Asianet Suvarna News Asianet Suvarna News

ತಂದೆ ಚಿರಂಜೀವಿ ಹೆಸರಿನಲ್ಲಿ ಚಾರಿಟಬಲ್‌ ಟ್ರಸ್ಟ್‌: 25 ಭಾಷೆಗಳಲ್ಲಿ ವೆಬ್‌ಸೈಟ್‌ ಉದ್ಘಾಟಿಸಿದ ರಾಮ್ ಚರಣ್

25 ಭಾಷೆಗಳಲ್ಲಿ ಮೆಗಾ ಸ್ಟಾರ್ ಬ್ಲಾಡ್‌ ಹಾಗೂ ಕಣ್ಣಿನ ಬ್ಯಾಂಕ್‌ ವೆಬ್‌ಸೈಟ್‌ ಆರಂಭ. ಜನರ ಸೇವೆಗೆ ಮುಂದಾದ ರಾಮ್ ಚರಣ್.

Tollywood Ram Charan Teja launches Chiranjeevi charitable trust vcs
Author
Bangalore, First Published Oct 21, 2021, 2:16 PM IST

ತೆಲುಗು ಚಿತ್ರರಂಗದ (Tollywood) ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಯಾರಿಗೆ ಗೊತ್ತಿಲ್ಲ ಹೇಳಿ? ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಬ್ಯುಸಿನೆಸ್ ಹಾಗೂ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡು, ಜನರಿಗೆ ಹತ್ತಿರವಾಗಿದ್ದಾರೆ. ಮನೆಯಲ್ಲಿರುವ ಗಂಡಸರು ಸಿನಿಮಾ ಅಂತ ಬ್ಯುಸಿಯಾದರೆ, ಹೆಣ್ಣು ಮಕ್ಕಳು ಸಮಾಜಮುಖಿ ಕಾರ್ಯಗಳಲ್ಲಿ ಮುಂದು. ಇಷ್ಟು ದಿನ ಚಿರಂಜೀವಿ ಅವರು ರಕ್ತ ಬ್ಯಾಂಕ್‌ (Blood Bank) ಮಾತ್ರ ಹೊಂದಿದ್ದರು. ಆದರೀಗ ಕಣ್ಣಿನ ಬ್ಯಾಂಕ್ (Eye Bank) ಕೂಡ ಆರಂಭಿಸಿದ್ದಾರೆ.

ಸಾಯಿ ಪಲ್ಲವಿ ತಂಗಿ ಪಾತ್ರಕ್ಕೆ ಬೇಡ, ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್‌: ನಟ ಚಿರಂಜೀವಿ

ಹೌದು! ಅಕ್ಟೋಬರ್18ರಂದು ಚಿರಂಜೀವಿ ಪುತ್ರ ರಾಮ್ ಚರಣ್ (Ram Charan) ತಮ್ಮ ರಕ್ತ ಬ್ಯಾಂಕ್‌ ಜೊತೆ ಕಣ್ಣಿನ ಬ್ಯಾಂಕ್ (Eye Bank) ತೆರೆಯುತ್ತಿರುವುದಾಗಿ ಅನೌನ್ಸ್ ಮಾಡಿದ್ದಾರೆ. ಅಂದೇ ವೆಬ್‌ಸೈಟ್‌ (Website) ಉದ್ಘಾಟನೆ ಮಾಡಿ ಜನರಲ್ಲಿ ರಕ್ತ ಮತ್ತು ಕಣ್ಣಿನ ದಾನ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. 25 ಭಾಷೆಗಳಲ್ಲಿ ಲಭ್ಯವಿರುವ ಈ ವೆಬ್‌ಸೈಟ್ ದಿನದ  24 ಗಂಟೆಯೂ ಸೇವೆಯಲ್ಲಿರುತ್ತದೆ.  ಹೈದರಾಬಾದ್‌ನ (Hyderabad) ಜೂಬ್ಲಿ ಹಿಲ್ಸ್‌ನಲ್ಲಿ ಕಾರ್ಯಕ್ರಮ ನಡೆದಿದ್ದು, ಭಾರತದ ಅನೇಕ ಮಾಧ್ಯಮಗಳಿಗೆ ಆಹ್ವಾನ ನೀಡಲಾಗಿತ್ತು. 

Tollywood Ram Charan Teja launches Chiranjeevi charitable trust vcs

ಕೊರೋನಾ ಲಾಕ್‌ಡೌನ್‌ (Covid19 Lockdown) ಸಮಯದಲ್ಲಿ ಚಿರಂಜೀವಿ ಚಾರಿಟಿ ಲೆಕ್ಕವಿಲ್ಲದಷ್ಟು ಬಾಟಲ್‌ಗಳ ರಕ್ತ ಬೇಡಿಕೆಯನ್ನು ಪೂರೈಸಿದೆ. ಬಡವ, ಶ್ರೀಮಂತ ಎಂದು ಲೆಕ್ಕಿಸದೇ ಮಾಡುವ ಸೇವೆ ಅದ್ಭುತ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಎಸ್‌ಎಸ್‌ ರಾಜಮೌಳಿ (SS Rajamouli) ಅವರು ಆರ್‌ಆರ್‌ಆರ್‌ (RRR) ಸಿನಿಮಾ ತಂಡವೂ ಈ ಚಾರಿಟಿ (Charity) ಜೊತೆ ಕೈ ಜೋಡಿಸಿ, ಲಾಕ್‌ಡೌನ್‌ನಿಂದ ಚಿತ್ರರಂಗದಲ್ಲಿ ಕೆಲಸ ಮಾಡುವ ಯಾರಿಗೂ ತೊಂದರೆ ಆಗಬಾರದು ಎಂದು ಉಚಿತ ಆಹಾರ ಕಿಟ್ (Food kit) ಹಾಗೂ ಸ್ವಲ್ಪ ಹಣ (Money)ವನ್ನು ಅಗತ್ಯ ಇರೋರ  ಕೈ ಸೇರಿಸಿದ್ದಾರೆ. ಅಲ್ಲದೇ ಚಿತ್ರರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಉಚಿತ ವ್ಯಾಕ್ಸಿನ್‌ (Vaccine) ಕೊಡಿಸಿದ್ದಾರೆ. 

ವಿಜಯ್ ದೇವರಕೊಂಡ ನಿರಾಕರಿಸಿದ ಚಿತ್ರಕತೆ ಒಪ್ಪಿಕೊಂಡ ಮೆಗಾ ಸ್ಟಾರ್ ಚಿರಂಜೀವಿ!

ವೆಬ್‌ಸೈಟ್‌ ಉದ್ಘಾಟನೆ ವೇಳೆ ಚಿರಂಜೀವಿ ನಡೆದು ಬಂದ ಹಾದಿ, ಚಿತ್ರರಂಗದಲ್ಲಿ ನಿರ್ಮಾಪಕರೊಂದಿಗೆ (Producer) ಇದ್ದ ಸಂಬಂಧ ಹಾಗೂ ಯಾವೆಲ್ಲಾ ರೀತಿ ಕಷ್ಟಗಳನ್ನು ಎದುರಿಸಿಕೊಂಡು ಬಂದಿದ್ದಾರೆ ಎಂದು ರಾಮ್ ಚರಣ್ ಮಾತನಾಡಿದ್ದಾರೆ. ಅಯ್ಯಪ್ಪ ಸ್ವಾಮಿ (Ayyappa Swamy) ಮಾಲೆ ಧರಿಸಿರುವ ರಾಮ್ ಚರಣ್ ಕಾರ್ಯಕ್ರಮಕ್ಕೂ ಹಾಗೆಯೇ ಆಗಮಿಸಿದ್ದರು. ಬರಿಗಾಲಿನಲ್ಲಿ ಬಂದವರು ಅಲ್ಲಿದ್ದ ಗಣ್ಯರನ್ನು ಸ್ವಾಮಿ ಎಂದು ಮಾತನಾಡಿದ್ದಾರೆ.

Follow Us:
Download App:
  • android
  • ios