Asianet Suvarna News Asianet Suvarna News

ಸಾಯಿ ಪಲ್ಲವಿ ತಂಗಿ ಪಾತ್ರಕ್ಕೆ ಬೇಡ, ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್‌: ನಟ ಚಿರಂಜೀವಿ

ಮೆಗಾ ಸ್ಟಾರ್ ಹಾಗೂ ಸಾಯಿ ಪಲ್ಲವಿ ಕಾಂಬಿನೇಷನ್‌ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಣ್ಣ ಭರವಸೆ ಮೂಡಿತ್ತು. ಪಲ್ಲವಿ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಚಿರಂಜೀವಿ ಏನ್ ಹೇಳಿದ್ದಾರೆ ನೋಡಿ... 

Tollywood Chiranjeevi thanks Sai pallavi for rejecting his film vcs
Author
Bangalore, First Published Sep 20, 2021, 1:19 PM IST
  • Facebook
  • Twitter
  • Whatsapp

ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿ ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡಬೇಕು ಎಂದು ಒಮ್ಮೆ ಆದರೂ ಸ್ಟಾರ್ ನಟರು ಪ್ಲಾನ್ ಮಾಡಿರುತ್ತಾರೆ. ಹಾಗೆಯೇ ಮೆಗಾ ಸ್ಟಾರ್ ಚಿರಂಜೀವಿ ಕೂಡ ಅಂದುಕೊಂಡಿದ್ದರಂತೆ. ಆದರೆ ಅವರಿಬ್ಬರಿಗೆ ಕೂಡಿ ಬಂದಿದ್ದ ಚಿತ್ರ ಕಥೆಯನ್ನು ಪಲ್ಲವಿ ಅವರೇ ರಿಜೆಕ್ಟ್ ಮಾಡಿದ್ದಾರಂತೆ. ಇದರ ಬಗ್ಗೆ ಸ್ವತಃ ಚಿರಂಜೀವಿ ಅವರೇ ಹೇಳಿ, ಥ್ಯಾಂಕ್ಸ್ ಅಂದಿದ್ದಾರೆ. 

ಸಾಯಿ ಪಲ್ಲವಿ, ರಶ್ಮಿಕಾ, ದೇವರಕೊಂಡ: ಬೋರ್ಡ್‌ ಎಕ್ಸಾಂ ಅಂಕ ತಿಳಿದರೆ ಶಾಕ್‌ ಆಗುತ್ತೆ!

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಲವ್‌ ಸ್ಟೋರಿ ಚಿತ್ರದ ಈವೆಂಟ್‌ನಲ್ಲಿ ಮಾತನಾಡಿದ ಚಿರಂಜೀವಿ, 'ನನ್ನ ತಮ್ಮನ ಮಗ ವರುಣ್ ತೇಜ್ ಸಾಯಿ ಪಲ್ಲವಿ ಜೊತೆಗೆ ನಟಿಸಿದ್ದ. ಆ ಸಿನಿಮಾದ ಹಾಡೊಂದನ್ನು ನನಗೆ ತೋರಿಸಿದ್ದ ಆಗ ನಾನು ಅವನ ಡ್ಯಾನ್ಸ್ ನೋಡುವ ಬದಲು ಪಲ್ಲವಿ ಡ್ಯಾನ್ಸ್ ನೋಡಿ ಫಿದಾ ಆಗಿದ್ದೆ. ಅವನಿಗೂ ಅದನ್ನೇ ಹೇಳಿದೆ. ನಂತರ ನನ್ನದೊಂದು ಸಿನಿಮಾದಲ್ಲಿ ಪಲ್ಲವಿಗೆ ತಂಗಿ ಪಾತ್ರಕ್ಕೆ ಆಯ್ಕೆ ಮಾಡೋಣ ಎಂದು ಮಾತು ಬಂತು. ಸಾಯಿ ಪಲ್ಲವಿ ಇದನ್ನು ರಿಜೆಕ್ಟ್ ಮಾಡಲಿ ಎಂದುಕೊಂಡಿದ್ದೆ. ಅದು ಹಾಗೆಯೇ ಆಯಿತು.  ಅದಕ್ಕೆ ನನ್ನ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತೇನೆ,' ಎಂದು ಚಿರಂಜೀವಿ ಮಾತನಾಡಿದ್ದಾರೆ. 

Tollywood Chiranjeevi thanks Sai pallavi for rejecting his film vcs

'ಸಾಯಿ ಪಲ್ಲವಿ ಅದ್ಭುತ ಡ್ಯಾನ್ಸರ್. ಅವರಂತ ಪ್ರತಿಭಾವಂತ ನಟಿಯ ಜೊತೆ ಒಂದು ಹಾಡಿನಲ್ಲಿ ಹೆಜ್ಜೆ ಹಾಕಬೇಕು. ಮಾಡಿದರೆ ಒಂದು ಸೂಪರ್ ರೊಮ್ಯಾಂಟಿಕ್‌ ಗೀತೆಗೆ ಡ್ಯಾನ್ಸ್ ಮಾಡಬೇಕು. ತಂಗಿ ಪಾತ್ರ ಮಾಡಿದರೆ ಚೆನ್ನಾಗಿರುವುದಿಲ್ಲ,' ಎಂದು ಚಿರಂಜೀವಿ ಹಾಸ್ಯ ಮಾಡುತ್ತಾ ಮಾತನಾಡುತ್ತಾರೆ. 'ಇಲ್ಲ ಸರ್ ಅದು ಒಂದು ರಿಮೇಕ್ ಸಿನಿಮಾ ಅನ್ನುವ ಕಾರಣ ನಾನು ರಿಜೆಕ್ಟ್ ಮಾಡಿದೆ. ನಿಮ್ಮ ಜೊತೆ ನಟಿಸುವ ಆಸೆ ನನಗಿದೆ ಹಾಗೇ ಅದು ನನ್ನ ಕನಸಾಗಿದೆ,'ಎಂದು ಪಲ್ಲವಿ ಉತ್ತರಿಸಿದ್ದಾರೆ.

Follow Us:
Download App:
  • android
  • ios