ಯಶ್ ಟಾಕ್ಸಿಕ್ ಸಿನಿಮಾದ ಬಿಡುಗಡೆ ಆಗಿರುವ ಟೀಸರ್ ಚರ್ಚೆಗೆ ಒಳಗಾಗಿದೆ. ಈ ಚಿತ್ರದಲ್ಲಿ ರಿಚ್ ಮೇಕಿಂಗ್ ಜೊತೆಗೆ, ಹಸಿಬಿಸಿ ಸೀನ್ ಸೂಚ್ಯವಾಗಿ ಕೊಟ್ಟಿರುವ ಬಗ್ಗೆ ಜಗತ್ತಿನ ತುಂಬೆಲ್ಲಾ ಈಗ ಡಿಬೆಟ್ ಜೋರಾಗಿದೆ. ಯಶ್ ಅಭಿಮಾನಿಗಳಿಗೆ ಟಾಕ್ಸಿಕ್ ಟೀಸರ್ ನೋಡಿ ಖುಷಿ-ಥ್ರಿಲ್-ಶಾಕಿಂಗ್ ಅನುಭವಿಸುತ್ತಿದ್ದಾರೆ.
ಟಾಕ್ಸಿಕ್ ಸಿನಿಮಾದ ಕ್ಯಾರೆಕ್ಟರ್ ಹೆಸರಿಗೂ ಯಶ್ ಗೂ ಇದೇ ಸ್ಪೆಷಲ್ ನಂಟು!
ಸದ್ಯಕ್ಕೆ ಎಲ್ಲಾ ಕಡೆ ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್ ವರ್ಲ್ಡ್ 'ಟಾಕ್ಸಿಕ್' ಸಿನಿಮಾದ್ದೇ ಮಾತು. ಮೊನ್ನೆ ಯಶ್ ಹುಟ್ಟುಹಬ್ಬದಂದು (08 ಜನವರಿ) ಟಾಕ್ಸಿಕ್ ಸಿನಿಮಾ ಟೀಸರ್ ರಿಲೀಸ್ ಆಗಿದ್ದು, ಇದೀಗ ಜಗತ್ತಿನ ತುಂಬೆಲ್ಲಾ ಈ ಟೀಸರ್ ಹಾಗೂ ಯಶ್ ಅವರ ಬಗ್ಗೆಯೇ ಮಾತುಕತೆಗಳು ನಡೆಯುತ್ತಿವೆ. ಕಾರಣ, ಮೊದಲನೆಯದಾಗಿ ಟಾಕ್ಸಿಕ್ ಸಿನಿಮಾದ ಹಾಲಿವುಡ್ ರೇಂಜ್ ಮೇಕಿಂಗ್.. ಎರಡನೆಯದಾಗಿ ಈ ಚಿತ್ರದಲ್ಲಿರುವ ಊಹಿಸಲಾಗದ ಹಸಿಬಿಸಿ ದೃಶ್ಯಗಳು.
ಹೌದು, ನಟ ಯಶ್ ಅವರ ಸಿನಿಮಾದಲ್ಲಿ ಅನಿರೀಕ್ಷಿತ ಎಂಬಂತೆ ಟಾಕ್ಸಿಕ್ ಸಿನಿಮಾದ ಬಿಡುಗಡೆ ಆಗಿರುವ ಟೀಸರ್ ಚರ್ಚೆಗೆ ಒಳಗಾಗಿದೆ. ಈ ಚಿತ್ರದಲ್ಲಿ ರಿಚ್ ಮೇಕಿಂಗ್ ಜೊತೆಗೆ, ಹಸಿಬಿಸಿ ಸೀನ್ ಸೂಚ್ಯವಾಗಿ ಕೊಟ್ಟಿರುವ ಬಗ್ಗೆ ಜಗತ್ತಿನ ತುಂಬೆಲ್ಲಾ ಈಗ ಡಿಬೆಟ್ ಜೋರಾಗಿದೆ. ಯಶ್ ಅಭಿಮಾನಿಗಳು ಅವರ ಟಾಕ್ಸಿಕ್ ಟೀಸರ್ ನೋಡಿ ಖುಷಿಯ ಜೊತೆಗೆ ಥ್ರಿಲ್ ಹಾಗೂ ಶಾಕಿಂಗ್ ಏಕಕಾಲದಲ್ಲಿ ಅನುಭವಿಸುತ್ತಿದ್ದಾರೆ. ಹಾಗಿದೆ ಕನ್ನಡ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ಟಾಕ್ಸಿಕ್ ಟೀಸರ್.
ಈ ಚಿತ್ರದಲ್ಲಿ, ಟೀಸರ್‌ನಲ್ಲಿ ರಿವೀಲ್ ಮಾಡಿರುವಂತೆ, ಈ ಚಿತ್ರದಲ್ಲಿ ನಟ ಯಶ್ ಅವರ ಪಾತ್ರದ ಹೆಸರು 'ರಾಯ'.. ಇದು ಬೇರೆ ಏನೋ ಅಲ್ಲ, ಬದಲಿಗೆ ಇದು 'ರಾಧಿಕಾ-ಯಶ್'.. ಈ ಸಂಗತಿ ಇದೀಗ ಬಯಲಾಗಿದೆ. ಯಶ್ ಜಾಣತನಕ್ಕೆ, ಪ್ತನಿಯ ಮೇಲಿನ ಪ್ರೀತಿಗೆ ಇದೀಗ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾತ್ರದ ಹೆಸರು RAYA. ಈ ಹೆಸರು ಯಶ್ ಅವರ ಇಡೀ ಕುಟುಂಬದಲ್ಲಿಯೂ ಹಾಸುಹೊಕ್ಕಾಗಿದೆ. ಮಾಹಿತಿ ಇಲ್ಲಿದೆ ನೋಡಿ.. ಈ ಹೆಸರಿಗೂ ಯಶ್ ಅವರಿಗೂ ಇದೆ ಸ್ಪೆಷಲ್ ನಂಟು. ಯಶ್ ವೈಯಕ್ತಿಕ ಜೀವನದಲ್ಲಿ ಇಂಗ್ಲಿಷ್ ವರ್ಣಮಾಲೆಯ ಆರ್, ವೈ ಹಾಗೂ ಎಗೆ ವಿಶೇಷ ಸ್ಥಾನವಿದೆ.
ಪತ್ನಿ ರಾಧಿಕಾ ಹೆಸರು ಆರಂಭವಾಗುವುದು ಆರ್& ಎ ಲೆಟರ್ ನಿಂದ. ಯಶ್ ಹೆಸರು ಆರಂಭವಾಗುವುದು ವೈ, ಎ ಲೆಟರ್ ನಿಂದ. ಮಕ್ಕಳಾದ ಐರಾ ಹೆಸರು ಆರಂಭವಾಗುವುದು ಎ, ವೈ ಲೆಟರ್ ನಿಂದ.. ಮಗ ಯಥರ್ವ್ ಹೆಸರು ಆರಂಭವಾಗುವುದೂ ವೈ, ಎ ಲೆಟರ್ ನಿಂದ.
ತಮ್ಮ ಮಕ್ಕಳ ಹೆಸರಿನಲ್ಲೂ ಪತ್ನಿ ರಾಧಿಕಾ ಮತ್ತು ತಮ್ಮ ಹೆಸರಿನ ಲೆಟರ್ ಗಳೇ ಬರುವಂತೆ ಯಶ್ ಹೆಸರಿಟ್ಟಿದ್ದಾರೆ. ಇದೀಗ ಟಾಕ್ಸಿಕ್ ಸಿನಿಮಾದ ಪಾತ್ರದ ವಿಚಾರಕ್ಕೆ ಬರುವುದಾದರೆ 'ರಾಯ' ಹೆಸರಿನಲ್ಲಿ ಆರ್, ಎ, ವೈ ಲೆಟರ್ ಇದೆ.
ಮೊದಲ ಎರಡು ಲೆಟರ್ ಆರ್ & ಎ ಅಂದರೆ ಪತ್ನಿ ರಾಧಿಕಾ ಹೆಸರಿನ ಲೆಟರ್ ಗಳು. ಕೊನೆಯ ಎರಡು ಲೆಟರ್ ಗಳು ವೈ, ಎ. ಅಂದರೆ ಇದು ಯಶ್ ಹೆಸರಿನ ಆರಂಭದ ಲೆಟರ್ ಗಳು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಈ ಹೆಸರಿಟ್ಟುಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಸುಳ್ಳೇ ಆಗಿದ್ದರೂ ಕೂಡ ರಾಧಿಕಾ-ಯಶ್ ಹೆಸರು 'ರಾಯ'ದಲ್ಲಿ ಇರೋದಂತೂ ಸತ್ಯ.


