ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಲಾರ್ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ನೀಡಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಬ್ಲಾಕ್‌ಬಸ್ಟರ್ ಕೆಜಿಎಫ್-2(KGF 2) ನೀಡಿರುವ ನಿರ್ದೇಶಕ ಪ್ರಶಾಂತ್ ನೀಲ್(Prashant Neel) ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಇಡೀ ವಿಶ್ವವೇ ಪ್ರಶಾಂತ್ ನೀಲ್ ಅವರನ್ನು ಕೊಂಡಾಡುತ್ತಿದೆ. ಕೆಜಿಎಫ್-2 ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಬಾಕ್ಸ್ ಆಫೀಸ್ ನಲ್ಲೂ ಧೂಳ್ ಎಬ್ಬಿಸಿದೆ. ಈ ಸಿನಿಮಾ ಬಿಡುಗಡೆಯಾಗಿ ತಿಂಗಳಾಗಿದೆ. ಇದೀಗ ಪ್ರಶಾಂತ್ ನೀಲ್ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಪ್ರಶಾಂತ್ ನೀಲ್ ಸದ್ಯ ಟಾಲಿವುಡ್ ಸ್ಟಾರ್ ಪ್ರಭಾಸ್(Prabhas) ಜೊತೆ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಸಲಾರ್(Salaar) ಸಿನಿಮಾದ ಚಿತ್ರೀಕರಣ ಸದ್ಯ 35ರಷ್ಟು ಮುಕ್ತಾಯವಾಗಿದೆ. ಇನ್ನು ಉಳಿದ ಭಾಗದ ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗುತ್ತಿದೆ. ಆದರೆ ಈ ನಡುವೆ ಪ್ರಭಾಸ್ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಅಭಿಮಾನಿ ಹೀಗೆ ಮಾಡಲು ಕಾರಣ ಸಲಾರ್ ಸಿನಿಮಾದ ಅಪ್ ಡೇಟ್ ಗಾಗಿ.
ಹೌದು, ಸಲಾರ್ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ನೀಡಿಲ್ಲ ಎಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಈಗಾಗಲೇ ಮೇ ತಿಂಗಳ 2ನೇ ವಾರ ಕೂಡ ಮುಗಿಯುತ್ತಿದೆ. ಇದುವರೆಗೂ ಸಿನಿಮಾದಿಂದ ಯಾವುದೇ ಅಪ್ ಡೆಟ್ ಸಿಕ್ಕಿಲ್ಲ. ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾದಿಂದನೂ ಇದೇ ತಪ್ಪು ಮಾಡಿದ್ದರು. ತುಂಬಾ ನಿರಾಸೆಯಾಗಿತ್ತು. ಹಾಗಾಗಿ ನಾವು ಈಗಾಗಲೇ ತುಂಬಾ ನೊಂದಿದ್ದೇವೆ ಎಂದು ಹೇಳಿದ್ದಾರೆ.
ಡಿಸೆಂಬರ್‌ನಿಂದ ಶೂಟಿಂಗ್ ಆರಂಭ; KGF 3 ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ವಿಜಯ್ ಕಿರಗಂದೂರು
ಒಂದು ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ಈ ತಿಂಗಳಲ್ಲಿ ಅಪ್ ಡೇಟ್ ನೀಡದಿದ್ದರೆ ನಾನು ಕಂಡಿತ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಕೊನೆಯಲ್ಲಿ ನಮಗೆ ಸಲಾರ್ ಸಿನಿಮಾದ ಅಪ್ ಡೇಟ್ ಬೇಕು ಎಂದು ಬರೆದು ಪತ್ರ ಕೊನೆಗೊಳಿಸಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಂದಹಾಗೆ ಪ್ರಭಾಸ್ ಅಭಿಮಾನಿಗಳಿಂದ ಬೆದರಿಕೆ ಬರುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ರಾಧೆ ಶ್ಯಾಮ್ ಬಿಡುಗಡೆಗೂ ಮೊದಲು ಅಭಿಮಾನಿಯೊಬ್ಬ ಅಪ್ ಡೇಟ್ ನೀಡುವಂತೆ ಕೋರಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಇದು ಕೂಡ ವೈರಲ್ ಆಗಿತ್ತು. ಇದೀಗ ಪ್ರಶಾಂತ್ ನೀಲ್ ಅವರಿಗೂ ಅಭಿಮಾನಿಗಳು ಅಪ್ ನೀಡುವಂತೆ ಬೆನ್ನುಬಿದ್ದಿದ್ದಾರೆ.
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕೆಜಿಎಫ್ 2 ರಿಯಲ್ ಕಥೆನಾ? ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ
ಪ್ರಭಾಸ್ ಕೊನೆಯದಾಗಿ ರಾಧೆ ಶ್ಯಾಮ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್‌ಗೆ ಇದು ಎರಡನೇ ಸೋಲಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರು. ಇದೀಗ ಪ್ರಭಾಸ್ ಸಲಾರ್ ಜೊತೆಗೆ ಆದಿಪುರುಷ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ನಾಗ್ ಅಶ್ವಿನ್ ಜೊತೆ ಇನ್ನು ಹೆಸರಿಡದ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ.
