ಕಾಲಿವುಡ್ ಹೀರೋ ವಿಜಯ್ ಸೇತುಪತಿಯ ಲೇಟೆಸ್ಟ್ ಸಿನಿಮಾ 800ಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿದೆ. ಬಹಳಷ್ಟು ಜನರು ಈಗಾಗಲೇ ಸಿನಿಮಾವನ್ನು ಬಾಯ್ಕಾಟ್‌ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಸಂದರ್ಭ ಈ ವಿಷಯದ ಬಗ್ಗೆ ಕ್ರಿಕೆಟ್ ಕೋಚ್ ಮುತ್ತಯ್ಯ ಮುರಳೀಧರ ಅವರು ತಮ್ಮ ಹೇಳಿಕೆ ಪ್ರಕಟಿಸಿದ್ದಾರೆ.

ನನ್ನ ಜೀವನೇ ಕಾಂಟ್ರವರ್ಸಿಯಿಂದ ಕೂಡಿದೆ. ಹಾಗಾಗಿ ಇದೇನು ಹೊಸದಲ್ಲ. ಪ್ರೊಡಕ್ಷನ್ ತಂಡ ಸಿನಿಮಾ ಮಾಡುವುದಕ್ಕಾಗಿ ನನ್ನನ್ನು ಸಂಪರ್ಕಿಸಿದಾಗ ಇದಕ್ಕೆ ಒಪ್ಪಿಗೆ ನಿಡಲು ನನಗೆ ಇಷ್ಟವಿರಲಿಲ್ಲ. ನಂತರ ಸಿನಿಮಾ ಮಾಡಿದರೆ ನನ್ನ ಪೋಷಕರ ಕಷ್ಟ, ನನ್ನ ಕೋಚ್ ಪಟ್ಟ ಕಷ್ಟ, ಶಿಕ್ಷಕರು ಮತ್ತು ನನ್ನ ಪಯಣದ ಭಾಗವಾಗಿದ್ದ ಎಲ್ಲರ ಕಷ್ಟವೂ ತಿಳಿಯಬಹುದು ಎನಿಸಿತು ಎಂದಿದ್ದಾರೆ.

ಮುತ್ತಯ್ಯ ಮುರುಳೀಧರನ್ ಸಿನಿಮಾಗೆ ವಿಜಯ್ ಸೇತುಪತಿ ನಾಯಕ..!

ನನ್ನ ಪೋಷಕರು ಶ್ರೀಲಂಕಾದ ಒಂದು ಟೀ ಎಸ್ಟೇಟ್‌ನಲ್ಲಿ ಕೆಲಸಕ್ಕಿದ್ದರು. ಸಿವಿಲ್ ವಾರ್‌ನಲ್ಲಿ ಹೆಚ್ಚು ಬಾಧಿಸಲ್ಪಟ್ಟಿದ್ದು ತಮಿಳರ ಹಿಲ್ ಕಂಟ್ರಿ. ನಮ್ಮ ಜೀವನ ಶುರುವಾಗಿದ್ದೇ ಈ ಕಾನ್‌ಫ್ಲಿಕ್ಟ್ ಝೋನ್‌ನಿಂದ. ಈ ಎಲ್ಲ ಸಮಸ್ಯೆಗಳ ಜೊತೆ ಹೋರಾಡಿ ನಾನು ಹೇಗೆ ಕ್ರಿಕೆಟಿಗನಾಗಿ ಸಕ್ಸಸ್ ಆದೆ ಎಂಬುದರ ಕುರಿತು 800 ಸಿನಿಮಾ ಇದೆ. ಶ್ರೀಲಂಕನ್ ತಮಿಳನಾಗಿ ಹುಟ್ಟಿದ್ದು ನನ್ನ ತಪ್ಪಾ..? ಎಂದು ಪ್ರಶ್ನಿಸಿದ್ದಾರೆ.

ನಾನು ಭಾರತದಲ್ಲಿ ಹುಟ್ಟಿದ್ದರೆ ಖಂಡಿತವಾಗಿಯೂ ಭಾರತದ ತಂಡದ ಸದಸ್ಯನಾಗಲು ಪ್ರಯತ್ನಿಸುತ್ತಿದೆ. ನಾನು ಶ್ರೀಲಂಕಾ ತಂಡದ ಸದಸ್ಯನಾದಾಗಿನಿಂದಲೂ ತಪ್ಪಾಗಿ ಅರ್ಥೈಸಲಾಗಿದೆ. ಅನಗತ್ಯ ವಿವಾದ ಸೃಷ್ಟಿಸಿ ನಾನು ತಮಿಳರ ವಿರುದ್ಧ ಇದ್ದೇನೆ, ಹಾಗಾಗಿ ಸಿನಿಮಾ ಮಾಡುತ್ತಿದ್ದೇನೆ ಎಂದೂ ಹೇಳಲಾಗುತ್ತಿದೆ ಎಂದಿದ್ದಾರೆ.