Asianet Suvarna News Asianet Suvarna News

'ಲಕ್ಕಿ ಮ್ಯಾನ್' ಚಿತ್ರೀಕರಣ ಕಂಪ್ಲೀಟ್: ವಿಶೇಷ ಪಾತ್ರದಲ್ಲಿ Puneeth Rajkumar

ಸ್ಯಾಂಡಲ್‌ವುಡ್‌ನ ಮೇರುನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮೊಟ್ಟ ಮೊದಲ ಬಾರಿಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಲಕ್ಕಿಮ್ಯಾನ್' ಚಿತ್ರವು ಸದ್ದಿಲ್ಲದೆ ತೆರೆಗೆ ಬರುವ ಸಿದ್ಧತೆ ನಡೆಸಿದ್ದು, ಅದರ ಮುಂದುವರಿದ ಭಾಗವಾಗಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. 

Kannada Lucky Man Film Team Completes Shooting Puneeth Rajkumar Seen in a Guest Role gvd
Author
Bangalore, First Published Jan 4, 2022, 11:17 AM IST

ಸ್ಯಾಂಡಲ್‌ವುಡ್‌ನ ಮೇರುನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನರಾಗಿ ಬರೋಬ್ಬರಿ ಎರಡು ತಿಂಗಳ ಮೇಲಾಗಿದೆ. ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ನಂಬಲು ಅಸಾಧ್ಯವಾಗಿದೆ. ಪುನೀತ್ ನಿಧನರಾಗುವುದಕ್ಕೂ ಮುನ್ನ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರು. ಅದರಲ್ಲಿ 'ಲಕ್ಕಿಮ್ಯಾನ್​' (Luckyman) ಚಿತ್ರವು ಒಂದು. ಹೌದು! ಮೊಟ್ಟ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ಸದ್ದಿಲ್ಲದೆ ತೆರೆಗೆ ಬರುವ ಸಿದ್ಧತೆ ನಡೆಸಿದ್ದು, ಅದರ ಮುಂದುವರಿದ ಭಾಗವಾಗಿ 'ಲಕ್ಕಿಮ್ಯಾನ್' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. 

ಹೌದು! ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಲಕ್ಕಿಮ್ಯಾನ್' ಚಿತ್ರದ ಕೊನೆಯ ದಿನದ ಚಿತ್ರೀಕರಣ ಮುಗಿದಿದೆ. ಆ ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಕುಂಬಳ ಕಾಯಿ ಒಡೆದು ಶೂಟಿಂಗ್‌ ಮುಗಿಸಲಾಗಿದೆ. ಈ ಬಗ್ಗೆ ಚಿತ್ರದ ನಾಯಕ ಡಾರ್ಲಿಂಗ್​ ಕೃಷ್ಣ (Darling Krishna) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದದೊಂದಿಗೆ ಲಕ್ಕಿಮ್ಯಾನ್ ಶೂಟಿಂಗ್ ಪೂರ್ಣಗೊಂಡಿದೆ. ಇದೊಂದು ವಿಶೇಷ ಚಿತ್ರವಾಗಿದ್ದು, ನನ್ನ ಹೃದಯಕ್ಕೆ ಹತ್ತಿರವಾಗಲಿದೆ ಎಂದು ಕ್ಯಾಪ್ಷನ್ ಬರೆದು ಚಿತ್ರತಂಡದ ಜೊತೆಗಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Puneeth Rajkumar: ಅಪ್ಪು ಇಲ್ಲದೆ 'ಜೇಮ್ಸ್‌' ಸಿನಿಮಾದ ಶೂಟಿಂಗ್ ಮತ್ತೆ ಆರಂಭ

ಹೊಸ ವರ್ಷಕ್ಕೆ (New Year) ಉಡುಗೊರೆಯಾಗಿ 'ಲಕ್ಕಿಮ್ಯಾನ್' ಚಿತ್ರತಂಡ ಚಿತ್ರದ ಪೋಸ್ಟರನ್ನು (Poster) ರಿಲೀಸ್ ಮಾಡಿತ್ತು. ಈ ಪೋಸ್ಟರನ್ನು ಚಿತ್ರದ ಕಲಾವಿದರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟರ್‌ನಲ್ಲಿ 'ಆದಷ್ಟು ಬೇಗ ದೇವರು ನಿಮ್ಮ ಮುಂದೆ ಬರಲಿದ್ದಾರೆ' ಎಂದು ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದರು. ಇದೀಗ ಅದರ ಬೆನ್ನಲ್ಲೇ ಚಿತ್ರತಂಡ ಶೂಟಿಂಗ್ ಮುಗಿಸಿದ್ದು, ಬಾಕಿ ಇರೋ ಕೆಲಸಗಳನ್ನು ಬೇಗ ಮುಗಿಸಲು ಸಜ್ಜಾಗಿದೆ. ವಿಶೇಷವಾಗಿ ಈ ಚಿತ್ರವನ್ನು ಪ್ರಭುದೇವ (Prabhudeva) ಸಹೋದರ ನಾಗೇಂದ್ರ ಪ್ರಸಾದ್ (Nagendra Prasad)​ ನಿರ್ದೇಶಿಸುತ್ತಿದ್ದಾರೆ.

Kannada Lucky Man Film Team Completes Shooting Puneeth Rajkumar Seen in a Guest Role gvd

ಇತ್ತೀಚೆಗಷ್ಟೇ ಡಾರ್ಲಿಂಗ್​ ಕೃಷ್ಣ, ಅಪ್ಪು ಜೊತೆ ಡಬ್ಬಿಂಗ್​ ಮಾಡುತ್ತಿರುವ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಮೇತ ಹಂಚಿಕೊಂಡಿದ್ದರು.ಈ ಬಗ್ಗೆ 'ಲಕ್ಕಿಮ್ಯಾನ್ ಸಿನಿಮಾಗೆ ಡಬ್ಬಿಂಗ್ ಶುರು ಮಾಡಿದೆ. ಈ ದೃಶ್ಯಕ್ಕೆ ಡಬ್ಬಿಂಗ್ ಮಾಡುವುದು ಅತ್ಯಂತ ಕಷ್ಟಕರವಾದ ಭಾಗವಾಗಿತ್ತು. ಅಪ್ಪು ಸರ್ ಜೊತೆಗಿನ ಈ ಚಿತ್ರದ ಶೂಟಿಂಗ್ ತುಂಬಾ ವಿಶೇಷವಾಗಿತ್ತು ಮತ್ತು ಇದು ಎಂದೆಂದಿಗೂ ವಿಶೇಷವಾಗಿ ಉಳಿಯುತ್ತದೆ' ಎಂದು ಕ್ಯಾಪ್ಷನ್‌ ಬರೆದು ಜೊತೆಗೆ ಒಂದು ಸಣ್ಣ ವಿಡಿಯೋ ಕ್ಲಿಪ್‌ನ್ನು ಡಾರ್ಲಿಂಗ್ ಕೃಷ್ಣ ಪೋಸ್ಟ್ ಮಾಡಿದ್ದರು. 'ಲಕ್ಕಿಮ್ಯಾನ್​' ಚಿತ್ರದಲ್ಲಿ ಅಪ್ಪು ನಟನೆಯ ದೃಶ್ಯದ ತುಣುಕುಗಳು ಸೋಶಿಯಲ್​ ಮೀಡಿಯಾದಲ್ಲಿ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಇದನ್ನು ನೋಡಿ ನೆಟ್ಟಿಗರು ಭಾವುಕರಾಗಿದ್ದರು.

Puneeth Rajkumar: ಲಕ್ಕಿಮ್ಯಾನ್ ಚಿತ್ರದ ಅಪ್ಪು ವಿಡಿಯೋ ಝಲಕ್ ಹಂಚಿಕೊಂಡ ಡಾರ್ಲಿಂಗ್​ ಕೃಷ್ಣ

ಇನ್ನು  'ಲಕ್ಕಿಮ್ಯಾನ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಸಂಗೀತಾ ಶೃಂಗೇರಿ (Sangeetha Sringeri) ನಟಿಸಿದ್ದು, ಮತ್ತೊಬ್ಬ ನಾಯಕಿಯಾಗಿ ರೋಶಿನಿ ಪ್ರಕಾಶ್ (Roshini Prakash) ಕಾಣಿಸಿಕೊಂಡಿದ್ದಾರೆ. ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ, ಮಾಳವಿಕಾ ಅವಿನಾಶ್​ ಸೇರಿದಂತೆ ಅನೇಕ ಕಲಾವಿದರು ಚಿತ್ರದ ತಾರಬಳಗದಲ್ಲಿದ್ದಾರೆ. ಮುಖ್ಯವಾಗಿ ಪುನೀತ್ ರಾಜ್‌ಕುಮಾರ್ ಹಾಗೂ ಪ್ರಭುದೇವ ಅವರು ಈ ಚಿತ್ರದ ಹಾಡೊಂದರಲ್ಲಿ ಜೊತೆಯಾಗಿ ಡ್ಯಾನ್ಸ್ (Dance) ಮಾಡಿದ್ದಾರೆ. ಡಾ. ರಾಜ್​ಕುಮಾರ್ (Dr.Rajkumar) ಅವರ ಮೇಲೆ ಬರೆದ ಈ ಹಾಡಿನಲ್ಲಿ ಇದೇ ಮೊದಲ ಬಾರಿಗೆ ಇವರಿಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡುವಂತಾಗಿದೆ. 
 

Follow Us:
Download App:
  • android
  • ios