'ಜಾತಿರತ್ನಾಲು' ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಜಯ್ ದೇವರಕೊಂಡ ಸ್ನೇಹಿತರ ಬಗ್ಗೆ ಮಾತನಾಡಿದ್ದಾರೆ.
ಟಾಲಿವುಡ್ ರೊಮ್ಯಾಂಟಿಕ್ ಮ್ಯಾನ್, ಕಿಸ್ಸಿಂಗ್ ಕಿಂಗ್ ವಿಜಯ್ ದೇವರಕೊಂಡ ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿರುವ ನಟ. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಹುಡುಗಿಯರ ಹೃದಯ ಕದ್ದ ಈ ಪೋರ, ಚಿತ್ರರಂಗಕ್ಕೆ ಕಾಲಿಡಲು ಸಹಾಯ ಮಾಡಿದ ಗೆಳೆಯರ ಬಗ್ಗೆ ಮೊದಲ ಬಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
ಪ್ರೀತಿಯ ಪೆಟ್ ಜೊತೆ ದೇವರಕೊಂಡ ಫನ್: ಇಲ್ನೋಡಿ ಫೋಟೋಸ್
ಗೆಳೆಯರ ಜೊತೆ ಅನೇಕ ಸಿನಿಮಾಗಳಲ್ಲಿ ವಿಜಯ್ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ವಿಜಯ್ ಮೊದಲ ಸಿನಿಮಾ 'ಪೆಳ್ಳಿ ಚೂಪುಲು' ಎಂದು ಹಲವರಿಗೆ ತಿಳಿದಿಲ್ಲ. 'ಪೆಳ್ಳಿ ಚೂಪುಲು' ಹಾಗೂ 'ದ್ವಾರಕ' ಸಿನಿಮಾ ಅಷ್ಟೇನೂ ಹಿಟ್ ಆಗಲಿಲ್ಲ ಆದರೆ ವಿಜಯ್‌ಗೆ ಬ್ರೇಕ್ ಕೊಟ್ಟ ಸಿನಿಮಾವೇ ಅರ್ಜುನ್ ರೆಡ್ಡಿ...ಅಲ್ಲಿಂದ ಆರಂಭವಾದ ಜರ್ನಿ ಇದೀಗ ಬಾಲಿವುಡ್ ತನಕ ಮುಟ್ಟಿದೆ. ತಮ್ಮ ಸಿನಿ ಜರ್ನಿಗೆ ಕಾರಣವಾದ ಮುಖ್ಯ ವ್ಯಕ್ತಿ ನಾಗ ಆಶ್ವನ್ ಬಗ್ಗೆ ವಿಜಯ್ ಮಾತನಾಡಿದ್ದಾರೆ.

ನಾಗ್ ಅಶ್ವಿನ್ ನಿರ್ಮಿಸಿರುವ 'ಜಾತಿರತ್ನಾಲು' ಸಿನಿಮಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜಯ್ ದೇವರಕೊಂಡ ಗೆಳೆಯನ ಸಹಾಯ ನೆನೆದು ಭಾವುಕರಾಗಿದ್ದಾರೆ. 'ನಾವು ಒಟ್ಟಿಗೇ ಈ ಬಣ್ಣದ ಲೋಕ್ಕೆ ಕಾಲಿಟ್ಟೆವು. ನೂರು ನೂರು ರೂ. ಹಣ ಹೊಂದಿಸಿಕೊಂಡು ಒಟ್ಟಿಗೆ ತಿಂದೆವು. ಒಟ್ಟಿಗೆ ಕುಡಿದೆವು.ರಾತ್ರಿ ನಿದ್ದೆ ಮಾಡದೇ ಕನಸುಗಳನ್ನು ಕಂಡೆವು. ಆಗ ನಾವು ನಟರಾಗಬೇಕು ಎಂದು ಕನಸು ಕಂಡೆವು. ಅದರಂತೆ ಈಗ ಆಗಿದ್ದೀವಿ,' ಎಂದಿದ್ದಾರೆ. ಜಾತಿರತ್ನಾಲು ಚಿತ್ರದಲ್ಲಿ ಅಭಿನಯಿಸಿರುವ ನವೀನ್ ಪೋಲಿಶೆಟ್ಟಿ, ಪ್ರಿಯದರ್ಶನ್ ಹಾಗೂ ರಾಹುಲ್ ರಾಮಕೃಷ್ಣ ಕೂಡ ವಿಜಯ್ ಆಪ್ತ ಸ್ನೇಹಿತರು.
ವಿಜಯ್ ದೇವರಕೊಂಡ ಅನನ್ಯಾ ಪಾಂಡೆ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
'ನಾಗ್ ಅಶ್ವಿನ್ ಸಿನಿಮಾ ನಿರ್ದೇಶಕರ ಜೊತೆ ಜಗಳವಾಡಿ, ನನಗೆ ಲೈಫ್ ಈಸ್ ಬ್ಯೂಟಿಫುಲ್ ಚಿತ್ರಕ್ಕೆ ಪಾತ್ರ ಕೊಡಿಸಿದ್ದರು, ನಾನು ಹಾಗೂ ನವೀನ್ ಇಬ್ಬರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀವಿ. ನಾನು ಇಂದು ಈ ಹಂತದಲ್ಲಿ ಇದ್ದೀನೆಂದರೆ ಅದಕ್ಕೆ ನಾಗ್ ಅಶ್ವಿನ್ ಕಾರಣ,' ಎಂದು ವಿಜಯ್ ಭಾವುಕರಾಗಿ ಹೇಳಿದ್ದಾರೆ. ತುಂಬಾ Practical ಆಗಿ ಮಾತನಾಡುವ ವಿಜಯ್ ದೇವರಕೊಂಡ ಮೊದಲ ಬಾರಿ ಭಾವುಕರಾಗಿರುವುದನ್ನು ಕಂಡು ಅಭಿಮಾನಿಗಳು ಅಚ್ಚರಿ ಪಟ್ಟರು.
ಸದ್ಯ ಅನನ್ಯಾ ಪಾಂಡೆ ಜೊತೆ ಹಿಂದಿ ಸಿನಿಮಾ 'ಫೈಟರ್' ಕೊನೇ ಹಂತದ ಚಿತ್ರೀಕರಣದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಈ ವರ್ಷ ಸಿನಿಮಾ ತೆರೆಗೆ ಬರಲಿದೆ ಎಂದು ಅಭಿಮಾನಿಗಳಿಗೆ ವಿಜಯ್ ತಿಳಿಸಿದ್ದಾರೆ.
