ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದ ನಟ ಚಿರಂಜೀವಿ ತಮ್ಮ ಮುಂದಿನ ಸಿನಿಮಾ 'ಆಚಾರ್ಯ' ಶೂಟಿಂಗ್ ಶುರು ಮಾಡಲಿದ್ದರು. ಚಿತ್ರೀಕರಣಕ್ಕೂ ಮುನ್ನ ಮಾರ್ಗಸೂಚಿಯಂತೆ ನಡೆಸಲಾಗಿದ್ದ ಕೋವಿಡ್‌19 ಪರೀಕ್ಷೆಯಲ್ಲಿ ಚಿರಂಜೀವಿಗೆ ಪಾಸಿಟಿವ್ ಎಂದು ತಿಳಿದು ಬಂದಿದೆ. ಈ ವಿಚಾರದ ಬಗ್ಗೆ ಚಿರಂಜೀವಿ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ. 

ಮೆಗಾ ಸ್ಟಾರ್‌ ಚಿರಂಜೀವಿ ಸ್ಟೈಲ್‌ನಲ್ಲಿ ಕೆಎಫ್‌ಸಿ ಚಿಕನ್ ಮಾಡೋದ ಕಲೀರಿ!

'ಅಚಾರ್ಯ ಚಿತ್ರೀಕರಣಕ್ಕೂ ಮುನ್ನ ಕೋವಿಡ್‌ ಟೆಸ್ಟ್ ಮಾಡಿಸಿಕೊಂಡಿದ್ದು, ಪಾಸಿಟಿವ್ ಎಂದು ತಿಳಿದು ಬಂದಿದೆ.  ನನಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಮನೆಯಲ್ಲಿಯೇ ಕ್ವಾರಂಟೈನ್‌ ಆಗುವೆ. ಕಳೆದು 5 ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರೂ ತಪ್ಪದೆ ಕೋವಿಡ್‌ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುವೆ. ನನ್ನ ಆರೋಗ್ಯದ ಸ್ಥತಿ ಬಗ್ಗೆ ಅಪ್ಡೇಟ್ ನೀಡುವೆ,' ಎಂದು ಬರೆದಿದ್ದಾರೆ.

 

ಎರಡು ದಿನಗಳ ಹಿಂದೆ ತೆಲಗು ನಟರಾದ ಚಿರಂಜೀವಿ ಹಾಗೂ ನಾಗರ್ಜುನ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ಅವರನ್ನು ಪ್ರಗತಿ ಭವನದಲ್ಲಿ ಭೇಟಿಯಾಗಿದ್ದರು.  ಹೈದರಾಬಾದ್‌ ಪ್ರವಾಹ ಪರಿಹಾರಕ್ಕೆ ನೆರವು ನೀಡಲು ನೇರವಾಗಿ ಸಿಎಂ ಕಚೇರಿಯಲ್ಲಿ ಭೇಟಿಯಾಗಿದ್ದು, ಅವರ ಜೊತೆ ಸಂಸದ ಸಂತೋಶ್ ಕುಮಾರ್‌ ಕೂಡ ಇದ್ದರು ಎನ್ನಲಾಗಿದೆ.

ಸನ್ಯಾಸಿ ಆಗ್ತಿದ್ದಾರಾ ಮೆಗಾಸ್ಟಾರ್ ಚಿರಂಜೀವಿ..?

ಇವರೆಲ್ಲರೂ ಭೇಟಿಯಾದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಯಾರೊಬ್ಬರೂ ಮಾಸ್ಕ್‌ ಹಾಕಿಲ್ಲದಿರುವುದನ್ನು ಗಮನಿಸಬಹುದು. ಚಿರಂಜೀವಿ ಸಂಪರ್ಕದಲ್ಲಿದ್ದ ನಾಗಾರ್ಜುನ, ಮುಖ್ಯಮಂತ್ರಿ ಹಾಗೂ ಸಂಸದ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ.

ಕೆಲವು ದಿನಗಳ ಹಿಂದೆ ಮೊಮ್ಮಕ್ಕಳ ಜೊತೆ ಕೆಎಫ್‌ಸಿ ಶೈಲಿಯ ಅಡುಗೆ  ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದರು ಚಿರಂಜೀವಿ. ಕುಟುಂಬದ ಜೊತೆ ಸಂಪರ್ಕವಿದ್ದ ಕಾರಣ ಇಡೀ ಕುಟುಂಬವೇ ಪರೀಕ್ಷೆ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಚಿರಂಜೀವಿ ಮಗಳು ತಮ್ಮ ಪತಿಯೊಂದಿಗೆ ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದರು.