ಲಾಕ್‌ಡೌನ್‌ ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಆ್ಯಕ್ಟಿವ್ ಆಗಿರುವ ಮೆಗಾ ಸ್ಟಾರ್ ಚಿರಂಜೀವಿ ಫ್ಯಾಮಿಲಿ ಜೊತೆ ಕಳೆಯುವ 'ಗಾಲ ಟೈಂ' ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ಇದ್ದೂ, ಇದ್ದು ಬೋರಾದ ಮೊಮ್ಮಕ್ಕಳಿಗೆ ಮನೆಯಲ್ಲಿಯೇ ಕೆಎಫ್‌ಸಿ ಚಿಕನ್ ತಯಾರಿಸಿ ಕೊಟ್ಟಿದ್ದಾರೆ.

ಸನ್ಯಾಸಿ ಆಗ್ತಿದ್ದಾರಾ ಮೆಗಾಸ್ಟಾರ್ ಚಿರಂಜೀವಿ..? 

ಮೊಮ್ಮಗಳು ಸಂಹಿತಾ ಮತ್ತು ನಿವೃತ್ತಿ ಜೊತೆ ಅಡುಗೆ ಮಾಡಿದ್ದಾರೆ. 'ಮಕ್ಕಳು, ಫನ್ ಹಾಗೂ ಕುಕ್ಕಿಂಗ್. ಅಡುಗೆ ಮಾಡುವುದು ತುಂಬಾನೇ ಸಂತೋಷ ಕೊಡುತ್ತದೆ. ಈ ಸಲ ನನ್ನ ಅಸಿಸ್ಟೆಂಟ್‌ ಆಗಿ ಮೊಮ್ಮಕ್ಕಳಿದ್ದರು. ನೋಡಿ ಹೇಗಿರುತ್ತದೆ,' ಪೋಸ್ಟಿನಲ್ಲಿ ಚಿರಂಜೀವಿ ಬರೆದುಕೊಂಡಿದ್ದಾರೆ.

 

ಕೆಲವು ದಿನಗಳ ಹಿಂದೆ ಚಿರಂಜೀವಿ ತಮ್ಮ ತಾಯಿ ಜೊತೆ ಉಪ್ಪಿಟ್ಟು ಹಾಗೂ ಬೇರೆ ಬೇರೆ ಅಡುಗೆ ಮಾಡಿ, ಶೇರ್ ಮಾಡಿಕೊಂಡಿದ್ದರು. ಅದರ ಜೊತೆಗೆ ಅವರ ಪೋಸ್ಟ್‌ಗಳಲ್ಲಿ ಫಿಶ್ ಕರಿಯೂ ಮಾಡಿದ್ದನ್ನು ನೀವು ನೋಡಿರಬಹುದು.  ಆಚಾರ್ಯ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ, ಫ್ಯಾಮಿಲಿಗೆಂದು ಟೈಂ ನೀಡುವುದು ತೆಲಗು ಮೆಗಾ ಸ್ಟಾರ್ ಚಿರಂಜೀವಿ ಸ್ಪೆಷಾಲಿಟಿ.