಾನು ಬಿಟ್ಟು ಹೋದ ಆಸ್ತಿ ಹಿಂದೆ ಬೀಳುತ್ತದೆ. ಆದರೆ ಬದುಕಿರುವಾಗ ಇಂಥ  ಪುಣ್ಯ ಕಾರ್ಯ ಮಾಡಿದರೆ, ನಾಳೆ ಜಗತ್ತು ಆ ಮೂಲಕ ನನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದಿದ್ದಾರೆ  ರಾಖಿ. ದೇವರು (God)ಪ್ರತಿಯೊಬ್ಬರನ್ನು ಪರೀಕ್ಷಿಸುತ್ತಾರೆ. ದೇವರು ಆ ಪುಟ್ಟ ಬಾಲಕಿ ರೂಪದಲ್ಲಿಯೇ ಬಂದಿರಬಹುದು. ನಿಷ್ಠೆ ಪರೀಕ್ಷಿಸಲು ಬಂದಿರಬಹುದು. ತಾನು ದುಡಿಯುವುದನ್ನು ಅಗತ್ಯ ಇರುವವರಿಗೆ ಹಾಗೂ ಬಡವರಿಗೆ ನೀಡುವುದಲ್ಲಿ ನಾನು ನಂಬಿಕೆ ಇಡುತ್ತೇನೆ ಎಂದಿರುವ ನಟಿಯ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಕೆಲವು ಜನರು ನಟಿಯ ಈ ಒಳ್ಳೆಯ ಗುಣವನ್ನು ಕೂಡ ಪ್ರಚಾರದ ಗಿಮಿಕ್​ ಎಂದು ಹೇಳಿದ್ದರೆ, ಹಲವರು ನಟಿ ಆಡಿರುವ ಮಾತಿನಲ್ಲಿ ಎಷ್ಟು ಸತ್ಯಾಂಶ ಇದೆ ಎಂದು ಆಕೆಯನ್ನು ಶ್ಲಾಘಿಸುತ್ತಿದ್ದಾರೆ. ರಾಖಿ ಸಾವಂತ್ ಶರಾಬಿ ಹಾಡಿನಲ್ಲಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ದರು. ಕಂಗನಾ ರಣಾವತ್ ಅವರ ಲಾಕಪ್ 2ನಲ್ಲಿ ರಾಖಿ ಸಾವಂತ್ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸಲ್ಮಾನ್​ ಖಾನ್​ ಅವರಂತೆ,  ರಾಖಿ ಸಾವಂತ್ ಅವರಿಗೇ ಈ ಮೇಲ್ ಕಳುಹಿಸಲಾಗಿದ್ದು ಗ್ಯಾಂಗ್​ಸ್ಟರ್ ಪಟ್ಟಿಯಲ್ಲಿ ನಟಿಯ ಹೆಸರೂ ಇರುವುದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಬಿಷ್ಣೋಯ್ ಗ್ಯಾಂಗ್ ಸದಸ್ಯರು ಈ ವಿಷಯದಿಂದ ನೀನು ದೂರ ಇರು ಎಂದು ವಾರ್ನ್ ಮಾಡಿದ್ದಾರೆ.

ಪತಿ ಆದಿಲ್​ ಖಾನ್​ಗೆ ರಾಖಿ ಸಾವಂತ್ ಕ್ಷಮಾಪಣೆ! ರಂಜಾನ್ ಬರ್ತಿದೆ, ರಿಲೀಸ್ ಮಾಡಿ ಎಂದ ನಟಿ

Latest Videos
Follow Us:
Download App:
  • android
  • ios