Cinema

(Search results - 2104)
• Video Icon

Sandalwood9, Jul 2020, 4:49 PM

ಸಿನಿಮಾಗೆ ಗುಡ್‌ ಬೈ ಹೇಳುತ್ತಾರಂತೆ ರಚಿತಾ ರಾಮ್, ಏನಿದು ಸುದ್ದಿ? ಯಾವಾಗ?

ಸ್ಯಾಂಡಲ್‌‌ವುಡ್ ಡಿಂಪಲ್ ಹುಡುಗಿ ರಚಿತಾ ರಾಮ್ ಮದುವೆ ಸದಾ ಟಾಕ್‌ ಆಫ್‌ ದಿ ಟೌನ್ ಆಗಿರುತ್ತದೆ. ಅದರಲ್ಲೂ ಇತ್ತೀಚಿಗೆ ನಟ ಧನ್ವೀರ್‌ ಜೊತೆ ಕಾಣಿಸಿಕೊಂಡ ಫೋಟೋದಿಂದ ಇನ್ನೂ ಸುದ್ದಿಯಲ್ಲಿದ್ದಾರೆ. ಅಂದ್ಮೇಲೆ ರಚಿತಾ ಮದುವೆ ಯಾವಾಗ? ಮದುವೆ ಆದ್ಮೇಲೆ ನಟನೆ ಬಿಡುವುದಾಗಿ ಹೇಳಿದ್ದೇಕೆ ಈ ನಟಿ?

• Video Icon

Cine World9, Jul 2020, 4:43 PM

'NASA' ಸ್ವೆಟ್‌ಶರ್ಟ್ ಬೆಲೆ 75 ಸಾವಿರ! ಸೂಪರ್ ಸ್ಟಾರ್ ಮಗನ ಫೋಟೋ ವೈರಲ್!

ಬಾಲಿವುಡ್ ಸೂಪರ್ ಸ್ಟಾರ್ ಮಗ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ತೊಟ್ಟ ಸ್ಟೆಟ್ ಶರ್ಟ್ ಹಾಗೂ ಪ್ಯಾಂಟಿನ ಬಗ್ಗೆ ಇದೀಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. NASA ಸ್ವೆಟ್‌ಶರ್ಟ್‌ಗೆ ತುಂಬಾ ಬೆಲೆಯಂತೆ. ಇದು ನಾಸಾದ್ದು ಎಂಬ ಕಾರಣಕ್ಕೆ ವೈರಲ್ ಅಗ್ತಿದ್ಯೋ, ಅಥವಾ expensive ಎಂಬ ಕಾರಣಕ್ಕೆ ವೈರಲ್ ಆಗ್ತಿದ್ಯೋ ಗೊತ್ತಿಲ್ಲ. ನೀವೇ ನೋಡಿ, ಈ ಫ್ಯಾಷನ್ ಟ್ರೆಂಡ್...

• Video Icon

Sandalwood9, Jul 2020, 4:39 PM

ನಟಿ ಆರತಿ, ಭಾರತಿ, ಜಯಂತಿ..ಡಿಜಿಟಲ್ ಸೀರೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌!

ಲಾಕ್‌ಡೌನ್‌ ಸಡಿಲಿಕೆ ನಂತರ ನಟಿ ಅದಿತಿ ಪ್ರಭುದೇವ್ ತುಂಬಾನೇ ಸುದ್ದಿಯಲ್ಲಿದ್ದಾರೆ. ಏನಾದರೋ ವಿಭಿನ್ನವಾಗಿ ಮಾಡಬೇಕೆಂದು ಸಿಕ್ಕಾಪಟ್ಟೆ ಕ್ಲಾಸಿಯಾಗಿರುವ ಡಿಸೈನರ್ ವೇರ್ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿ ಕೊಂಡಿದ್ದಾರೆ. ಎವರ್ ಗ್ರೀನ್ ನಟಿ ಮಣಿಯರ ಮುಖವನ್ನು ಬಿಳಿ ಸೀರೆ ಮೇಲೆ ಡಿಜಿಟಲ್ ಪ್ರಿಂಟ್‌ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನಾರಿ ಮಣಿಯರು ಅಂಗಡಿ ಮುಂದೆ ಕ್ಯೂ ನಿಂತಿದ್ದಾರಂತೆ!

SN V cini2

Video Icon

Sandalwood9, Jul 2020, 4:23 PM

ನಟ ಧನ್ವೀರ್ - ರಚಿತಾ ರಾಮ್‌ ಪೋಟೋಗೆ ಹೊಸ ಟ್ವಿಸ್ಟ್‌!

ಇತ್ತೀಚಿಗೆ ನಟ ಧನ್ವೀರ್‌ ಮನೆಗೆ ಭೇಟಿ ನೀಡಿದ ಡಿಂಪಲ್ ಹುಡುಗಿ ರಚಿತಾ ರಾಮ್‌ ಸಂತೋಷದ ಕ್ಷಣ ಎಂದು ಸೆಲ್ಫಿ ಕ್ಲಿಕ್ ಮಾಡಿದ್ದರು. ಇದನ್ನು ಧನ್ವೀರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ ಇದೇ ಪೋಟೋ ಅನೇಕ ಚರ್ಚೆ, ಗಾಳಿಸುದ್ದಿಗಳಿಗೆ ದಾರಿ ಮಾಡಿ ಕೊಟ್ಟಿದೆ.  ಏನೆನೋ ಗಾಸಿಪ್ ಬೇಡ ಎಂದು ರಚಿತಾ ರಾಮ್ ಈ ಫೋಟೋಗೆ ಈಗ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ವಿಷಯ ಏನು?

• Video Icon

Sandalwood9, Jul 2020, 4:18 PM

ಸಾರ್ವಕಾಲಿಕ ದಾಖಲೆ ಬರೆದ ಅಣ್ಣಾವ್ರ 'ಕಸ್ತೂರಿ ನಿವಾಸ'!

ಸಿನಿಮಾ ಮೇಕಿಂಗ್ ಸ್ಟೈಲ್ ಬದಲಾಗಿದೆ, ಇದಕ್ಕೆ ಕಾರಣ ಪ್ರೇಕ್ಷಕರು ಸಿನಿಮಾ ನೋಡುವ ಸ್ಟೈಲ್ ಬದಲಾಗಿದೆ. ಕನ್ನಡ ಚಿತ್ರರಂಗ ತುಂಬಾನೇ ಅಪ್ಡೇಟ್ ಆಗಿದೆ. ಆದರೆ ಒಂದಿಷ್ಟು ಸಿನಿಮಾಗಳು ಮಾತ್ರ ಹಿಟ್‌ ಲಿಸ್ಟ್‌ನಿಂದ ಕೆಳಗೆ ಇಳಿದಿಲ್ಲ ಮತ್ತು ಯಾವ ಚಿತ್ರಕ್ಕೂ ಇದರ ದಾಖಲೆ ಮುರಿಯೋಕೆ ಆಗಿಲ್ಲ. ಯಾವುವು ಆ ಸಿನಿಮಾಗಳು?

Baahubali fame Prabhas is scared of Tollywood dance choreographer Rakesh Master

Video Icon

Cine World8, Jul 2020, 3:30 PM

ಬಾಲಿವುಡ್‌ನಲ್ಲೂ ಧಮಾಕಾ ಎಬ್ಬಿಸಲು ಪ್ರಭಾಸ್ ರೆಡಿ.!

ಬಾಹುಬಲಿ ಚಿತ್ರದ ನಂತರ ಟಾಲಿವುಡ್ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಗಿದ್ಧಾರೆ. ಟಾಲಿವುಡ್ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಬೇಡಿಕೆ ಹೆಚ್ಚಾಗಿದೆ. ಪ್ರಭಾಸ್ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಇದುವರೆಗೂ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೊಮ್ಮೆ ಇದೇ ಸುದ್ದಿ ಕೇಳಿ ಬಂದಿದ್ದು, ಬಿ ಟೌನ್‌ಗೆ ಕಾಲಿಡುವುದು ಪಕ್ಕಾ ಎನ್ನಲಾಗಿದೆ. ಅದೂ ಕೂಡಾ ಬಿಗ್ ಸೂಪರ್‌ಸ್ಟಾರ್ ಜೊತೆಗೆ ಅನ್ನೋದು ಮತ್ತೊಂದು ವಿಶೇಷ. ಹಾಗಾದರೆ ಯಾವುದು ಆ ಸಿನಿಮಾ? ಆ ಸೂಪರ್‌ಸ್ಟಾರ್ ಯಾರು? ಇಲ್ಲಿದೆ ನೋಡಿ...!

arshad warsi

Video Icon

Cine World8, Jul 2020, 1:34 PM

ಅಯ್ಯಯ್ಯೋ ಇಷ್ಟೊಂದಾ.! ವಿದ್ಯುತ್ ಬಿಲ್ ನೋಡಿ ನಟ ಥಂಡಾ..!

'ಮುನ್ನಾಭಾಯಿ ಎಂಬಿಬಿಎಸ್' ಚಿತ್ರದ ಸರ್ಕಿಟ್ ಖ್ಯಾತಿಯ ಅರ್ಷದ್ ವಾರ್ಸಿ ವಿದ್ಯುತ್ ಬಿಲ್ ನೋಡಿ ಥಂಡಾ ಹೊಡೆದಿದ್ದಾರೆ. 1.03 ಲಕ್ಷ ರೂ ಬಿಲ್ ನೋಡಿ ಶಾಕ್ ಆಗಿದ್ದಾರೆ. ಆಟೋ ಪೇಮೆಂಟ್ ಮೂಲಕ ಪಾವತಿಯೂ ಆಗಿದೆ. ಮುಂದಿನ ಬಾರಿ ಇದೇ ರೀತಿ ಬಿಲ್ ಬಂದ್ರೆ ಕಿಡ್ನಿ ಮಾರಿ ಕಟ್ಟಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sai pallavi

Video Icon

Cine World8, Jul 2020, 1:13 PM

ಸಂದರ್ಶನದಲ್ಲಿ ಹೀಗಾ ಗರಂ ಆಗೋದು, ಸಾಯಿ ಪಲ್ಲವಿಗೆ ಮಾತಿಗೆ ಸುಸ್ತಾದ ನಿರೂಪಕ..!

ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಸಹಜ ಸುಂದರಿ ಸಾಯಿ ಪಲ್ಲವಿಯನ್ನು ನಿರೂಪಕಿಯೊಬ್ಬರು ಮಲ್ಲು ಕುಟ್ಟಿ ಎಂದು ಪರಿಚಯಿಸಿದರಂತೆ. ಅದಕ್ಕೆ ಸಾಯಿ ಪಲ್ಲವಿ ಗರಂ ಆಗಿ ನಾನು ಮಲ್ಲು, ತಮಿಳು ಹುಡುಗಿ ಎಂದು ನಿರೂಪಕರಿಗೆ ತಿರುಗೇಟು ಕೊಟ್ರಂತೆ! ಹುಟ್ಟಿದ್ದು, ಬೆಳೆದಿದ್ದೆಲ್ಲಾ ತಮಿಳಲ್ಲಿ. ;ಪ್ರೇಮಂ' ಎನ್ನುವ ಸಿನಿಮಾದಲ್ಲಿ ಅವಕಾಶ ಸಿಕ್ತು. ಮಲಯಾಳಂಗೆ ಹೋದೆ. ಹಾಗಂದ ಮಾತ್ರಕ್ಕೆ ನಾನು ಮಲಯಾಳಿ ಆಗ್ತೀನಾ? ಎಂದು ರೇಗಿದರಂತೆ..! ನಿರೂಪಕರು ನಿಧಾನಕ್ಕೆ ಸುಧಾರಿಸಿಕೊಂಡ್ರಂತೆ.!

floating theater

International8, Jul 2020, 12:02 PM

ಪ್ಯಾರೀಸ್‌ನಲ್ಲಿ ತೇಲುವ ಥಿಯೇಟರ್..! ತೇಲುವ ಬೋಟ್‌ನಲ್ಲಿ ವೀಕ್ಷಕರು

ಫ್ರಾನ್ಸ್‌ನಲ್ಲಿ ತೇಲುವ ಥಿಯೇಟರ್ ಒಂದು ಸಿದ್ಧಗೊಂಡಿದೆ. ಇದರಲ್ಲಿ ಆಯ್ದ 150 ಜನರು ಸಿನಿಮಾ ನೋಡಲಿದ್ದಾರೆ. ಅಂದ ಹಾಗೆ ಈ ಥಿಯೇಟರ್‌ಗೆ ಗೋಡೆ ಇಲ್ಲ, ಬಿಡಿ ಕೊಠಡಿಯೇ ಇಲ್ಲ.. ಹಿಂದಿನ ಜಮಾನದಲ್ಲಿದ್ದ ಓಪನ್ ಥಿಯೇಟರ್ ಕಾನ್ಸೆಫ್ಟ್ ಮತ್ತೆ ಮರುಕಳಿಸಿದೆ ಎಂದರೂ ತಪ್ಪಾಗಲಾರದು..

• Video Icon

Sandalwood7, Jul 2020, 4:49 PM

ನಟ ನಿಖಿಲ್ ಕುಮಾರಸ್ವಾಮಿ- ರೇವತಿ ಫಿಟ್ನೆಸ್ ಕಾಪಾಡಲು ಮಾಡೋ ವರ್ಕೌಟ್ ಇದು!

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಲಾಕ್‌ಡೌನ್‌ ಪ್ರಾರಂಭದಿಂದಲೂ ಜನರ ಸೇವೆ ಮಾಡುತ್ತಾ ಕುಟುಂಬಸ್ಥರ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಏಪ್ರಿಲ್ 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಪತ್ನಿ ಜೊತೆ ಎಲ್ಲಿಯೂ ಟ್ರಿಪ್‌ ಹೋಗದೆ, ತಮ್ಮ ಮನೆಯಲ್ಲಿ, ಫಾರ್ಮ್‌ಹೌಸ್‌ನಲ್ಲಿ ಹೆಚ್ಚಿನ ಕಾಲ ಕಳೆಯುತ್ತಿದ್ದಾರೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ನಿಖಿಲ್ ಮನೆಯಲ್ಲಿ ಪತ್ನಿ ಜೊತೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

• Video Icon

Sandalwood7, Jul 2020, 4:26 PM

ಶೀಘ್ರದಲ್ಲೇ ನಟಿ ಅಮೂಲ್ಯ ಕೊಡ್ತಾರಂತೆ ಗುಡ್ ನ್ಯೂಸ್!

ಸ್ಯಾಂಡಲ್‌ವುಡ್‌ 'ಚಲುವಿನ ಚಿತ್ತಾರ' ಅಮೂಲ್ಯ ಈಗ ಎಲ್ಲೇ ಹೋದರೂ ನೆಂಟರು, ಆಪ್ತರು ಕೇಳುತ್ತಿರುವ ಒಂದೇ ಪ್ರಶ್ನೆ, ಅದೂ ಗುಡ್ ನ್ಯೂಸ್ ಯಾವಾಗ ಎಂದು? ಅದಕ್ಕೆ ಅಮೂಲ್ಯ ಸದ್ಯದಲ್ಲೇ ಹೇಳುತ್ತೇನೆ ಎಂದು ಉತ್ತರಿಸುತ್ತಿದ್ದಾರಂತೆ!

• Video Icon

Sandalwood7, Jul 2020, 4:12 PM

ಕಿಚ್ಚ ಸುದೀಪ್‌ ನಟನೆಯ 'ಹುಚ್ಚ' ಸಿನಿಮಾಗೆ 19 ವರ್ಷ; ಅಂಬಿಕಾ ರಾಗಿ ಮುದ್ದೆ ತಿಂದ ಕ್ಷಣ!

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿನ ಸಿನಿಮಾ 'ಹುಚ್ಚ'. ಈ ಸಿನಿಮಾದಿಂದಲೇ ಸುದೀಪ್‌ ಪ್ರಬುದ್ಧ ನಟನೆಂಬುದನ್ನು ಸಾಬೀತಾಗಿದ್ದು. ಜುಲೈ 6, 2001ರಲ್ಲಿ ರಿಲೀಸ್‌ ಆದ ಸಿನಿಮಾಗೆ 19 ವರ್ಷ ಪೂರೈಸಿದೆ. ಇನ್ನು ನಟಿ ಅಂಬಿಕಾ ತಾವು ಮೊದಲ ಬಾರಿ ರಾಗಿ ಮುಂದೆ ತಿಂದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೆಲ್ಲದೆ ಇದಕ್ಕೆ ಕಾರಣವೇ ಡಾ.ರಾಜ್‌ಕುಮಾರ್ ಎಂದು ಹೇಳಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

• Video Icon

Sandalwood7, Jul 2020, 4:05 PM

ಅದಿತಿ ಪ್ರಭುದೇವ್ ಸೀರೆಯಲ್ಲಿ ಕನ್ನಡ ಕ್ಲಾಸಿಕ್‌ ನಟಿಮಣಿಯರು!

ಸ್ಯಾಂಡಲ್‌ವುಡ್‌ ನಟಿ ಅದಿತಿ ಪ್ರಭುದೇವ್‌ ಫ್ಯಾಷನ್‌ ವಿಚಾರದಲ್ಲಿ ತುಂಬಾನೇ ಎಕ್ಸ್‌ಪೆರಿಮೆಂಟ್‌ ಮಾಡುತ್ತಾರೆ. ಆದರಲ್ಲೂ ಇತ್ತೀಚಿಗೆ ವೈರಲ್ ಆಗುತ್ತಿರುವ ಆರತಿ, ಭಾರತಿ, ಲಕ್ಷ್ಮಿ, ಗೀತಾ, ಸರಿತಾ ಸೀರಿ ಎಲ್ಲರ ಗಮನ ಸೆಳೆಯುತ್ತಿದೆ ಇವರು ಉಟ್ಟಿರುವ ಸೀರೆ. ಏಳೂವರೆ ಮೀಟರ್‌ ಸೀರೆಯಲ್ಲಿ 20 ಸ್ಟಾರ್ ನಾಯಕಿಯರಿದ್ದಾರೆ. ಹೇಗಿದೆ ಸೀರೆ ನೀವೇ ನೋಡಿ..

• Video Icon

Cine World7, Jul 2020, 3:55 PM

ಕನ್ನಡತಿ ಶಕುಂತಲಾ ದೇವಿ ಬಯೋಪಿಕ್‌ನಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್!

ಬೆಂಗಳೂರಿನ ಮಾನವ ಕಂಪ್ಯೂಟರ್ ಎಂದ್ ಖ್ಯಾತರಾದ ಶಕುಂತಲಾ ದೇವಿ 5 ವರ್ಷವಿದ್ದಾಗಲೇ 18 ವರ್ಷದ ವಿದ್ಯಾರ್ಥಿಗಳು ಮಾಡುವ ಲೆಕ್ಕಗಳನ್ನು ಮಾಡುತ್ತಿದ್ದರು. ಗಿನ್ನಿಸ್‌ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದವರು. ಶಕುಂತಲಾ ದೇವಿ ಅವರ ಜೀವನ ಬಗ್ಗೆ ತಿಳಿದುಕೊಳ್ಳುವುದಕ್ಕೆ ಅಪಾರ ವಿಚಾರಗಳಿವೆ. ಹೀಗಾಗಿ ಅವರ ಜೀವನದ ಇಂಟ್ರೆಸ್ಟಿಂಗ್ ಕಥೆಯನ್ನು ಬಾಲಿವುಡ್‌ ನಟಿ ವಿದ್ಯಾ ಬಾಲನ್ ಅಭಿನಯಿಸಲಿದ್ದಾರೆ. ಈ ಚಿತ್ರಕ್ಕೆ ಅನು ಮೆನನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

• Video Icon

Sandalwood7, Jul 2020, 3:28 PM

37 ವರ್ಷಕ್ಕೇ ಅಧ್ಯಾತ್ಮದತ್ತ ಒಲವು ತೋರಿದ್ರಾ ನಟಿ ರಮ್ಯಾ?

ಸ್ಯಾಂಡಲ್‌ವುಡ್‌ ಬ್ಯೂಟಿ ಕ್ವೀನ್ ಅಂದ್ರೆ ಇಂದಿಗೂ ಎಲ್ಲರ ಬಾಯಲ್ಲಿ ಬರುವುದು ಒಂದೇ ಹೆಸರು, ಅದು ಮೋಹಕ ತಾರೆ ರಮ್ಯಾ. ಸಿನಿಮಾ ರಂಗದಿಂದ ದೂರ ಉಳಿದರೂ ನಂಬರ್‌ 1 ಬ್ಯೂಟಿ ಮತ್ತು ಸೂಪರ್ ಹಿಟ್ ನಟಿ ಅಂದ್ರೆ ರಮ್ಯಾನೆ. ಇತ್ತೀಚಿಗೆ ನಡೆದ ಗುರು ಪೂರ್ಣಿಮೆಯಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಗಾಯಿತ್ರಿ ಮಂತ್ರ ಹಾಗೂ ಅದರ ಅರ್ಥಗಳನ್ನು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ರಮ್ಯಾ ಅಧ್ಯಾತ್ಮದತ್ತ ಒಲವು ತೋರಿಸುತ್ತಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.