ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಉಮಾಪತಿ ಗೌಡ, ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಹಲಗಡಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ದರ್ಶನ್ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು
ಉತ್ತರ ಕನ್ನಡ, ಕಾರವಾರ (ಏ.12): ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಉಮಾಪತಿ ಗೌಡ, ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರದ ಹಲಗಡಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ದರ್ಶನ್ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು.
ಕರೆ ಒಕ್ಕಲಿಗರ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಮಾಪತಿಗೌಡ, ತಮ್ಮ ಭಾಷಣದಲ್ಲಿ ಯಾವುದೇ ಹೆಸರನ್ನು ಉಲ್ಲೇಖಿಸದೇ ಆದರೆ ಸ್ಪಷ್ಟ ಗುರಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿರು.
ಇದನ್ನೂ ಓದಿ: ದರ್ಶನ್ ಕೋರ್ಟ್‌ಗೆ ಚಕ್ಕರ್, ಸಿನಿಮಾಗೆ ಹಾಜರ್; ಮುಂದೈತೆ ಮಾರಿಹಬ್ಬ
ಹೇಳಿದ್ದೇನು?
'ನಾನಿವತ್ತು ಈ ವೇದಿಕೆಯಲ್ಲಿ ನಿಂತಿದ್ದೇನೆಂದರೆ, ಅನೇಕ ಕಷ್ಟ-ತೊಂದರೆಗಳನ್ನು ಎದುರಿಸಿದ್ದೇನೆ. ತಂಟೆ-ತಕರಾರುಗಳನ್ನು ಎದುರಿಸಿದ್ದೇನೆ. ಕೆಲವರು ಕೇಳ್ತಿದ್ದರು, ದೊಡ್ಡವರನ್ನು ಎದುರು ಹಾಕ್ಕೊಂಡು ಏನ್ ಮಾಡ್ತೀಯಾ ಅಂತ. ಆದರೆ ನಾನು ಯಾರನ್ನೂ ಎದುರು ಹಾಕ್ಕೊಳ್ಳಲಿಲ್ಲ, ನನ್ನವರೇ ಎದುರು ಹಾಕ್ಕೊಡ್ತಾರೆ' ಎಂದರು.
ನಾವು ಒಳ್ಳೆಯ ಕೆಲಸ ಮಾಡಿದ್ರೆ ಯಾರಿಗೂ ಭಯ ಬೀಳಬೇಕಿಲ್ಲ. ಒಳ್ಳೆಯ ಕೆಲಸ ಮಾಡೋರಿಗೆ ಭಯ ಬೀಳಬೇಕಷ್ಟೇ. ನಾನು ಯಾವುದಕ್ಕೂ ಭಯಪಡಲ್ಲ, ನನ್ನ ಭಯ ಬೀಳಿಸೋ ಶಕ್ತಿ ಯಾರಿಗೂ ಇಲ್ಲ. ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಿದ್ದೇನೆ. ಸಾಯೋವರೆಗೂ ಇನ್ನೊಬ್ಬರಿಗೆ ಮಾದರಿಯಾಗಿಯೇ ಇರ್ತೀನಿ ಎಂದುರು. ಮುಂದುವರೆದು, ಬದುಕಿನಲ್ಲಿ ಎರಡು ವರ್ಗದ ಜನ ಇರ್ತಾರೆ. ಒಂದು, ಇನ್ನೊಬ್ಬರಿಗೆ ಮಾದರಿಯಾಗಿರೋರು. ಮತ್ತೊಬ್ಬರು ಎಚ್ಚರಿಕೆ ಕೊಡೋವಂತವರು. ಜೈಲಿಗೆ ಹೋಗಿ ಬಂದವರು, ಇನ್ನೊಬ್ಬರಿಗೆ ತೊಂದರೆ ಕೊಟ್ಟು ನಾಶವಾಗೋರು ಎಚ್ಚರಿಕೆ ಕೊಡೋವಂತವರು. ನಿಮ್ಮ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಅಂತ ನೀವೇ ನಿರ್ಧರಿಸಿ ಎಂದು ಉಮಾಪತಿ ತಿಳಿಸಿದರು.
ಇದನ್ನೂ ಓದಿ: ವಾಮನ ಸಿನಿಮಾ ಕುರಿತು ದರ್ಶನ್ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ: ಧನ್ವೀರ್
ನಮಗೆ ಬಂದ ತೊಂದರೆಗೆ ಯಾವತ್ತೋ ಸೂಸೈಡ್ ಮಾಡ್ಕೊಬೇಕಿತ್ತು. ಆದ್ರೆ, ನಾನು ಯಾವುದಕ್ಕೂ ಭಯಪಟ್ಟಿಲ್ಲ ಎಂದು ಹೇಳುವ ಮೂಲಕ ದರ್ಶನ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ ಉಮಾಪತಿ, ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿದರು. ಸದ್ಯ ಉಮಾಪತಿ ಗೌಡರ ಈ ಹೇಳಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಹೆಚ್ಚಿನ ವಿವರಗಳಿಗಾಗಿ ಇದೇ ಸುದ್ದಿಯನ್ನು ಫಾಲೋ ಮಾಡಿ!
