Puneeth Rajkumar: ಜೇಮ್ಸ್ ಚಿತ್ರಕ್ಕೆ ಅಪ್ಪು ಧ್ವನಿಯಲ್ಲೇ ಡಬ್ಬಿಂಗ್
ಮಾರ್ಚ್ 17 ಪುನೀತ್ ರಾಜ್‌ಕುಮಾರ್ ಜನ್ಮದಿನ. ಅಂದೇ ಅವರ ನಟನೆಯ ‘ಜೇಮ್ಸ್’ ಚಿತ್ರ ರಿಲೀಸ್ ಆಗುತ್ತಾ ಎಂಬ ಪ್ರಶ್ನೆಗೆ ಈ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಉತ್ತರಿಸಿದ್ದಾರೆ. ಕೋವಿಡ್ ಹತೋಟಿಯಲ್ಲಿದ್ದು, ಜನ ಜೀವನ ನಾರ್ಮಲ್ ಆದರೆ ಆ ದಿನವೇ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಇದೆ ಎಂದಿದ್ದಾರೆ.
ಮಾರ್ಚ್ 17 ಪುನೀತ್ ರಾಜ್‌ಕುಮಾರ್ (Puneeth Rajkumar) ಜನ್ಮದಿನ. ಅಂದೇ ಅವರ ನಟನೆಯ ‘ಜೇಮ್ಸ್’ (James) ಚಿತ್ರ ರಿಲೀಸ್ ಆಗುತ್ತಾ ಎಂಬ ಪ್ರಶ್ನೆಗೆ ಈ ಚಿತ್ರದ ನಿರ್ದೇಶಕ ಚೇತನ್ ಕುಮಾರ್ (Chetan Kumar) ಉತ್ತರಿಸಿದ್ದಾರೆ. ಕೋವಿಡ್ (Covid) ಹತೋಟಿಯಲ್ಲಿದ್ದು, ಜನ ಜೀವನ ನಾರ್ಮಲ್ ಆದರೆ ಆ ದಿನವೇ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಇದೆ ಎಂದಿದ್ದಾರೆ.
ಜೇಮ್ಸ್ ಸಿನಿಮಾ ಬಗ್ಗೆ ಅವರ ಮಾತುಗಳು ಇಲ್ಲಿವೆ.
* ಈಗ ಪುನೀತ್ ಅವರ ಡಬ್ಬಿಂಗ್ (Dubbing) ಭಾಗ ಬಾಕಿ ಇದೆ. ಅದನ್ನು ಶಿವಣ್ಣ (Shiva Rajkumar) ಅವರು ಮಾಡುತ್ತಾರಾ ಎಂದು ಕೇಳಿದರೆ ಸದ್ಯಕ್ಕೆ ಆ ಯೋಚನೆ ಇಲ್ಲ. ಬದಲಿಗೆ ಪುನೀತ್ ಅವರ ಧ್ವನಿಯನ್ನು ಇಟ್ಟುಕೊಂಡೇ ಏನಾದರೂ ಹೊಸ ಪ್ರಯತ್ನ ಮಾಡಬೇಕು ಅನ್ನುವ ಯೋಚನೆ ಇದೆ. ಇನ್ನೊಂದೆರಡು ದಿನದಲ್ಲಿ ಈ ಬಗ್ಗೆ ಸ್ಪಷ್ಟಚಿತ್ರಣ ಸಿಗಲಿದೆ.
* ‘ಜೇಮ್ಸ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇದೀಗ ಪ್ರಗತಿಯಲ್ಲಿವೆ. ಸದ್ಯದ ಮಟ್ಟಿಗೆ ಈ ಚಿತ್ರವನ್ನು ಪುನೀತ್ ಅವರ ಜನ್ಮದಿನ ಮಾ.17ರಂದೇ ತೆರೆಗೆ ತರಬೇಕು ಅನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕೋವಿಡ್‌ನಿಂದಾಗಿ ಸದ್ಯದ ಮಟ್ಟಿಗೆ ಟೀಸರ್, ಟ್ರೈಲರ್ ಹಾಗೂ ಜ.26ರ ಗಣರಾಜ್ಯ ದಿನದಂದು ಬಿಡುಗಡೆ ಮಾಡಬೇಕು ಅಂದುಕೊಂಡಿರುವ ಪೋಸ್ಟರ್ ಬಿಡುಗಡೆ ಮಾಡಬೇಕೋ ಬೇಡವೋ ಅನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇನ್ನು ಹತ್ತು ದಿನಗಳಲ್ಲಿ ಈ ಬಗ್ಗೆ ಖಚಿತ ನಿರ್ಧಾರಕ್ಕೆ ಬರುತ್ತೇವೆ.
Puneeth Rajkumar: ಅಪ್ಪು ಇಲ್ಲದೆ 'ಜೇಮ್ಸ್' ಸಿನಿಮಾದ ಶೂಟಿಂಗ್ ಮತ್ತೆ ಆರಂಭ
ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್ ಸಿನಿಮಾ' ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಚಿತ್ರದಲ್ಲಿ ಪುನೀತ್ ವಿಶೇಷ ಸ್ಟಂಟ್ಸ್, ಹೈವೋಲ್ಟೇಜ್ ಆ್ಯಕ್ಷನ್ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಈಗಾಗಲೇ 15 ಕೋಟಿಗೆ ಮಾರಾಟವಾಗಿದೆ. ಇದುವರೆಗೆ ಮಾರಾಟವಾದ ಪುನೀತ್ ಅವರ ಚಿತ್ರಗಳಲ್ಲೇ ಇದು ಅತ್ಯಧಿಕ ಮೊತ್ತ ಎನ್ನಲಾಗುತ್ತಿದೆ. ಕಾಲಿವುಡ್ ನಟಿ ಪ್ರಿಯಾ ಆನಂದ್ (Priya Anand) ಜೇಮ್ಸ್ನಲ್ಲಿ ನಾಯಕಿಯಾಗಿ ಎರಡನೇ ಬಾರಿಗೆ ಪುನೀತ್ ಜೊತೆ ನಟಿಸುತ್ತಿದ್ದಾರೆ.
'ರಾಜಕುಮಾರ' (Rajakumara) ಸಿನಿಮಾದಲ್ಲಿ ಪುನೀತ್ ಜೊತೆ ಪ್ರಿಯಾ ಆನಂದ್ ಅಭಿನಯಿಸಿದ್ದರು. 'ರಾಜಕುಮಾರ' ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ, ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಈ ಚಿತ್ರದಲ್ಲಿ ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಕ್ರಮಣಕಾರ ಸ್ವಭಾವದ ಪಾತ್ರ ಎನ್ನಲಾಗಿದೆ. ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ (Kishor Patikonda) ಬಂಡವಾಳ ಹೂಡಿದ್ದಾರೆ.
ಕನ್ನಡದ ರಾಯಭಾರಿಯಾಗಿ ನಮ್ಮನ್ನ ಹರಸುತ್ತೀರಿ: 'ಜೇಮ್ಸ್' ನಿರ್ದೇಶಕ ಚೇತನ್
'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಷ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ ಸೇರಿದಂತೆ ದೀಪು ಎಸ್.ಕುಮಾರ್ ಸಂಕಲನ ಇರುವ ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣವಿದೆ.