Must Watch Indian Movies: ಭಾರತೀಯ ಚಿತ್ರರಂಗದಲ್ಲಿ 2025, 2026ರಲ್ಲಿ ರಿಲೀಸ್ ಆಗಲಿರುವ ಬಹುನಿರೀಕ್ಷಿತ ಸಿನಿಮಾಗಳಿವು
2025 ಮತ್ತು 2026ರಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ದೊಡ್ಡಮಟ್ಟದ ಸಿನಿಮಾಗಳು ರಿಲೀಸ್ ಆಗಲಿವೆ. ಹಾಗಾದರೆ ಆ ಸಿನಿಮಾಗಳು ಯಾವುವು?
ಬಾರ್ಡರ್ 2 ( ರಿಲೀಸ್: ಜನವರಿ 23, 2026)
1997ರ ಯುದ್ಧ ಕ್ಲಾಸಿಕ್‌ನ ಸೀಕ್ವೆಲ್, ಸನ್ನಿ ಡಿಯೋಲ್, ಆಯುಷ್ಮಾನ್ ಖುರಾನಾ ನಟಿಸಿದ್ದಾರೆ. ಈ ದೇಶಭಕ್ತಿಯ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಸಾಧಿಸಲಿದೆ, ₹800 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆ ಇದೆ. ಅನುರಾಗ್ ಸಿಂಗ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.
ರಾಮಾಯಣ (ರಿಲೀಸ್: ದೀಪಾವಳಿ 2026)
ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯದಲ್ಲಿ ರಣಬೀರ್ ಕಪೂರ್ ಶ್ರೀ ರಾಮನಾಗಿ ನಟಿಸಿದ್ದಾರೆ. ಯಶ್ ಅವರು ರಾವಣನಾಗಿ, ಸಾಯಿ ಪಲ್ಲವಿ ಅವರು ಸೀತೆಯಾಗಿ ನಟಿಸಿದ್ದಾರೆ. ದೊಡ್ಡ ಬಜೆಟ್, ಸುಂದರ ಸೀನ್‌ಗಳು ಕೂಡ ಇರಲಿವೆ, ಇದು ವಿಶ್ವಾದ್ಯಂತ ₹2000 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯಿದೆ.
ಕಿಂಗ್ (ರಿಲೀಸ್: 2026, ದಿನಾಂಕ ಖಚಿತವಾಗಿಲ್ಲ)
ಶಾರುಖ್ ಖಾನ್, ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ಸುಜೊಯ್ ಘೋಷ್‌ರ ಆಕ್ಷನ್ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಸಿದ್ದಾರ್ಥ್ ಆನಂದ್ ಅವರು ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ₹1000 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯನ್ನು ಹೊಂದಿದ್ದಾರೆ.
ಎನ್‌ಟಿಆರ್-ನೀಲ್ ( ರಿಲೀಸ್: ಜನವರಿ 9, 2026)
ಜೂನಿಯರ್ ಎನ್‌ಟಿಆರ್ ಅವರು ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡೋದಾಗಿ ಹೇಳಿದ್ದಾರೆ. ₹1000 ಕೋಟಿ ಗಳಿಕೆಯ ನಿರೀಕ್ಷೆಯಿದ್ದು. ಕೆಜಿಎಫ್ 1, 2 ಭಾಗಗಳ ಮೂಲಕ ಹಿಟ್ ಕೊಟ್ಟಿರುವ ಈ ಬಾರಿ ಮತ್ತೊಂದು ಹಿಟ್ ಕೊಡ್ತಾರಾ?
ಟಾಕ್ಸಿಕ್ ( ರಿಲೀಸ್: 2026, ದಿನಾಂಕ ಖಚಿತವಾಗಿಲ್ಲ)
KGF ನಂತರ ಯಶ್ ಅವರು ಈ ಸಿನಿಮಾ ಘೋಷಿಸಿದ್ದಾರೆ. ಇದು ದೊಡ್ಡ ಪ್ರಾಜೆಕ್ಟ್ ಆಗಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ ಎನ್ನಲಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಗೋವಾದ ಡ್ರಗ್ ಕಾರ್ಟೆಲ್ ಜಗತ್ತಿನಲ್ಲಿ ನಡೆಯುವ ಈ ಆಕ್ಷನ್ ಸಿನಿಮಾವು ₹500 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಹಾಲಿವುಡ್ ತಂತ್ರಜ್ಞರು, ಕಲಾವಿದರು ಕೂಡ ನಟಿಸಲಿದ್ದಾರೆ ಎನ್ನಲಾಗಿದೆ.
ಲವ್ ಆಂಡ್ ವಾರ್ ( ರಿಲೀಸ್: ಮಾರ್ಚ್ 20, 2026)
ಸಂಜಯ್ ಲೀಲಾ ಭನ್ಸಾಲಿಯ ರೊಮ್ಯಾಂಟಿಕ್ ಮಹಾಕಾವ್ಯದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ವಿಕ್ಕಿ ಕೌಶಾಲ್ ನಟಿಸಿದ್ದಾರೆ, ವಿಶ್ವಾದ್ಯಂತ ₹500 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯಿದೆ.
ಬ್ಯಾಟಲ್ ಆಫ್ ಗಲ್ವಾನ್ ( ರಿಲೀಸ್: 2025, ದಿನಾಂಕ ಖಚಿತವಾಗಿಲ್ಲ)
ದೇಶಭಕ್ತಿಯ ಈ ಸಿನಿಮಾವು ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ₹500 ಕೋಟಿಗಿಂತ ಹೆಚ್ಚು ಗಳಿಕೆಯ ನಿರೀಕ್ಷೆಯಿದೆ.
ಪೆಡ್ಡಿ (ರಿಲೀಸ್: 2025, ದಿನಾಂಕ ಖಚಿತವಾಗಿಲ್ಲ)
ರಾಮ್ ಚರಣ್ ನಟನೆಯ ಕ್ರೀಡಾ ಆಕ್ಷನ್ ಸಿನಿಮಾವಾಗಿದೆ. ಈ ಸಿನಿಮಾವು ₹300 ಕೋಟಿ ಗಳಿಕೆಯ ನಿರೀಕ್ಷೆಯಿದೆ.
ಸ್ಪಿರಿಟ್ ( ರಿಲೀಸ್: 2026, ದಿನಾಂಕ ಖಚಿತವಾಗಿಲ್ಲ)
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿರುವ ಆಕ್ಷನ್ ರೊಮ್ಯಾಂಟಿಕ್ ಸಿನಿಮಾವಾಗಿದೆ. ದೊಡ್ಡ ಬಾಕ್ಸ್ ಆಫೀಸ್ ಗಳಿಕೆ ಆಗಬಹುದು ಎಂಬ ನಿರೀಕ್ಷೆ ಇದೆ.
