- Home
- Entertainment
- Cine World
- ತೆರೆ ಹಿಂದೆಯೂ ಭೇಷ್ ಎನ್ನೋ ಕೆಲಸ ಮಾಡಿದ Karuppu Movie ನಟ; Age Is Just Number-ಸಾಬೀತುಪಡಿಸಿದ ಇಂದ್ರನ್ಸ್!
ತೆರೆ ಹಿಂದೆಯೂ ಭೇಷ್ ಎನ್ನೋ ಕೆಲಸ ಮಾಡಿದ Karuppu Movie ನಟ; Age Is Just Number-ಸಾಬೀತುಪಡಿಸಿದ ಇಂದ್ರನ್ಸ್!
ನಟ ಸೂರ್ಯ, ಆರ್‌ಜೆ ಬಾಲಾಜಿ ಅವರ ‘Karuppu Movieʼ ಈಗಾಗಲೇ ಥಿಯೇಟರ್‌ನಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಟಿಸಿದವರೆಲ್ಲರೂ ಜಿದ್ದಾಜಿದ್ದಿಗೆ ಬಿದ್ದು ಅಭಿನಯ ತೋರಿಸಿದ್ದಾರೆ. ಅದರಲ್ಲಿ ಹಿರಿಯ ನಟ ಇಂದ್ರನ್ ಮಾತ್ರ ಇನ್ನೊಂದು ರಾಷ್ಟ್ರ ಪ್ರಶಸ್ತಿ ಸಿಗುವ ಹಾಗೆ ನಟಿಸಿದ್ದಾರೆ.

ಹಾಡಿ ಹೊಗಳಿದ ನಟ ಸೂರ್ಯ
ನಟ ಇಂದ್ರನ್ ಅವರು ಈ ಹಿಂದೆ ಬಡತನದ ಕಾರಣಕ್ಕೆ ಶಾಲೆ ಬಿಟ್ಟಿದ್ದರು, ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಅವರು ಏಳನೇ ಕ್ಲಾಸ್ ಪರೀಕ್ಷೆ ಬರೆದರು. ನಟ ಸೂರ್ಯ ಕೂಡ ವೇದಿಕೆಯಲ್ಲಿ ಇವರ ಬಗ್ಗೆ ಮಾತನಾಡಿದ್ದಾರೆ.

ಸಣ್ಣ ಪುಟ್ಟ ಪಾತ್ರಗಳು
1956 ಮಾರ್ಚ್ 16ರಂದು ತಿರುವನಂತಪುರಂನಲ್ಲಿ ಜನಿಸಿದ ಸುರೇಂದ್ರನ್ ಅವರು 1981ರಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆಮೇಲೆ ನಟನಾಗಿ ಒಂದಾದ ಮೇಲೆ ಒಂದರಂತೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತ ಬಂದರು. ಆರಂಭದಲ್ಲಿ ಕಾಮಿಡಿಯನ್ ಆಗಿ ಗುರುತಿಸಿಕೊಂಡರು. ಆಮೇಲೆ ಕೆಲ ನಿರ್ದೇಶಕರು ಇವರನ್ನು ಬೌಂಡರಿಯಿಂದ ಆಚೆ ಕರೆತರುವ ಪ್ರಯತ್ನ ಮಾಡಿ ಯಶಸ್ಸು ಗಳಿಸಿದರು.
ರಾಷ್ಟ್ರ ಪ್ರಶಸ್ತಿ ಸಿಕ್ಕಿತು
ಇತ್ತೀಚೆಗೆ ಕೆಲ ಯುವ ನಿರ್ದೇಶಕರು ಇಂದ್ರನ್‌ಗೆ ಅದ್ಭುತವಾದ ಪಾತ್ರಗಳನ್ನು ಕೊಟ್ಟು, ಅವರ ನಟನೆ ಸಾಮರ್ಥ್ಯ ಎಷ್ಟಿದೆ ಎಂದು ಜಗತ್ತಿಗೆ ತೋರಿಸಿದರು. 40 ವರ್ಷಗಳ ಕಾಲ ಚಿತ್ರರಂಗದಲ್ಲಿರುವ ಇಂದ್ರನ್ ಅವರು 69ನೇ ನ್ಯಾಶನಲ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ನಿರ್ದೇಶಕ ರೋಜಿನ್ ಥಾಮಸ್ ಅವರ 'ಹೋಮ್' ಸಿನಿಮಾದ ಅಭಿನಯಕ್ಕೆ ವಿಶೇಷ ಪ್ರಶಸ್ತಿ ಪಡೆದರು. ಮಲಯಾಳಂ ಸಿನಿಮಾ ಜಗತ್ತಿನ ಅದ್ಭುತ ನಟರಲ್ಲಿ ಇಂದ್ರನ್ ಕೂಡ ಒಬ್ಬರು.
ಏಳನೇ ಕ್ಲಾಸ್ ಪರೀಕ್ಷೆ ಬರೆದರು!
ಶಾಲೆಗೆ ಹೋಗಲು ಹಣ ಇಲ್ಲ ಎಂದು ಇವರು ನಾಲ್ಕನೇ ಕ್ಲಾಸ್‌ಗೆ ಓದೋದು ಬಿಟ್ಟಿದ್ದರು. ಓದಿನಲ್ಲಿ ಮುಂದಿದ್ದರೂ ಕೂಡ ಓದೋಕೆ ಆಗಿರಲಿಲ್ಲ. ರಾಷ್ಟ್ರ ಪ್ರಶಸ್ತಿ ಸಿಕ್ಕ ಬಳಿಕ ಇಂದ್ರನ್ ಅವರು ಏಳನೇ ಕ್ಲಾಸ್ ಪರೀಕ್ಷೆ ಬರೆದಿದ್ದಾರೆ. ಕನಸು ಕಾಣೋದಿಕ್ಕೆ, ಕನಸು ನನಸು ಮಾಡೋದಿಕ್ಕೆ ವಯಸ್ಸು ಮುಖ್ಯ ಅಲ್ಲ ಎಂದು ಅವರು ಸಾಬೀತುಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

