ಗಂಗಾವತಿ: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹೈಡ್ರಾಮಾ, ಸಿಎಂ ಎದುರೇ ಚೇರ್ ತೂರಾಟ..!
ನಾನು ಒಂದು ಪಕ್ಷದಲ್ಲಿ ಇದ್ದರೆ ಮೋಸ ಮಾಡುವುದಿಲ್ಲ. ನಾನು ಎಂಎಲ್‌ಎ ಚುನಾವಣೆಯಲ್ಲಿ ನಿಂತಾಗ ಮೋಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳನ್ನು ಮಾಡಿದವರು ದುಡ್ಡು ಡೀಲಿಂಗ್ ಮಾಡಿದವರು. ನಾನು ಕರ್ನಾಟಕದಲ್ಲಿ ಡಿಜಿಟಲ್ ಮೆಂಬರ್ ಶಿಪ್ ನಲ್ಲಿ ನಂ 1 ಇದ್ದೆ. 80 ಸಾವಿರ ಡಿಜಿಟಲ್ ಮೆಂಬರ್ ಶಿಪ್ ಮಾಡಿದ್ದೆ. ಗಂಗಾವತಿಯಲ್ಲಿ ಯಾರಾರು ಏನೇನು ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ: ಇಕ್ಬಾಲ್ ಅನ್ಸಾರಿ
ಕೊಪ್ಪಳ(ಏ.30): ಸಿಎಂ ಸಿದ್ದರಾಮಯ್ಯ ಅವರ ಎದುರೇ ಗಂಗಾವತಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಸಮಾಧಾನ ಹೊರಹಾಕಿದ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಂದು(ಮಂಗಳವಾರ) ನಡೆದಿದೆ. '
ಇಂದು ಗಂಗಾವತಿ ನಗರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ತನ್ನ ಸೋಲಿಗೆ ಕಾರಣವಾದವರ ವಿರುದ್ಧ ಇಕ್ಬಾಲ್ ಅನ್ಸಾರಿ ಅಸಮಾಧಾನ ಹೊರಹಾಕಿದ್ದಾರೆ. ನಾನು ಒಂದು ಪಕ್ಷದಲ್ಲಿ ಇದ್ದರೆ ಮೋಸ ಮಾಡುವುದಿಲ್ಲ. ನಾನು ಎಂಎಲ್‌ಎ ಚುನಾವಣೆಯಲ್ಲಿ ನಿಂತಾಗ ಮೋಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳನ್ನು ಮಾಡಿದವರು ದುಡ್ಡು ಡೀಲಿಂಗ್ ಮಾಡಿದವರು. ನಾನು ಕರ್ನಾಟಕದಲ್ಲಿ ಡಿಜಿಟಲ್ ಮೆಂಬರ್ ಶಿಪ್ ನಲ್ಲಿ ನಂ 1 ಇದ್ದೆ. 80 ಸಾವಿರ ಡಿಜಿಟಲ್ ಮೆಂಬರ್ ಶಿಪ್ ಮಾಡಿದ್ದೆ. ಗಂಗಾವತಿಯಲ್ಲಿ ಯಾರಾರು ಏನೇನು ಮಾಡಿದ್ದಾರೆ ಎಲ್ಲರಿಗೂ ಗೊತ್ತಿದೆ. ನಾನು ಯಾರಿಗೂ ಹೆದರುವನು ಅಲ್ಲ. ನನಗೆ ರಾಜಕೀಯ ಮುಖ್ಯವಲ್ಲ. ನಮ್ಮ ಅಪ್ಪ ರಾಜಕೀಯ ಮಾಡಲು ಹುಟ್ಟಿಲ್ಲ. ರಾಜಕೀಯ ಮಾಡಲು ಕೊಟ್ಟರೆ ಮಾಡ್ತೀನಿ. ನಾನು ಲೂಟಿ ಮಾಡುವನು ಅಲ್ಲ. ಪರ್ಸೆಟೆಂಜ್ ತಗೆದುಕೊಳ್ಳುವನು ಅಲ್ಲ. ಯಾರು ಮೋಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಯಾರೇ ಇರಲಿ ಸ್ವಲ್ಪ ಎಚ್ಚರದಿಂದ ಇರಿ. ಪ್ರಜ್ಞೆಯಿಂದ ಇರಬೇಕೆದು ಅನ್ಸಾರಿ ಖಡಕ್ ಆಗಿ ಹೇಳಿದ್ದಾರೆ.
ದೇವೇಗೌಡರ ಸಭೆಗೆ ನುಗ್ಗಿ ಎಚ್ಡಿಕೆ ವಿರುದ್ಧ ಘೋಷಣೆ ಕೂಗಿದ ಕೈ ಕಾರ್ಯಕರ್ತೆಯರು!
ಅನ್ಸಾರಿ ಮಾತಿನ ವೇಳೆ ಮಾಜಿ ಎಂಎಲಲ್‌ಸಿ ಎಚ್.ಆರ್. ಶ್ರೀನಾಥ್ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಿಎಂ ಎದುರು ಹೈಡ್ರಾಮಾ
ಕೊಪ್ಪಳದ ಗಂಗಾವತಿ ನಗರದಲ್ಲಿ ಜರುಗಿದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಹೈಡ್ರಾಮಾವೇ ನಡೆದಿದೆ. ಹೌದು, ವಿರೋಧದ ನಡುವೆ ವೇದಿಕೆಯಲ್ಲಿ ಮಾತನಾಡಲು ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ್ ಬಂದಿದ್ದರು. ಶ್ರೀನಾಥ್‌ಗೆ ಮಾತನಾಡಲು ಅವಕಾಶ ಕೊಡಬಾರದೆಂದು ಇಕ್ಬಾಲ್ ಅನ್ಸಾರಿ ಪಟ್ಟು ಹಿಡಿದಿದ್ದರು. ಶ್ರೀನಾಥ್ ಮಾತನಾಡುತ್ತಲೇ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಕಾರ್ಯಕ್ರಮದಲ್ಲಿ ಚೇರ್ ತೂರಾಟ ನಡೆಸಲಾಗಿದೆ.
ಶ್ರೀನಾಥ್ ಭಾಷಣದ ವೇಳೆ ಚೇರ್ ತೂರಾಟ ನಡೆಸಲಾಗಿದೆ. ಸಿಎಂ ಮಾತಿಗೂ ಬೆಲೆ ಕೊಡದೆ ಶ್ರೀನಾಥ್ ಭಾಷಣ ಮಾಡಲು ಮುಂದಾಗಿದ್ದರು. ಶ್ರೀನಾಥ್ ಇಕ್ಬಾಲ್ ಅನ್ಸಾರಿ ವಿರೋದ ಬಣದಲ್ಲಿನ ಗುರುತಿಸಿಕೊಂಡ ವ್ಯಕ್ತಿಯಾಗಿದ್ದಾರೆ. ಅನ್ಸಾರಿ ಮಾತಿಗೆ ಎದುರೇಟು ಕೊಡಲು ಶ್ರೀನಾಥ್ ಭಾಷಣಕ್ಕೆ ಮುಂದಾಗಿದ್ದರು.