ಇನ್‌ಸ್ಟಾಗ್ರಾಂನಲ್ಲಿ ಅದಾ ವೈಯಕ್ತಿಕ ಮಾಹಿತಿ ಲೀಕ್. ಸಂಪೂರ್ಣ ಖಾತೆಯನ್ನು ಲಾಕ್‌ ಮಾಡಿದ ನಟಿ. 

ಮುಂಬೈ: ‘ಕೇರಳ ಸ್ಟೋರಿ’ ಖ್ಯಾತಿಯ ನಟಿ ಅದಾ ಶರ್ಮಾ ಅವರ ಫೋನ್‌ ನಂಬರ್‌ ಹಾಗೂ ಇತರ ವೈಯಕ್ತಿಕ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆ ಆಗಿವೆ. ಇದರ ಬೆನ್ನಲ್ಲೇ ಅವರಿಗೆ ಬೆದರಿಕೆ ಸಂದೇಶಗಳು ಹಾಗೂ ಕಿರುಕುಳ ನೀಡುವಂತಹ ಸಂದೇಶಗಳು ರವಾನೆ ಆಗತೊಡಗಿವೆ.

‘ಝಾಮುಡಾ ಬೋಲ್ತೆ’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದಾ ಅವರ ವಿವರಗಳನ್ನು ಲೀಕ್‌ ಮಾಡಲಾಗಿದೆ. ವಿಷಯ ಗೊತ್ತಾದ ತಕ್ಷಣ ಈ ಖಾತೆಯನ್ನು ಬ್ಲಾಕ್‌ ಮಾಡಲಾಗಿದೆ. ಇತ್ತೀಚೆಗೆ ಮಾತನಾಡಿದ್ದ ಅದಾ ಶರ್ಮಾ, ‘ಚಿತ್ರ ಬಿಡುಗಡೆಗೂ ಮುನ್ನ ನನಗೆ ಏನಾದರೂ ಅಪಾಯ ಆಗಬಹುದು ಎಂಬ ಭಯವಿತ್ತು. ಉಗ್ರ ಸಂಘಟನೆಗಳು ಬೆದರಿಕೆ ಹಾಕುವ ಆತಂಕವಿತ್ತು’ ಎಂದಿದ್ದರು.

ಕೇರಳ ಸ್ಟೋರಿ ದಿನದಿಂದ ದಿನಕ್ಕೆ ಅಪಾರ ಸಂಖ್ಯೆಯಲ್ಲಿ ವೀಕ್ಷಕರ ಗಮನ ಸೆಳೆಯುತ್ತಿದೆ. ನಟಿ ಅದಾ ಶರ್ಮಾ ಮೇಲೆ ಸಂಪೂರ್ಣ ಲೈಮ್‌ಲೈಟ್‌ ಇರುವುದನ್ನು ಕಾಣಬಹುದು. ಸಾಕಷ್ಟು ಕಾಂಟ್ರವರ್ಸಿಗಳಿಗೆ ಗುರಿಯಾಗಿರುವ ಸಿನಿಮಾ ಇದಾಗಿದ್ದರೂ ಬಾಕ್ಸ್ ಆಫೀಸ್‌ ಕಲೆಕ್ಷನ್‌ ಧೂಳ್ ಎಬ್ಬಿಸುತ್ತಿದೆ. ಯಶಸ್ಸಿನಲ್ಲಿ ತೇಲುತ್ತಿರುವ ನಟಿ ಕೆಲವು ದಿನಗಳ ಹಿಂದೆ ಚಿತ್ರ ನಿರ್ದೇಶಕ ಜೊತೆ ಪ್ರಯಾಣ ಮಾಡುವಾಗ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈಗ ನೋಡಿದರೆ ಸೋಷಿಯಲ್ ಮೀಡಿಯಾದಲ್ಲಿ ಅದಾ ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಅಪರಿಚಿತರಿಂದ ಮಾಹಿತಿ ಲೀಕ್ ಅಗಿದೆ ಎನ್ನಲಾಗಿದೆ. 

ದಿ ಕೇರಳ ಸ್ಟೋರಿ ನಟಿ ಅದಾ ಶರ್ಮ: ನಿಮಗೆ ಗೊತ್ತಿಲ್ಲದ ಫ್ಯಾಕ್ಟ್ಸ್

ಇನ್‌ಸ್ಟಾಗ್ರಾಂನಲ್ಲಿ Jhamunda_bolte ಎಂದು ಪೇಜ್‌ನಲ್ಲಿ ಅದಾ ಶರ್ಮಾ ಪರ್ಸನಲ್ ವಾಟ್ಸಪ್‌ ನಂಬರ್ ಲೀಕ್ ಆಗಿರುವುದು ಗಮನಕ್ಕೆ ಬಂದಿದೆ. ಮಾನಸಿಕವಾಗಿ ಅದಾ ಶರ್ಮಾಗೆ ಟಾರ್ಚರ್ ನೀಡುತ್ತಿದ್ದಾರೆ ಕೆಲ ವರ್ಗದ ಜನರು ಎಂದು ಟ್ವಿಟರ್‌ನಲ್ಲಿ ಡಾಕ್ಟರ್ ಗೌತಮ್ ಗುಹಾ ಟ್ವೀಟ್ ಮಾಡಿದ್ದಾರೆ. 

ಅಪಘಾತ:

ಕೆಲವು ದಿನಗಳ ಹಿಂದೆ ಅದಾ ಶರ್ಮಾ ನಿರ್ದೇಶಕ ಸುದೀಪ್ತೋ ಸೇನ್ ಜೊತೆ ಕರೀಮ್‌ ನಗರ್‌ನಲ್ಲಿ ನಡೆಯುತ್ತಿದ್ದ ಹಿಂದು ಏಕ್ತಾ ಯಾತ್ರಾಯಲ್ಲಿ ಭಾಗಿಯಾಗಲು ಪ್ರಯಾಣಿಸುತ್ತಿದ್ದರು. ರಸ್ತೆ ಅಪಘಾತದಿಂದ ಅಂದು ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿತ್ತು. ಸೋಷಿಯಲ್ ಮೀಡಿಯಾ ಖಾತೆ ಮೂಲಕ ಆರೋಗ್ಯದ ಬಗ್ಗೆ ನೆಟ್ಟಿಗರಿಗೆ ಅದಾ ಅಪ್ಡೇಟ್ ನೀಡುತ್ತಿದ್ದಾರೆ. 'ನಾನು ಆರೋಗ್ಯವಾಗಿರುವ ಸ್ನೇಹಿತರೆ. ತುಂಬಾ ಮಂದಿ ನನಗೆ ಮೆಸೇಜ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದೀರಿ. ಅಪಘಾತದ ಬಗ್ಗೆ ಎಲ್ಲೆಡೆ ಹರಿದಾಡುತ್ತಿದೆ. ನಮ್ಮ ಇಡೀ ತಂಡ ಕ್ಷೇಮವಾಗಿದೆ ಯಾರಿಗೂ ಗಂಭೀರ ಪೆಟ್ಟಾಗಿಲ್ಲ' ಎಂದು ಅದಾ ಟ್ವೀಟ್ ಮಾಡಿದ್ದರು. 

ಇನ್ಮುಂದೆ ಅನೇಕ ಹುಡುಗಿಯರ ಜೀವ ಉಳಿಯಲಿದೆ; 'ದಿ ಕೇರಳ ಸ್ಟೋರಿ' ಸಕ್ಸಸ್ ಬಳಿಕ ನಾಯಕಿ ಅದಾ ಶರ್ಮಾ ರಿಯಾಕ್ಷನ್

ಕೇರಳಾ ಸ್ಟೋರಿಯಲ್ಲಿ ಏನಿದೆ?

ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಿ ಬಳಿಕ ಅವರನ್ನು ಐಸಿಸ್‌ ಉಗ್ರರನ್ನಾಗಿ ಪರಿವರ್ತಿಸುವ ಕಥಾ ಹಂದರದ ಸಿನಿಮಾ ‘ದ ಕೇರಳ ಸ್ಟೋರಿ’ ದೇಶಾದ್ಯಂತ ಭರ್ಜರಿ ಕಲೆಕ್ಷನ್ ಮಾಡ್ತಿದೆ.ಆಸೀಫಾ ಎಂಬ ಯುವತಿಯೇ ಇಲ್ಲಿ ವಿಲನ್​. ನರ್ಸಿಂಗ್​ ಕಲಿಯಲು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಳ್ಳೋ ಆಸೀಫಾ, ತನ್ನ ರೂಮ್​ಮೇಟ್ಸ್​ಗಳ ಬ್ರೇನ್​ವಾಷ್​ ಮಾಡುವುದು ದಿ ಕೇರಳ ಸ್ಟೋರಿಯ ಕಥಾ ಹಂದರ. ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್ ಎಂಬ ರೂಮ್​ಮೇಟ್ಸ್​ಗಳ ಬ್ರೇನ್ ವಾಷ್ ಮಾಡುತ್ತಾಳೆ ಆಸೀಫಾ. ಇಸ್ಲಾಂ ಬಗ್ಗೆ ಬ್ರೇನ್​ ವಾಷ್​ ಮಾಡಿ ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡುತ್ತಾಳೆ, ಐಸಿಸ್​ ಉಗ್ರ ಸಂಘಟನೆಗೆ ಸೇರಿಸುತ್ತಾಳೆ. ಇದು ಕೇರಳದಲ್ಲಿ ನಡೆದ ಸಹಸ್ರಾರು ಯುವತಿಯರ ಮತಾಂತರ ಭಯಾನಕ ಕಥೆಯಾದರೂ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿರುವ ನೈಜ ಚಿತ್ರಣ ಕೂಡ ಹೌದು ಎಂದಿದ್ದಾರೆ ಸುದಿಪ್ತೋ.