ತ್ರಿಷಾ.. ಸದ್ಯ ಕಾಲಿವುಡ್‌ನಲ್ಲಿ ಸಂಚಲಸೃಷ್ಟಿಸಿರುವ ನಟಿ. ಅದರಲ್ಲೂ ವಿಜಯ್ ದಳಪತಿ ಜೊತೆ ಹಿಂದೆ ಮುಂದೆ ಸುತ್ತುತ್ತಿರೋ ತ್ರಿಷಾ ಕೃಷ್ಣನ್ತಮಿಳುನಾಡಿನ ಹೊಸ ಜಯಲಲಿತಾ ಅನ್ನೋ ಹಾಗೆ ಫೊಟ್ರೆ ಆಗುತ್ತಿದ್ದಾರೆ. ಆ ಕಡೆ ವಿಜಯ್ ತಮಿಳುನಾಡು ಸಿಎಂ ಆಗುತ್ತಿದ್ದಂತೆ ಈ ಕಡೆ ನಟಿ ತ್ರಿಷಾಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ.
ವಿಜಯ್ ರಾಜಕೀಯವಿರೋಧಿ ಜೊತೆ ತ್ರಿಷಾ..?

ಒಂದು ಸಿನಿಮಾದಿಂದ 200 ಕೋಟಿ ಗಳಿಸುತ್ತಿದ್ದ ನಟ ದಳಪತಿ ವಿಜಯ್ (Thalapathy Vijay) ಆ ಕೆಲಸ ಬಿಟ್ಟು ವರ್ಷಕ್ಕೆ 34 ಲಕ್ಷ ಗಳಿಸೋ ಜನನಾಯಕನಾಗಿ ಕೆಲಸಕ್ಕೆ ಹಾಜರ್ ಆಗಿದ್ದಾರೆ. ಆ ಕಡೆ ವಿಜಯ್ ಸಿಎಂ ಆಗಿ ಅದೃಷ್ಟ ಕುಲಾಯಿಸಿದ್ರೆ, ಈ ಕಡೆ ದಳಪತಿ ಗೆಳತಿ ತ್ರಿಷಾ ಕೃಷ್ಣನ್‌ಗೂ (Trisha Krishnan) ದೊಡ್ಡ ಆಫರ್ ಒಂದು ಬಂದು ಕಾಲ ಮುಂದೆ ಬಿದ್ದಿದೆ. ಹಾಗಾದ್ರೆ ಏನದು..? ನೋಡೋಣ ಬನ್ನಿ..
ತ್ರಿಷಾ.. ಸದ್ಯ ಕಾಲಿವುಡ್‌ನಲ್ಲಿ ಸಂಚಲಸೃಷ್ಟಿಸಿರುವ ನಟಿ. ಅದರಲ್ಲೂ ವಿಜಯ್ ದಳಪತಿ ಜೊತೆ ಹಿಂದೆ ಮುಂದೆ ಸುತ್ತುತ್ತಿರೋ ತ್ರಿಷಾ ಕೃಷ್ಣನ್ತಮಿಳುನಾಡಿನ ಹೊಸ ಜಯಲಲಿತಾ ಅನ್ನೋ ಹಾಗೆ ಫೊಟ್ರೆ ಆಗುತ್ತಿದ್ದಾರೆ. ಆ ಕಡೆ ವಿಜಯ್ ತಮಿಳುನಾಡು ಸಿಎಂ ಆಗುತ್ತಿದ್ದಂತೆ ಈ ಕಡೆ ನಟಿ ತ್ರಿಷಾಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ವಿಜಯ್ ಬಿಟ್ಟಿರೋ ತಿರುಚ್ಚಿ ಕ್ಷೇತ್ರದಿಂದ ತ್ರಿಷಾ ರಾಜಕೀಯ ರಂಗ ಪ್ರವೇಶ ಮಾಡುತ್ತಾರೆ ಅನ್ನೋ ಸುದ್ಧಿ ಹಬ್ಬುವಾಗ್ಲೆ, ಈ ತಲೈವಿಗೆ ಮತ್ತೊಂದು ಆಫರ್ ಬಂದಿದೆ.
ಟ್ರೆಂಡಿಂಗ್ ತ್ರಿಷಾ ಕೃಷ್ಣನ್ಗೆ ಬಂತು ಸಖತ್ ಆಫರ್..!
ತಮಿಳು ಚಿತ್ರರಂಗದ ದಿಗ್ಗಜ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ದಶಕಗಳ ನಂತರ ಮತ್ತೆ ಬೆಳ್ಳಿತೆರೆಗೆ ಎಂಟ್ರಿಕೊಡುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಬೃಹತ್ ಚಿತ್ರಕ್ಕೆ ಸೌತ್ ಕ್ರೀನ್ ತ್ರಿಶಾ ಕೃಷ್ಣನ್ ಕೂಡ ಸೇರ್ಪಡೆ ಆಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಹಬ್ಬಿದೆ.
ರಜನಿ-ಕಮಲ್ ಜೊತೆಗಿನ 'KHXRK' ಸಿನಿಮಾದಲ್ಲಿ ತ್ರಿಷಾ ನಟಿಸಲಿದ್ದಾರೆ ಎನ್ನಲಾಗ್ತಿದೆ.
ವಿಜಯ್ ರಾಜಕೀಯ ವಿರೋಧಿ ನಿರ್ಮಾಪಕನ ಚಿತ್ರದಲ್ಲಿ ತ್ರಿಷಾ..?
ನಟಿ ತ್ರಿಷಾ 41ರ ಹರೆಯದ ಬ್ಯೂಟಿ.. ತಮಿಳುನಾಡಿನ ಸೀನಿಯರ್ ನಟರಿಗೆ ಈಕೆಯೇ ಈಗ ಬೆಸ್ಟ್ ಪೇರ್.. ಹೀಗಾಗಿ ರಜನಿಕಾಂತ್ ಹಾಗು ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಷಾಗೆ ಆಫರ್ ಮಾಡಲಾಗಿದೆ. ಅಷ್ಟಕ್ಕೂ ಈ ಆಫರ್ ಮಾಡಿದ್ದು ಯಾರು ಗೊತ್ತಾ..? ದಳಪತಿ ವಿಜಯ್ರ ರಾಜಕೀಯ ಶತ್ರು ಡಿಎಂಕೆ ಪಕ್ಷದ ನಾಯಕ ಉದಯ ನಿಧಿ ಸ್ಟಾಲಿನ್.. ರಜನಿ ಕಮಲ್ ರ 500 ಕೋಟಿ ಬಜೆಟ್ನ ಈ ಸಿನಿಮಾ ನಿರ್ಮಾಣ ಮಾಡುತ್ತಿರೋದೇ ಉದಯನಿಧಿ ಸ್ಟ್ಯಾಲಿನ್.. Giant Movies ಬ್ಯಾನರ್ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಇದೀಗ ಆ ಚಿತ್ರಕ್ಕೆ ತ್ರಿಷಾ ನಾಯಕಿ ಆಗಬೇಕು ಅಂತ 12 ಕೋಟಿಗೆ ಆಫರ್ ಮಾಡಲಾಗಿದ್ಯಂತೆ..
ತ್ರಿಷಾ ಕೃಷ್ಣನ್ ಅವರು ತಮಿಳು ನಾಡಿನ ನೂತನ ಸಿಎಂ ಆಗಿರುವ ಖ್ಯಾತ ನಟ ವಿಜಯ್ ದಳಪತಿಯ ಅತ್ಯಪ್ತ ಸ್ನೇಹಿತೆ. ಅದರಲ್ಲೂ ಮೊನ್ನೆ ವಿಜಯ್ ಅವರ ಪ್ರಮಾಣವಚನ ಸಂದರ್ಭದಲ್ಲಿ ವಿಜಯ್‌ಗಿಂತ ತ್ರಿಷಾ ಅವರೇ ಹೆಚ್ಚು ಗಮನ ಸೆಳೆದಿದ್ದರು. ವಿಜಯ್ ಪತ್ನಿ ಸಂಗೀತಾ ಮತ್ತು ಮಕ್ಕಳು ಗೈರಾಗಿದ್ದರು. ಆದ್ರೆ ನಟಿ ತ್ರಿಶಾ ಸಾಂಪ್ರದಾಯಿಕ ಸೀರೆ ಉಟ್ಟು ಕಾರ್ಯಕ್ರಮವನ್ನು ಅಲಂಕರಿಸಿದ್ದರು. ವಿಜಯ್ ಅವರ ಸಂಬಂಧಿಕರನ್ನು ಅಪ್ಪಿ ಮುಂದಿನ ಸಾಲಿನಲ್ಲೇ ಕುಳಿತು ವಿಜಯ್ ಗೆಲುವನ್ನು ಹೆಮ್ಮೆಯಿಂದ ಸಂಭ್ರಮಿಸಿದ್ದರು.
ಜೈಲರ್ ಸಿನಿಮಾ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ
ಈಗ ಜೈಲರ್ ಸಿನಿಮಾ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರೋ ಸಿನಿಮಾದಲ್ಲಿ ತ್ರಿಷಾ ನಾಯಕಿ ಆಗಬೇಕಿದೆ. ತ್ರಿಷಾಗೆ ಇದು ಜಾಕ್ಪಾಟ್ ಅಂದ್ರೆ ತಪ್ಪಲ್ಲಾ. ಯಕಂದ್ರೆ 22 ವರ್ಷಗಳಿಂದ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ತ್ರಿಶಾ ಈಗ ತೆರೆ ಹಂಚಿಕೊಳ್ಳೋದು ತಮಿಳು ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ಸ್ ರಜನಿಕಾಂತ್ ಹಾಗು ಕಮಲ್ ಹಾಸನ್ ಜೊತೆಗೆ. ಹೀಗಾಗಿ ತ್ರಿಷಾ ಈ ಆಫರ್ಅನ್ನ ಒಪ್ಪಿಕೊಳ್ತಾರಾ ಕಾದು ನೋಡಬೇಕು.


