Asianet Suvarna News Asianet Suvarna News

ವಿಜಯ್ ದೇವರಕೊಂಡ ನಿರಾಕರಿಸಿದ ಚಿತ್ರಕತೆ ಒಪ್ಪಿಕೊಂಡ ಮೆಗಾ ಸ್ಟಾರ್ ಚಿರಂಜೀವಿ!

ಚಿತ್ರರಂಗಕ್ಕೆ ಬಿಗ್ ಶಾಕ್! ಡುಯಲ್‌ ರೋಲ್‌ ಬೇಡ ಎಂದು ಕಥೆ ರಿಜೆಕ್ಟ್ ಮಾಡಿದ ದೇವರಕೊಂಡ. ಒಂದೇ ಮಾತುಕತೆಯಲ್ಲಿ ಚಿತ್ರ ಒಪ್ಪಿಕೊಂಡ ಚಿರಂಜೀವಿ.
 

Megastar Chiranjeevi accepts Vijay Deverakonda rejected film vcs
Author
Bangalore, First Published Aug 1, 2021, 10:04 AM IST
  • Facebook
  • Twitter
  • Whatsapp

ತಮಿಳು ಚಿತ್ರರಂಗದಲ್ಲಿ ಆಗುತ್ತಿರುವ ಬೆಳವಣೆಗೆ ಬಗ್ಗೆ ಅಲ್ಲಿನವರಿಗೆ ಆಚ್ಚರಿಯಾಗುತ್ತಿದೆ. ಸಾಮಾನ್ಯವಾಗಿ ಸ್ಟಾರ್ ನಟರು ರಿಜೆಕ್ಟ್ ಮಾಡಿದ ಸಿನಿಮಾವನ್ನು ಈಗಷ್ಟೇ ಬೆಳೆಯುತ್ತಿರುವ ನಟರು ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಇಲ್ಲಿ ಯಂಗ್ ನಟ ರಿಜೆಕ್ಟ್ ಮಾಡಿದ ಸಿನಿಮಾವನ್ನು ಮೆಗಾ ಸ್ಟಾರ್ ಒಪ್ಪಿಕೊಂಡಿದ್ದಾರೆ. 

ನಿರ್ದೇಶಕ ಕೆಎಸ್ ರವೀಂದ್ರ ದ್ವಿಪಾತ್ರ ಇರುವ ಚಿತ್ರಕಥೆಯನ್ನು ವಿಜಯ್ ದೇವರಕೊಂಡಗೆಂದೇ ರೆಡಿ ಮಾಡಿದ್ದರು. ವಿಜಯ್ ಕತೆ ಒಪ್ಪದ ಕಾರಣ ಇದನ್ನು ಚಿರಂಜೀವಿ ಮುಂದಿಡಲಾಗಿತ್ತು. ಒಂದೇ ಮಾತುಕತೆಯಲ್ಲಿ ಮೆಗಾ ಸ್ಟಾರ್ ಕಥೆ ಒಪ್ಪಿಕೊಂಡಿದ್ದಾರೆ. ಅಲ್ಲದೆ ಮುಂದಿನ ವರ್ಷ ಸಿನಿಮಾ ಚಿತ್ರೀಕರಣ ಆರಂಭಿಸುವುದಾಗಿ ತಿಳಿಸಿದ್ದಾರೆ. 

ಮೆಗಾ ಸ್ಟಾರ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನವಾಜುದ್ಧೀನ್ ಸಿದ್ಧಿಕಿ!

ಕೊರಟಾಲ ಶಿವ ನಿರ್ದೇಶನ ಮಾಡುತ್ತಿರುವ 'ಆಚಾರ್ಯ' ಚಿತ್ರದಲ್ಲಿ ಚಿರಂಜೀವಿ, ರಾಮ್ ಚರಣ್ , ಪೂಜಾ ಹೆಗ್ಡೆ, ಸೋನು ಸೂದ್, ಕಾಜಲ್ ಅಗರ್‌ವಾಲ್ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಆಚಾರ್ಯ' ಈ ವರ್ಷ ಬಿಡುಗಡೆ ಆಗುವ ಸಾಧ್ಯತೆಯಿದೆ. 

ಅಷ್ಟಕ್ಕೂ ವಿಜಯ್ ಸಿನಿಮಾ ನಿರಾಕರಿಸಲು ಕಾರಣವೇನು ಎಂದು ಅಭಿಮಾನಿಗಳು ಪದೇ ಪದೇ ಪ್ರಶ್ನೆ ಮಾಡುತ್ತಿದ್ದ ಕಾರಣ ಕೆಲವು ಮೂಲಗಳಿಂದ ಬಂದ ಮಾಹಿತಿ ಪ್ರಕಾರ ವಿಜಯ್ ಕಥೆ ಕೇಳಿ ಇಂಪ್ರೆಸ್ ಆಗಿದ್ದಾರೆ ಆದರೆ ಬ್ಯುಸಿ ಶೆಡ್ಯೂಲ್ ಇದ್ದು ಡೇಟ್ಸ್‌ ಪ್ರಾಬ್ಲಂ ಆಗಿದರಿಂದ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios