ನಾಲ್ಕನೇ ಸ್ಥಾನದಲ್ಲಿ ಇರುವವರು ಬಾಲಿವುಡ್ ನಟ ಹೃತಿಕ್ ರೋಷನ್. ಅವರು ತಮ್ಮ ಸ್ಪೋರ್ಟ್ಸ್ ಬ್ಯಾಂಡ್ ಎಚ್‌ಆರ್‌ಎಕ್ಸ್ ಮೂಲಕ ಸಾಕಷ್ಟು ಹಣ ದುಡಿಯುತ್ತಾರೆ. ಅವರ ಆಸ್ತಿ 3100 ಕೋಟಿ ರೂಪಾಯಿ ಎನ್ನಲಾಗಿದೆ. ಐದನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಇದ್ದಾರೆ. ಟಾಪ್ 10ರಲ್ಲಿ ಯಾರೆಲ್ಲಾ ಇದ್ದಾರೆ ನೋಡಿ..
ಭಾರತದ ಟಾಪ್ 10 ಶ್ರೀಮಂತರ ಪಟ್ಟಿ
ಭಾರತದ ಅನೇಕ ಸಿನಿಮಾ ನಟರು, ಕಲಾವಿದರು ಸಾವಿರಾರು ಕೋಟಿ ರೂಪಾಯಿಗೆ ಒಡೆಯರು. ಅವರ ಬಳಿ ಬಹಳಷ್ಟು ಕೋಟಿಗೆ ಬಾಳುವ ಆಸ್ತಿ ಇದೆ. ಅವರಲ್ಲಿ ಕೆಲವರು ಸಿನಿಮಾದಲ್ಲಿ ನಟಿಸಿ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಕಲಾವಿದರು, ನಟನೆಯ ಜೊತೆಗೆ ನಿರ್ಮಾಣದಲ್ಲಿ ಸಹ ಕೆಲವರು ತೊಡಗಿಕೊಂಡಿದ್ದಾರೆ. ಇನ್ನು, ಹಲವರು ಸಾಕಷ್ಟು ಉದ್ಯಮಗಳಲ್ಲಿ ಹೂಡಿಕೆ ಮಾಡುತ್ತಾರೆ, ಸಿಕ್ಕಾಪಟ್ಟೆ ಲಾಭ ಗಳಿಸುತ್ತಾರೆ.
ಭಾರತದ ಟಾಪ್ 10 ಶ್ರೀಮಂತ ನಟರ ಪಟ್ಟಿ ಇಲ್ಲಿದೆ ನೋಡಿ-
ಈ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಮೊದಲ ಸ್ಥಾನದಲ್ಲಿದ್ದಾರೆ. ಶಾರುಖ್ ಖಾನ್ ಆಸ್ತಿ 12,931 ಕೋಟಿ ರೂಪಾಯಿ ಎನ್ನಲಾಗಿದೆ. ಭಾರತ ಮಾತ್ರವಲ್ಲ, ವಿಶ್ವದ ಶ್ರೀಮಂತ ಹೀರೋಗಳ ಪಟ್ಟಿಯಲ್ಲೂ ಶಾರುಖ್ ಖಾನ್ ಅವರಿಗೆ ಸ್ಥಾನ ಇದೆ. ಶ್ರೀಮಂತರ ರೇಸ್‌ನಲ್ಲಿ ವಿಶ್ವದ ಅನೇಕ ನಟನಟಿಯರನ್ನು ಅವರು ಹಿಂದಿಕ್ಕಿದ್ದಾರೆ.
ಎರಡನೇ ಸ್ಥಾನದಲ್ಲಿ ಟಾಲಿವುಡ್ ನಟ ಅಕ್ಕಿನೇನಿ ನಾಗಾರ್ಜುನ (Nagarjuna Akkineni) ಇದ್ದಾರೆ. ಈ ನಟ ಮೊದಲಿನಿಂದಲೂ ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿರುವವರು. ಅವರಿಗೆ ಪಿತ್ರಾರ್ಜಿತ ಆಸ್ತಿಯೇ ಸಾಕಷ್ಟು ಬಂದಿದೆ. ಅನೇಕ ಪ್ರಾಪರ್ಟಿಗಳು ನಟ ನಾಗಾರ್ಜುನ ಅವರ ಹೆಸರಿನಲ್ಲಿಯೇ ಇದೆ. ಅವರ ಒಟ್ಟೂ ಆಸ್ತಿ 5 ಸಾವಿರ ಕೋಟಿ ರೂಪಾಯಿ ಎನ್ನಲಾಗಿದೆ. ಮೂರನೇ ಸ್ಥಾನದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಇದ್ದಾರೆ. ಇವರ ಆಸ್ತಿ 3225 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ ಎಂಬ ಮಾತಿದೆ.
ಯಾರೆಲ್ಲಾ ಇದ್ದಾರೆ ನೋಡಿ
ನಾಲ್ಕನೇ ಸ್ಥಾನದಲ್ಲಿ ಇರುವವರು ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan). ಅವರು ತಮ್ಮ ಸ್ಪೋರ್ಟ್ಸ್ ಬ್ಯಾಂಡ್ ಎಚ್‌ಆರ್‌ಎಕ್ಸ್ ಮೂಲಕ ಸಾಕಷ್ಟು ಹಣ ದುಡಿಯುತ್ತಾರೆ. ಅವರ ಆಸ್ತಿ 3100 ಕೋಟಿ ರೂಪಾಯಿ ಎನ್ನಲಾಗಿದೆ. ಐದನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ (Akshay Kumar) ಇದ್ದಾರೆ. ಅವರ ಆಸ್ತಿ 2,250 ಕೋಟಿ ರೂಪಾಯಿ. ಆರನೇ ಸ್ಥಾನದಲ್ಲಿ ಆಮಿರ್ ಖಾನ್ (Aamir Khan) ಇದ್ದಾರೆ. ಅವರು 1860 ಕೋಟಿ ರೂಪಾಯಿ ಒಡೆಯರು ಎನ್ನಲಾಗಿದೆ.
ಏಳನೇ ಸ್ಥಾನದಲ್ಲಿ ಚಿರಂಜೀವಿ (Chiranjeevi) ಇದ್ದಾರೆ. ಅವರ ಆಸ್ತಿ 1750 ಕೋಟಿ ರೂಪಾಯಿಗಳು ಎನ್ನಲಾಗಿದೆ. ಅಮಿತಾಭ್ ಬಚ್ಚನ್ (Amitabh Bachchan) ಅವರು 1680 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾಡಿದ್ದು, ಎಂಟನೇ ಸ್ಥಾನದಲ್ಲಿ ಇದ್ದಾರೆ. ತೆಲುಗು ನಟ ವೆಂಕಟೇಶ್ (Venkatesh) ಅವರು 1650 ರೂಪಾಯಿಗಳ ಆಸ್ತಿಯೊಂದಿಗೆ ಒಂಬತ್ತು ಹಾಗು ಟಾಲಿವುಡ್ ನಟ ರಾಮ್ ಚರಣ್ (Ram Charan) ಅವರು 1630 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಮೂಲಕ ಹತ್ತನೇ ಸ್ಥಾನದಲ್ಲಿದ್ದಾರೆ. ಇವರಲ್ಲಿ ಹಲವು ನಟರ ಬಳಿ ಖಾಸಗಿ ವಿಮಾನ ಕೂಡ ಇದೆ ಎಂಬುದು ವಿಶೇಷ.
ಇನ್ನು, ಟಾಪ್ 10 ಅಲ್ಲದಿದ್ದರೂ ಶ್ರೀಮಂತ ನಟರುಗಳ ಪಟ್ಟಿಯಲ್ಲಿ ಅಲ್ಲು ಅರ್ಜುನ್, ರಜನಿಕಾಂತ್ ಹಾಗೂ ಮಹೇಶ್ ಬಾಬು ಕೂಡ ಇದ್ದಾರೆ. ಇನ್ನು ನಟಿಯರಲ್ಲಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಹಾಗೂ ನಯನತಾರಾ ಸೇರಿದಂತೆ ಹಲವು ನಟಿಯರೂ ಕೂಡ ಈ ಲಿಸ್ಟ್‌ನಲ್ಲಿ ಇದ್ದಾರೆ. ಆದರೆ ಟಾಪ್ 10 ಅಂತ ಬಂದಾಗ ಮೇಲಿನ ಹೆಸರುಗಳು ಕಾಣಿಸಿಕೊಳ್ಳುತ್ತವೆ. ಅಚ್ಚರಿ ಎಂಬಂತೆ, ಶ್ರೀಮಂತ ನಟರ ಪಟ್ಟಿಯಲ್ಲಿ ಕನ್ನಡದ ಯಾವುದೇ ಒಬ್ಬ ಸೆಲೆಬ್ರಿಟಿ ಇಲ್ಲ.


