Asianet Suvarna News Asianet Suvarna News

ತಿರುಪತಿಯ ಬೀದಿಯಲ್ಲಿ ಭಿಕ್ಷುಕನಂತೆ ಅಲೆದಾಡಿದ ರಜಿನಿಕಾಂತ್ ಮಾಜಿ ಅಳಿಯ: ಬೆರಗಾದ ಫ್ಯಾನ್ಸ್!

ತಿರುಪತಿಯ ದೇವಸ್ಥಾನದ ಬಳಿ ಧನುಷ್ ಚಿತ್ರೀಕರಣದ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಈಗ ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿ ಅವರು ಹರಿದ ಕೊಳಕು ಚಿಂದಿ ಬಟ್ಟೆ ಧರಿಸಿದರುವುದು ಕಾಣಬಹುದು. 

rajinikanth ex son in law who wandered like a beggar on the streets of Tirupati fans are amazed gvd
Author
First Published Feb 1, 2024, 4:43 PM IST

ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ ಧನುಷ್. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನ ಹೊಂದಿರುವ ಧನುಷ್, ತಿರುಪತಿಯಲ್ಲಿ ಭಿಕ್ಷುಕನಂತೆ ಬೀದಿ ಬೀದಿ ಅಲೆದಿದ್ದಾರೆ. ಹೌದು, ಗ್ಲೋಬಲ್ ಲೆವಲ್ ನಲ್ಲಿ ಮಾರ್ಕೆಟ್ ಹೊಂದಿರುವ ಧನುಷ್, ಸದ್ಯಕ್ಕೆ ತಮ್ಮ 51ನೇ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಶೇಖರ್ ಕಮ್ಮುಲು ನಿರ್ದೇಶನದ ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ತಿರುಪತಿಯಲ್ಲಿ ನಡೆದಿದೆ. ಕೆದರಿದ ಕೂದಲು, ಮಾಸಿದ ಬಟ್ಟೆ ಹಾಗೂ ಅತಿಯಾಗಿ ಬೆಳೆದ ಗಡ್ಡದ ಜೊತೆ ಧನುಷ್ ಬೀದಿ ಬೀದಿ ಸುತ್ತಿದ್ದಾರೆ. ಈ ಅವತಾರದಲ್ಲಿ ಧನುಷ್ ಅವರನ್ನ ಯಾರು ಗುರುತಿಸಲು ಸಾಧ್ಯವಾಗಲಿಲ್ಲ.

ತಿರುಪತಿಯ ದೇವಸ್ಥಾನದ ಬಳಿ ಧನುಷ್ ಚಿತ್ರೀಕರಣದ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಈಗ ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿ ಅವರು ಹರಿದ ಕೊಳಕು ಚಿಂದಿ ಬಟ್ಟೆ ಧರಿಸಿದರುವುದು ಕಾಣಬಹುದು. ಕೆಲವರು ಈ ವಿಡಿಯೋದಲ್ಲಿ ಕಾಣಿಸಿಕೊಂಡವರು ನಿಜವಾಗಿಯೂ ಧನುಷ್ ಅವರೇನಾ ಎಂದು ಅನುಮಾನ ಪಟ್ಟಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ನಟನಲ್ಲ ಬದಲಿಗೆ ಭಿಕ್ಷುಕ ಇರಬೇಕು ಎನಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕಳೆದ ಎರಡು ದಿನ ಚಿತ್ರ ತಂಡ ತಿರುಪತಿಯಲ್ಲಿ ಚಿತ್ರೀಕರಣ ಮಾಡಿದೆ. ಈ ಚಿತ್ರೀಕರಣದ ವೇಳೆ ಸ್ಥಳೀಯರಿಗೆ ಅಚ್ಚರಿಯ ಜೊತೆಗೆ ಅನಾನುಕೂಲವೂ ಆಗಿದೆ.

rajinikanth ex son in law who wandered like a beggar on the streets of Tirupati fans are amazed gvd

ತಿರುಪತಿ ಸನ್ನಿಧಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಹಿನ್ನೆಲೆ, ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಪೊಲೀಸರು ಬದಲಾವಣೆಯನ್ನ ಮಾಡಿದ್ದರು. ಈ ಕಾರಣದಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಕಿರಿಕಿರಿಯನ್ನೂ ಅನುಭವಿಸಿದರು. ಹೀಗಾಗಿ ಇಂತಹ ಜಾಗದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ಏಕೆ ಎಂದು ಕೆಂಡಾಮಂಡಲವಾದ ದರ್ಶನಕ್ಕೆ ಬಂದಿದ್ದ ಕೆಲ ಭಕ್ತರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಭಕ್ತರೊಬ್ಬರು ಪೊಲೀಸರಿಗೆ ದೂರು ನೀಡಿದ ಬಳಿಕ ಶೂಟಿಂಗ್ ನಿಲ್ಲಿಸಲಾಯಿತು. ಚಿತ್ರೀಕರಣವನ್ನು ಪೊಲೀಸರು ತಡೆದರೂ ತಂಡ ತಾವು ಬಯಸಿದ್ದನ್ನು ಶೂಟ್​ಮಾಡುವಲ್ಲಿ ಯಶಸ್ವಿಯಾಗಿದೆ. 

ಪಬ್‌ನಲ್ಲಿ ಮಿಂಚಿದ ಬಿಕಿನಿ ಬ್ಯೂಟಿ: ಪ್ಯಾಂಟ್ ಉದ್ರೋಗ್ತಿದೀಯಾ ಸೋನು ಎಂದ ಫ್ಯಾನ್ಸ್‌!

ಬುಧವಾರ ಮುಂಜಾನೆ ಧನುಷ್ ತಿಮ್ಮಪ್ಪನ ಆಶೀರ್ವಾದ ಪಡೆಯಲು ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರು ದೇವಸ್ಥಾನವನ್ನು ತಲುಪಿದ ತಕ್ಷಣ, ಅಭಿಮಾನಿಗಳು ಅವರ ಒಂದು ನೋಟವನ್ನು ಪಡೆಯಲು ಮತ್ತು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಹೀಗಾಗಿ ನಟ ಗದ್ದಲವನ್ನು ತಪ್ಪಿಸಲು ತನ್ನ ತಂಡದೊಂದಿಗೆ ತ್ವರಿತವಾಗಿ ನಿರ್ಗಮಿಸಿದರು. ಧನುಷ್ ಅವರ ಮುಂಬರುವ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನದನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ವರದಿಯ ಪ್ರಕಾರ, ಇದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ಜಿಮ್ ಸರ್ಭ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಅದರಲ್ಲಿ ನಟ ಮಾಫಿಯಾ ಪಾತ್ರವನ್ನು ನಿರ್ವಹಿಸುತ್ತಿರುವುದನ್ನು ಕಾಣಬಹುದು. 

Follow Us:
Download App:
  • android
  • ios