‘ಅತಡು’ ಸಿನಿಮಾದ ಕಥೆ ಕೇಳಿ ನಟ ಮಹೇಶ್ ಬಾಬು ಎದ್ದು ಹೋದಾಗ ಮತ್ತು ಮುಹೂರ್ತಕ್ಕೆ ಗೈರಾದಾಗ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಆತಂಕಗೊಂಡಿದ್ದರು. ಆದರೆ, ಮಹೇಶ್ ಬಾಬು ವಿಚಿತ್ರ ಸೆಂಟಿಮೆಂಟ್ ಪಾಲಿಸುತ್ತಾರೆ ಎಂಬುದು ನಂತರ ಬಹಿರಂಗವಾಯಿತು.

ಹೈದರಾಬಾದ್: ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನಲ್ಲಿ ಬಂದ 'ಅತಡು' ಒಂದು ಟಾಲಿವುಡ್ ಕ್ಲಾಸಿಕ್ ಸಿನಿಮಾ. 22 ವರ್ಷಗಳ ಹಿಂದೆ ಈ ಸಿನಿಮಾ ಇಂಡಸ್ಟ್ರಿ ಹಿಟ್ ಆಗಿತ್ತು. ಸಂಭಾಷಣೆ, ಆ್ಯಕ್ಷನ್, ಕಾಮಿಡಿ, ಹಾಡುಗಳು ಎಲ್ಲದರಲ್ಲೂ ಈ ಚಿತ್ರ ತೆಲುಗು ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ಸಿನಿಮಾ ನಿರ್ಮಾಣಕ್ಕೂ ಮುನ್ನ ನಡೆದ ಕೆಲವು ಸ್ವಾರಸ್ಯಕರ ಘಟನೆಗಳನ್ನು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ತಮ್ಮ ಮೊದಲ ಸಿನಿಮಾ 'ನುವ್ವೆ ನುವ್ವೆ' ಶೂಟಿಂಗ್ ಶುರುವಾಗುವ ಮೊದಲೇ ಮಹೇಶ್ ಬಾಬುಗೆ 'ಅತಡು' ಕಥೆ ಹೇಳಿದ್ದರು. ಪದ್ಮಾಲಯ ಸ್ಟುಡಿಯೋದ ಒಂದು ರೂಮಿನಲ್ಲಿ ಇಬ್ಬರೂ ಕುಳಿತು ಕಥೆಯ ಚರ್ಚೆ ನಡೆಸಿದರು. ತ್ರಿವಿಕ್ರಮ್ ಕಥೆ ಹೇಳಿ ಮುಗಿಸಿದ ತಕ್ಷಣ, ಮಹೇಶ್ ಬಾಬು ಏನೂ ಮಾತನಾಡದೆ ಎದ್ದು ರೂಮಿನಿಂದ ಹೊರಗೆ ಹೋದರು. ಇದರಿಂದ ಮಹೇಶ್ ಬಾಬುಗೆ ಕಥೆ ಇಷ್ಟವಾಗಲಿಲ್ಲವೇನೋ ಎಂದು ತ್ರಿವಿಕ್ರಮ್ ಕಂಗಾಲಾಗಿದ್ದರು.

ಕತೆ ಕೇಳಿದ ಬಳಿಕ ಹೊರಗೆ ಹೋಗಿದ್ಯಾಕೆ?

ಸುಮಾರು 10 ನಿಮಿಷಗಳ ನಂತರ ಮಹೇಶ್ ಬಾಬು ವಾಪಸ್ ಬಂದು, ಏನಿಲ್ಲ, ತುಂಬಾ ಹೊತ್ತಿನಿಂದ ಕುಳಿತಿದ್ದೆ, ಅದಕ್ಕೆ ಹಾಗೆ ಹೊರಗೆ ಹೋಗಿ ಬಂದೆ. ನಾವು ಈ ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿದ್ದರಂತೆ.

ಸಿನಿಮಾದ ಮುಹೂರ್ತದ ದಿನ ಫಸ್ಟ್ ಶಾಟ್ ತೆಗೆಯುವಾಗ ಮಹೇಶ್ ಬಾಬು ಲೊಕೇಶನ್‌ಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ತ್ರಿವಿಕ್ರಮ್, ನೇರವಾಗಿ ಮಹೇಶ್ ಬಾಬುಗೆ ಫೋನ್ ಮಾಡಿ, ನೀವು ನಿಜವಾಗಿಯೂ ಈ ಸಿನಿಮಾದಲ್ಲಿ ನಟಿಸುತ್ತಿದ್ದೀರಾ? ಮುಹೂರ್ತಕ್ಕೂ ಬಂದಿಲ್ಲವಲ್ಲ? ಎಂದು ನಗುತ್ತಾ ಕೇಳಿದರು. ಮಹೇಶ್ ಬಾಬು ಮಾತು ಕೇಳಿದ ತ್ರಿವಿಕ್ರಮ್ ಅವರಿಗೆ ಒಂದು ಕ್ಷಣ ಅಚ್ಚರಿಯಾಯ್ತು.

ಇದನ್ನೂ ಓದಿ: Costume Controversy: 'ರಾಮಾಯಣ' ಕಾಸ್ಟ್ಯೂಮ್‌ ಬಗ್ಗೆ ಭಾರೀ ಟ್ರೋಲ್; ನೆಟ್ಟಿಗರಿಗೆ ಖಡಕ್‌ ಡೋಸ್ ಕೊಟ್ಟ ವಸ್ತ್ರ-ವಿನ್ಯಾಸಕರು!

ನಟ ಮಹೇಶ್ ಬಾಬು ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಮುಹೂರ್ತ ಸಮಾರಂಭಗಳಿಗೆ ಹಾಜರಾಗುವುದಿಲ್ಲ, ಅದು ಅವರದ್ದೊಂದು ವಿಚಿತ್ರ ಸೆಂಟಿಮೆಂಟ್ ಎಂದು ಗೊತ್ತಾಯಿತು. ಮುಹೂರ್ತದ ನಂತರ ಚಿತ್ರೀಕರಣಕ್ಕೆ ಮಹೇಶ್ ಬಾಬು ಹಾಜರಾಗುತ್ತಾರೆ. ಇಂದಿಗೂ ಈ ನಿಯಮವನ್ನು ಮಹೇಶ್ ಬಾಬು ಪಾಲನೆ ಮಾಡ್ತಾರೆ ಎಂದು ವರದಿಯಾಗಿದೆ. ಆದ್ರೆ ಮಹೇಶ್ ಬಾಬು ಹೀಗೆ ನಡೆದುಕೊಳ್ಳೋದ್ಯಾಕೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ಇದನ್ನೂ ಓದಿ: Bigg Boss 13ಕ್ಕೆ ಸೆಲೆಕ್ಟ್​ ಆದ ಜನ ಸಾಮಾನ್ಯರು ಯಾರು? ಅಗ್ನಿಪರೀಕ್ಷೆಯಲ್ಲಿ ಗೆದ್ದವರು ಯಾರು?