ಕಾಂಟ್ರವರ್ಸಿ ಹೆಚ್ಚಿಸಿದ ಕಾಲಿವುಡ್‌ ಸಿನಿಮಾ 800ನಲ್ಲಿ ನಟಿಸುವುದಿಲ್ಲ ಎಂದು ತಮಿಳು ನಟ ವಿಜಯ್ ಸೇತುಪತಿ ಹೇಳಿಕೆ ನೀಡಿದ ಬೆನ್ನಲ್ಲೇ ನಟನ ಅಪ್ರಾಪ್ತ ಮಗಳ ಮೇಲೆ ರೇಪ್ ಬೆದರಿಕೆ ಬಂದಿದೆ. ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ಸಿನಿಮಾ ಆಗಿದೆ 800.

ಸಿನಿಮಾ ಎನೌನ್ಸ್ ಆದಾಗಿನಿಂದಲೂ ಸಿಕ್ಕಾಪಟ್ಟೆ ಕಾಂಟ್ರವರ್ಸಿ ಮಾಡಿರೋ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಪೋಸ್ಟರ್ ಕೂಡಾ ವೈರಲ್ ಆಗಿತ್ತು. ಆದರೆ ಈಗ ಸಡನ್ನಾಗಿ ನಟ ಸಿನಿಮಾದಿಂದ ಹೊರ ಬಂದಿದ್ದಾರೆ.

ಧೋನಿ ಪುತ್ರಿಗೆ ರೇಪ್ ಬೆದರಿಕೆ ಹಾಕಿದ ಅಪ್ರಾಪ್ತನ ವಶಕ್ಕೆ ಪಡೆದ ಪೊಲೀಸ್!

ಸಿನಿಮಾ ಬ್ಯಾನ್ ಮಾಡಬೇಕೆಂಬ ಸಾಕಷ್ಟು ಒತ್ತಾಯ ಎದುರಾಗಿದ್ದು, ಸಿನಿಮಾ ಎನೌನ್ಸ್ ಆದ ನಂತರ ಸ್ವತಃ ಮುತ್ತುಯ್ಯ ಮುರಳೀಧರನ್ ಅವರೇ ಹೇಳಿಕೆ ಪ್ರಕಟಿಸಿದ್ದರು. ಇದೀಗ ನಟನ ಪುತ್ರಿಗೆ ಬೆದರಿಕೆ ಬಂದಿರುವುದನ್ನು ಬಹಳಷ್ಟು ಜನರು ಖಂಡಿಸಿದ್ದಾರೆ.

800 ಕಾಂಟ್ರವರ್ಸಿ: ಶ್ರೀಲಂಕಾ ಕ್ರಿಕೆಟ್ ಕೋಚ್ ಮುತ್ತಯ್ಯ ರಿಯಾಕ್ಷನ್ ಇದು

ಶ್ರೀಲಂಕಾದಲ್ಲಿ ತಮಿಳರ ಜೀನವದ ಕಷ್ಟ ವಿಜಯ್ ಸೇತುಪತಿ ತಿಳಿಯಬೇಕಾದ್ರೆ ಆತನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಬೇಕು ಎಂದು ಟ್ವೀಟ್ ಮಾಡಲಾಗಿದೆ. ರಿತಿಕ್ ಎಂಬ ಹೆಸರಿನ ಟ್ವಿಟರ್ ಬಳಕೆದಾರ ಈ ರೀತಿ ಟ್ವೀಟ್ ಮಾಡಿದ್ದಾನೆ.

ತಮಿಳು ನಿರ್ದೇಶಕ ಎಂ.ಎಸ್. ಶ್ರೀಪತಿ, ಮುತ್ತಯ್ಯ ಮುರಳಿಧರನ್ ಅವರ ಬಯೋಪಿಕ್‌ಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದರು. ಮುರಳಿಧರನ್ ಪಾತ್ರಕ್ಕೆ ನಟ ವಿಜಯ್ ಸೇತುಪತಿ ಜೀವ ತುಂಬಲಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಮುತ್ತಯ್ಯ ಮುರಳಿಧರನ್ ಅತಿ ಹೆಚ್ಚು 800 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಇದೇ ಹೆಸರನ್ನು ಚಿತ್ರಕ್ಕೆ ಇಡಲಾಗಿತ್ತು