ಈ ಬಾಲಿವುಡ್‌ ಸೆಲೆಬ್ರಿಟಿಗಳು ಮನಶ್ಶಾಂತಿಗಾಗಿ ಸನ್ಯಾಸಿಗಳೇ ಆಗಿಬಿಟ್ಟವರು!

ಸೋಫಿಯಾ ಹಯಾತ್‌ನಿಂದ ವಿನೋದ್ ಖನ್ನಾವರೆಗೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ಸೆಲೆಬ್ರಿಟಿಗಳು ಸನ್ಯಾಸಿ, ಸನ್ಯಾಸಿನಿಯಾಗಲು ಬಯಸಿದ್ದನ್ನು ನಾವು ಕಾಣಬಹುದು. ಹೀಗೆ ಆಧ್ಯಾತ್ಮದ ಹಾದಿ ಹಿಡಿದ 5 ಬಾಲಿವುಡ್ ಸೆಲೆಬ್ರಿಟಿಗಳನ್ನು ನೋಡೋಣ.

These bollywood celebrities turned as monks

ಇತ್ತೀಚೆಗೆ ತಮ್ಮನ್ನಾ ಭಾಟಿಯಾ ಸದ್ಗುರುವಿನ ಆಶ್ರಮಕ್ಕೆ ಭೇಟಿ ನೀಡಿದ್ದು, ಆ ಬಗ್ಗೆ ಬರೆದುಕೊಂಡದ್ದು ನೀವು ನೋಡಿರಬಹುದು. ಸಮಂತಾ ರುತ್‌ ಪ್ರಭು ಕೂಡ ಆಧ್ಯಾತ್ಮಿಕವಾಗಿ ಸದ್ಗುರು ಅವರ ಶಿಷ್ಯೆಯಾಗಿದ್ದಾರೆ. ಅವರ ಆಶ್ರಮದಲ್ಲಿ ಧ್ಯಾನ ಇತ್ಯಾದಿಗಳಲ್ಲಿ ತೊಡಗಿದ್ದಾರೆ. ಹೀಗೇ ಬಾಲಿವುಡ್‌ ಹಾಗೂ ಇತರ ಚಿತ್ರರಂಗಗಳ ಅನೇಕ ಸೆಲೆಬ್ರಿಟಿಗಳು ಒಬ್ಬರಲ್ಲ ಒಬ್ಬ ಧಾರ್ಮಿಕ ಗುರುವಿನ ಹಿಂದೆ ಬಿದ್ದಿರುವುದು ನಾವು ಕಾಣಬಹುದು. ಕೆಲವರು ಇನ್ನೂ ಮುಂದೆ ಹೋಗಿ, ಸಂಸಾರವನ್ನು ತೊರೆದು ಸನ್ಯಾಸಿ- ಸನ್ಯಾಸಿನಿ-ಗಳೇ ಆಗಿಬಿಟ್ಟಿದ್ದಾರೆ.

ಸೋಫಿಯಾ ಹಯಾತ್‌ನಿಂದ ವಿನೋದ್ ಖನ್ನಾವರೆಗೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದ ಸೆಲೆಬ್ರಿಟಿಗಳು ಸನ್ಯಾಸಿ, ಸನ್ಯಾಸಿನಿಯಾಗಲು ಬಯಸಿದ್ದನ್ನು ನಾವು ಕಾಣಬಹುದು. ಹೀಗೆ ಆಧ್ಯಾತ್ಮದ ಹಾದಿ ಹಿಡಿದ 5 ಬಾಲಿವುಡ್ ಸೆಲೆಬ್ರಿಟಿಗಳನ್ನು ನೋಡೋಣ.

ಮಮತಾ ಕುಲಕರ್ಣಿ: ಈಕೆ ತೊಂಬತ್ತರ ದಶಕದ ಬಲು ಬೇಡಿಕೆಯ ಬಾಲಿವುಡ್ ತಾರೆ. ಆಶಿಕ್ ಆವಾರಾ, ವಕ್ತ್ ಹಮಾರಾ ಹೈ, ಕ್ರಾಂತಿವೀರ್, ಕರಣ್ ಅರ್ಜುನ್, ಸಬ್ಸೆ ಬಡಾ ಖಿಲಾಡಿ ಮತ್ತು ಬಾಜಿಯಂತಹ ಚಲನಚಿತ್ರಗಳಲ್ಲಿ ಸ್ಮರಣೀಯ ಅಭಿನಯದ ಮೂಲಕ ಬೆಳ್ಳಿತೆರೆಯನ್ನು ಬೆಳಗಿದಳು. ನಂತರ ಸಂತ ಚೈತನ್ಯ ಗಗನಗಿರಿ ನಾಥ್ ಅವರ ಆಶ್ರಮದಲ್ಲಿ ಸನ್ಯಾಸಿನಿಯಾದಳು. ಕಳೆದ 18 ವರ್ಷಗಳಿಂದ ಅವರು ಮೇಕಪ್ ಮಾಡಿಲ್ಲವಂತೆ; ಬ್ಯೂಟಿ ಪಾರ್ಲರ್‌ಗೆ ಹೋಗಿಲ್ಲವಂತೆ.

ಪೂನ ಪಾಂಡೆ ನಿಧನಕ್ಕೆ ಕಾರಣವಾದ ಗರ್ಭಕಂಠದ ಕ್ಯಾನ್ಸರ್‌ ಎಂದರೇನು?

ವಿನೋದ್ ಖನ್ನಾ: ನಿಸ್ಸಂದೇಹವಾಗಿ ತನ್ನ ಕಾಲದ ಬೇಡಿಕೆ ನಟ. 70 ಮತ್ತು 80ರ ದಶಕದಲ್ಲಿ ಬಾಲಿವುಡ್ ನೋಡಿದ ಅತ್ಯಂತ ಸುಂದರ ನಟರಲ್ಲಿ ಒಬ್ಬ. ಬೇಡಿಕೆ ಇದ್ದಾಗಲೇ, 1980ರ ದಶಕದ ಆರಂಭದಲ್ಲಿ ಅಮೆರಿಕಾದಲ್ಲಿದ್ದ ಓಶೋ ಕಮ್ಯೂನ್‌ ರಜನೀಶ್‌ಪುರಂಗೆ ತೆರಳಿ ಸುಮಾರು ಐದು ವರ್ಷ ಅಲ್ಲಿದ್ದರು. ಓಶೋ ಅವರ ಶಿಷ್ಯರಾದಾಗ ಅವರನ್ನು 'ಸೆಕ್ಸಿ ಸನ್ಯಾಸಿʼ (sexy monk) ಎಂದು ಕರೆಯಲಾಯಿತು. ಅಲ್ಲಿ ಅವರು ಸ್ವಾಮಿ ವಿನೋದ್ ಭಾರತಿ ಎಂಬ ಹೆಸರಿನಿಂದ ಓಶೋ ಅವರ ತೋಟಗಾರರಾಗಿ ಕೆಲಸ ಮಾಡಿದರು. ಇತ್ತ ಅವರ ಕುಟುಂಬ ಭಾರತದಲ್ಲಿಯೇ ಉಳಿಯಿತು. ಇದು ದಂಪತಿಗಳ ನಡುವೆ ಘರ್ಷಣೆಯನ್ನು ಉಂಟುಮಾಡಿತು. ಪತ್ನಿ ಗೀತಾಂಜಲಿ ವಿಚ್ಛೇದನದ ನೀಡಿದರು.

ಸೋಫಿಯಾ ಹಯಾತ್: ಈಕೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ರೂಪದರ್ಶಿ (Model). ಈಕೆ ಈಗ ಸನ್ಯಾಸಿನಿಯಾಗಿದ್ದಾಳೆ. ಈಗ ಆಕೆಯನ್ನು ತಾಯಿ ಸೋಫಿಯಾ ಅಥವಾ ಸೋಫಿಯಾ ಮದರ್‌ ಎಂದು ಕರೆಯುತ್ತಾರೆ. ಬಿಗ್ ಬಾಸ್‌ನ ಏಳನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದ ಸೋಫಿಯಾ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಬದಲಾವಣೆಯ ಸಂದೇಶವನ್ನು ಪೋಸ್ಟ್ ಮಾಡಿದ್ದರು. "ನಾನು ಮೇಕ್ಅಪ್ ಇಲ್ಲದೆ ಸುಂದರವಾಗಿದ್ದೇನೆ. ಕೂದಲಿನ ಬಣ್ಣ ... ಫ್ಯಾಷನ್... ನಾವು ನಮ್ಮಂತೆಯೇ ಪರಿಪೂರ್ಣರಾಗಿದ್ದೇವೆ. ಕ್ಷಮಿಸಿ, ನಾನು ನನ್ನ ಅನಿಸಿಕೆ ನೀಡಿದ್ದೇನೆ. ನಾನು ಬದಲಾಗಿದ್ದೇನೆ. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ಗಯಾ ಸೋಫಿಯಾ ತಾಯಿ." ಬಳಿಕ ಅವರು ಮದರ್‌ ದಿರಸು ಧರಿಸಿದ್ದ ತಮ್ಮ ಸಾಂಪ್ರದಾಯಿಕ ಅವತಾರದ ಫೋಟೋಗಳ ಸರಣಿಯನ್ನು (Photo shoot series) ಪೋಸ್ಟ್ ಮಾಡಿದ್ದರು. ಒಂದು ಕಾಲದಲ್ಲಿ, ಸೋಫಿಯಾ ಐಸ್ ಬಕೆಟ್ ಚಾಲೆಂಜ್ ಅನ್ನು ಕೈಗೆತ್ತಿಕೊಂಡು ತನ್ನ ನಗ್ನ ವೀಡಿಯೊವನ್ನು ಬಿಡುಗಡೆ ಮಾಡಿದ ವ್ಯಕ್ತಿ!

ತಿರುಪತಿಯ ಬೀದಿಯಲ್ಲಿ ಭಿಕ್ಷುಕನಂತೆ ಅಲೆದಾಡಿದ ರಜಿನಿಕಾಂತ್ ಮಾಜಿ ಅಳಿಯ: ಬೆರಗಾದ ಫ್ಯಾನ್ಸ್!

ಬರ್ಖಾ ಮದನ್:  ಇವಳ ಮುಖ ನಿಮಗೆ ಪರಿಚಿತವಾಗಿರಬಹುದು. ಒಂದು ಕಾಲದಲ್ಲಿ ಬರ್ಖಾ ಮದನ್ ಜನಪ್ರಿಯ ಟಿವಿ ಧಾರಾವಾಹಿಗಳು (Tv serials) ಮತ್ತು ಬಾಲಿವುಡ್ ಚಲನಚಿತ್ರಗಳಲ್ಲಿ ಪಾತ್ರ ಮಾಡುತ್ತಿದ್ದಳು. ಈಗ ಆಕೆಯ ಹೆಸರು ಗ್ಯಾಲ್ಟೆನ್ ಸ್ಯಾಮ್ಸೆನ್. 1984ರಲ್ಲಿ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದ ಬರ್ಖಾ, 1996ರಲ್ಲಿ ತನ್ನ ಚೊಚ್ಚಲ ಚಿತ್ರ ಖಿಲಾಡಿಯೋನ್ ಕಾ ಖಿಲಾಡಿಗೆ ಮೊದಲು ಮಾಡೆಲ್ ಆಗಿ ಬಹಳ ಯಶಸ್ವಿಯಾದರು. ಆದರೆ ಸಿಕ್ಕಿಂನಲ್ಲಿರುವ ಬೌದ್ಧವಿಹಾರಕ್ಕೆ ಭೇಟಿ ನೀಡಿದ ಬಳಿಕ ಆಕೆ ಬೌದ್ಧ ಧರ್ಮದತ್ತ ಆಕರ್ಷಿತಳಾದಳು. ಇಂದು ಗ್ಯಾಲ್ಟೆನ್ ಸ್ಯಾಮ್ಸೆನ್ ತನ್ನ ಕೇವಲ ಎರಡು ಸೆಟ್ ವಸ್ತ್ರಗಳೊಂದಿಗೆ ಕನಿಷ್ಠ ಜೀವನವನ್ನು ನಡೆಸುತ್ತಾಳೆ. "ವರ್ಷಗಳ ಹಿಂದೆ, ಸೌಂದರ್ಯ ಸ್ಪರ್ಧೆಯೊಂದರಲ್ಲಿ, ನಾನು ಗೆದ್ದರೆ ಅತ್ಯಂತ ಕಡಿಮೆ ಸವಲತ್ತು ಹೊಂದಿರುವ ಮಕ್ಕಳೊಂದಿಗೆ ಕೆಲಸ ಮಾಡುತ್ತೇನೆ ಎಂದು ತೀರ್ಪುಗಾರರಿಗೆ (Judges) ಹೇಳಿದ್ದೆ. ನಾನು ಈಗ ಅದನ್ನು ಮಾಡುತ್ತಿದ್ದೇನೆ" ಎಂದು ಅವರು ಗಮನ ಸೆಳೆದಿದ್ದಾರೆ.

ಅನು ಅಗರ್ವಾಲ್: ಮುಂಬೈಗೆ ಹೋಗಿ ಅಂತಾರಾಷ್ಟ್ರೀಯ ಮಾಡೆಲ್ (Model)  ಆದ ದೆಹಲಿಯ ಹುಡುಗಿ, ಮತ್ತು ನಂತರ 1990ರಲ್ಲಿ ತನ್ನ ಮೊದಲ ಬಾಲಿವುಡ್ ಚಲನಚಿತ್ರ 'ಆಶಿಕಿ'ಯೊಂದಿಗೆ ಸ್ಟಾರ್ (star) ಆಗಿದ್ದಳು. ನಂತರ ಉತ್ತರಾಖಂಡದ ಯೋಗಾಶ್ರಮವನ್ನು ಸೇರಿಕೊಂಡಳು. 1997ರಲ್ಲಿ ಉತ್ತರಾಖಂಡದ ಏಕಾಂತ ಯೋಗ ಆಶ್ರಮಕ್ಕೆ ಸೇರಿಕೊಂಡಳು. ಇಲ್ಲಿ ಅವಳು ಇತರ ವಿಷಯಗಳ ಜೊತೆಗೆ, ಆಶ್ರಮದ ಮುಖ್ಯಸ್ಥ ಸ್ವಾಮಿಯೊಂದಿಗೆ ತಾಂತ್ರಿಕ ಪ್ರೇಮವನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾಳೆ. ಅದು ಆಕೆಗೆ "ಉನ್ನತ ಪ್ರಜ್ಞೆಯನ್ನು" ಪಡೆಯಲು ಅವಕಾಶ ಮಾಡಿಕೊಟ್ಟಿತಂತೆ. ಸನ್ಯಾಸ ತನ್ನೊಳಗೆ ರಸವಿದ್ಯೆಯ ಬದಲಾವಣೆಗಳನ್ನು ತಂದಿತು ಎಂದು ಅವರು ಹೇಳುತ್ತಾರೆ. "ನಾನು ಸನ್ಯಾಸವನ್ನು ಆಂತರಿಕಗೊಳಿಸಿಕೊಂಡಿದ್ದೇನೆ. ನನ್ನ ಜೀವನದುದ್ದಕ್ಕೂ ನಾನು ಕೆಲಸ ಮಾಡಿದ ಮಹಿಳಾ ಸಬಲೀಕರಣವು ಮಾನವ ಸಬಲೀಕರಣವನ್ನು ಮೀರಿದೆ" ಎಂದು ಹೇಳಿದ್ದಳು.

Latest Videos
Follow Us:
Download App:
  • android
  • ios