Asianet Suvarna News Asianet Suvarna News

ಅಭಿಷೇಕ್​ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್​ ವೈರಲ್​!

ಅಭಿಷೇಕ್​ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್​ ವೈರಲ್​. ನೆಟ್ಟಿಗರು ಏನಂತಾರೆ? 
 

After divorce rumour Aishwarya Rais dance with her daughter went viral suc
Author
First Published Dec 5, 2023, 6:52 PM IST

ಸದ್ಯ ಬಿ-ಟೌನ್​ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್​ ಬಚ್ಚನ್​ ಅವರ ವಿಚ್ಛೇದನದ ಸುದ್ದಿ.  ಅಭಿಷೇಕ್ ಬಚ್ಚನ್​ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್‌ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್​ ಸದ್ದು ಮಾಡುತ್ತಿದೆ.

ರ್ಸನಲ್ ಲೈಫ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಭೀಷೇಕ್ ಹಾಗೂ ಐಶ್ವರ್ಯಾ ಇಬ್ಬರೂ ತಮ್ಮ ಲೈಫ್ ಕುರಿತು ಹೆಚ್ಚಿನ ಅಪ್ಡೇಟ್ ಬಿಟ್ಟುಕೊಡುವುದಿಲ್ಲ. ಆದರೆ ಇದೀಗ ಉಂಗುರದಿಂದಾಗಿ ಜನರೇ ಊಹಾಪೋಹ ಶುರುವಿಟ್ಟುಕೊಂಡಿದ್ದಾರೆ. ಆದರೆ ಮದುವೆ ಉಂಗುರ ಧರಿಸದೇ ಇರಲು ಹಲವು ಕಾರಣ ಇರಬಹುದು ಎನ್ನುವುದು ಫ್ಯಾನ್ಸ್​ ಸಮಜಾಯಿಷಿ. ಇದರ ಫೋಟೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಇದಕ್ಕೆ ನಾನಾ ಈತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅವರಲ್ಲಿ ಒಬ್ಬರು, 'ಉಂಗುರ ಹಾಕಿಲ್ಲ ಎಂದ ಮಾತ್ರಕ್ಕೆ ಅವರು ಬೇರೆಯಾಗುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ' ಎಂದಿದ್ದಾರೆ. ಮತ್ತೊಬ್ಬರು,  'ಬಚ್ಚನ್ ಫ್ಯಾಮಿಲಿಯಲ್ಲಿ ವಿಚ್ಛೇದನ ಅಸಾಧ್ಯ ಎಂದು ನಾನು ಯಾವಾಗಲೂ ಭಾವಿಸುತ್ತೇನೆ' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಅಮಿತಾಭ್ ಬದುಕಿರುವವರೆಗೆ ಅವರು ಹೀಗಾಗಲು ಬಿಡುವುದಿಲ್ಲ' ಎಂದು ಹೇಳಿದ್ದಾರೆ. 

ಸಿನಿಮಾದಲ್ಲಿ ಸಂಪೂರ್ಣ ಬೆತ್ತಲಾದ್ರೆ ಹೀಗೂ ಆಗತ್ತಾ? 'ಅನಿಮಲ್​' ನಟಿ ತೃಪ್ತಿ ದಿಮ್ರಿಗೆ ಡಬಲ್​ ಧಮಾಕಾ!

ಈ ಸುದ್ದಿ ಇಷ್ಟೆಲ್ಲಾ ವೈರಲ್​ ಆಗುತ್ತಿದ್ದರೂ ಬಚ್ಚನ್​ ಕುಟುಂಬದ ಯಾರೊಬ್ಬರೂ ಇದಕ್ಕೆ ಇದುವರೆಗೆ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದಾಗಿ ಬಿಗ್​-ಬಿ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನವೂ ಸುಳಿದಾಡುತ್ತಿದೆ. ಆದರೆ ಇದರ ಮಧ್ಯೆಯೇ ನಟಿ ಐಶ್ವರ್ಯ ಮತ್ತು ಮಗಳು ಆರಾಧ್ಯ ಡ್ಯಾನ್ಸ್​ ವಿಡಿಯೋ ಒಂದು ಸೋಷಿಯಲ್​  ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ವಿಚ್ಛೇದನದ ಸುದ್ದಿಯ ಬೆನ್ನಲ್ಲೇ ಇದರ ವಿಡಿಯೋ ವೈರಲ್​ ಆಗಿರುವುದನ್ನು ನೋಡಿರುವ ನೆಟ್ಟಿಗರು ಇದಕ್ಕೂ ತಮ್ಮದೇ ಆದ ರೀತಿಯಲ್ಲಿ ಕಮೆಂಟ್​ ಹಾಕುತ್ತಿದ್ದಾರೆ.

ಕೊನೆಗೂ ಮುಕ್ತಿ ಸಿಕ್ಕಿತು ಎಂದು ಮಗಳೊಂದಿಗೆ ಐಶ್ವರ್ಯ ಡ್ಯಾನ್ಸ್​ ಮಾಡುತ್ತಿದ್ದಾಳೆ ಎಂದು ಕೆಲವರು ಬರೆದಿದ್ದರೆ, ತಮ್ಮ ನಡುವೆ ಎಲ್ಲವೂ ಸರಿಯಿದೆ, ವಿಚ್ಛೇದನದ್ದು ಗಾಳಿ ಸುದ್ದಿ ಮಾತ್ರ ಎಂದು ಈ ರೀತಿ ಐಶ್ವರ್ಯ ರೈ ತಿಳಿಸುತ್ತಿದ್ದಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಅಮ್ಮ-ಮಗಳ ಡ್ಯಾನ್ಸ್ ಹಾಗೂ ನಟನಾ ಜೋಡಿಯ ವಿಚ್ಛೇದನ ಸದ್ಯದ ಹಾಟ್​ ಟಾಪಿಕ್​. 

ಚೆನ್ನೈನ ಭಾರಿ ಚಂಡಮಾರುತದ ಸುಳಿಗೆ ಸಿಲುಕಿದ್ದ ಆಮೀರ್​ ಖಾನ್​! ವೈರಲ್​ ಚಿತ್ರದಿಂದ ವಿಷಯ ಬಹಿರಂಗ...
 

Follow Us:
Download App:
  • android
  • ios