ಇನ್ಮುಂದೆ ಅನೇಕ ಹುಡುಗಿಯರ ಜೀವ ಉಳಿಯಲಿದೆ; 'ದಿ ಕೇರಳ ಸ್ಟೋರಿ' ಸಕ್ಸಸ್ ಬಳಿಕ ನಾಯಕಿ ಅದಾ ಶರ್ಮಾ ರಿಯಾಕ್ಷನ್
ದಿ ಕೇರಳ ಸ್ಟೋರಿ ಸಕ್ಸಸ್ ಬಳಿಕ ನಟಿ ಅದಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾ ಅನೇಕ ಹಣ್ಣು ಮಕ್ಕಳ ಜೀವ ಉಳಿಸುತ್ತದೆ ಎಂದು ಹೇಳಿದ್ದಾರೆ.
ವಿವಾದಗಳ ನಡುವೆಯೂ ದಿ ಕೇರಳ ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಕೆಲವರು ರಾಜ್ಯಗಳಲ್ಲಿ ಬ್ಯಾನ್ ಮಾಡಲಾಗಿದೆ. ಆದರೂ ಉತ್ತಮ ಕಮಾಯಿ ಮಾಡಿದೆ. ಕರ್ನಾಟಕದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ಕೇರಳ ಸ್ಟೋರಿ ಪ್ರದರ್ಶನ ಕಾಣುತ್ತಿದೆ. ಒಂದಿಷ್ಟು ವಿರೋಧ, ಟೀಕೆಯ ನಡುವೆಯೂ ಅನೇಕರು ಕೇರಳ ಸ್ಟೋರಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಅನೇಕರು ದಿ ಕೇರಳ ಸ್ಟೋರಿ ಸಿನಿಮಾವನ್ನು ಕಾಶ್ಮೀರ್ ಫೈಲ್ಸ್‌ಗೆ ಹೋಲಿಸುತ್ತಿದ್ದಾರೆ.
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ದಿ ಕೇರಳ ಸ್ಟೋರಿ ಬಗ್ಗೆ ನಟಿ ಅದಾ ಶರ್ಮಾ ಮಾತನಾಡಿದ್ದಾರೆ. 'ಚಿತ್ರ ಸೃಷ್ಟಿಸಿದ ಜಾಗೃತಿಯು ಅನೇಕ ಹುಡುಗಿಯರ ಜೀವಗಳನ್ನು ಉಳಿಸುತ್ತದೆ. ನಮಗೆ ದೊರೆತ ಬೆಂಬಲ ದೊಡ್ಡದು. ನಾನು ಕೃತಜ್ಞನಾಗಿದ್ದೇವೆ' ಎಂದು ಹೇಳಿದ್ದಾರೆ.
ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ ನಟ ಆದಾ ಶರ್ಮಾ, 'ಸಿನಿಮಾ ಕುಟುಂಬಕ್ಕೆ ಸೇರಿದವಳದಿದ್ದರೂ ನಾನು ಎಲ್ಲರಿಂದಲೂ ಪಡೆದ ಪ್ರೀತಿ ಅಭೂತಪೂರ್ವವಾಗಿದೆ. ಇಡೀ ರಾಷ್ಟ್ರವೇ ನಮಗೆ ಬೆಂಬಲಿಸಿದೆ. ನನಗಾಗಿ ನಾನು ಕಂಡ ಕನಸುಗಳು ತುಂಬಾ ಚಿಕ್ಕದಾಗಿದೆ. ನನ್ನ ಪ್ರೀತಿ ಪಾತ್ರರು ನನ್ನ ಬಗ್ಗೆ ಹೊಂದಿರುವ ಕನಸುಗಳು ನನಸಾಗುತ್ತಿವೆ' ಎಂದು ಹೇಳಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮಾ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸಿದ್ದಾರೆ. 'ಈ ಪಾತ್ರ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ತುಂಬಾ ಭಯವಾಗಿತ್ತು. ಈ ಭಯ ತುಂಬಾ ಆಳವಾಗಿ ಬೇರೂರಿದೆ' ಎಂದು ಹೇಳಿದ್ದಾರೆ.
ಸುದೀಪ್ತೋ ಸೇನ್ ಸಾರಥ್ಯದಲ್ಲಿ ಮೂಡಿ ಬಂದಿರುವ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ನಟಿ ಅದಾ ಶರ್ಮಾ ನಟಿಸಿದ್ದಾರೆ. ಕೆಲಸ ಹುಡುಕಿ ಬೇರೆ ದೇಶಗಳಿಗೆ ಹೋಗುವ ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡಲಾಗುತ್ತದೆ ಹಾಗೂ ಮತಾಂತರದ ಬಗ್ಗೆ ಈ ಸಿನಿಮಾದಲ್ಲಿ ತೋರಸಲಾಗಿದೆ. ಈ ವಿಚಾರ ಅನೇಕರ ವಿರೋಧಕ್ಕೆ ಕಾರಣವಾಗಿದೆ. ಇದು ಸುಳ್ಳು ಎಂದು ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹಲವರ ನಿದ್ದೆಗೆಡಿಸಿರೋ ದಿ ಕೇರಳ ಸ್ಟೋರಿ ಎರಡು ದಿನಗಳಲ್ಲಿ ಗಳಿಸಿದ್ದೆಷ್ಟು?
ಕಾಶ್ಮೀರ್ ಫೈಲ್ಸ್ ಸಿನಿಮಾ ಸ್ಟಾರ್ ಅನುಪಮ್ ಖೇರ್ ಪ್ರತಿಕ್ರಿಯೆ
'ಮತ್ತೊಮ್ಮೆ, ಅವರು ಒಂದೇ ಮುಖಗಳು ಎಂದು ನಾನು ಹೇಳುತ್ತೇನೆ. ನಾನು ಸಿನಿಮಾ ನೋಡಿಲ್ಲ ಆದರೆ ಜನ ವಾಸ್ತವಕ್ಕೆ ಹತ್ತಿರವಾದ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ. ಇಂಥ ವಿಷಯಗಳನ್ನು ಸಿನಿಮಾ ಮಾಡಲು ಸ್ವತಂತ್ರರು. ಯಾರೂ ಅವರನ್ನು ತಡೆಯುವುದಿಲ್ಲ' ಎಂದು ಹೇಳಿದ್ದಾರೆ.
The Kerala Story ಬ್ಯಾನ್ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?
ವಿವೇಕ್ ಅಗ್ನಿಹೋತ್ರಿ
'The Kerala Storyತಂಡ, ಮೊದಲು ನಾನು ನಿಮ್ಮ ಧೈರ್ಯಶಾಲಿ ಪ್ರಯತ್ನಕ್ಕಾಗಿ ಅಭಿನಂದಿಸುತ್ತೇನೆ. ಅದೇ ಸಮಯದಲ್ಲಿ ನಾನು ನಿಮಗೆ ಕೆಟ್ಟ ಸುದ್ದಿಯನ್ನು ನೀಡುತ್ತೇನೆ, ಇಲ್ಲಿಂದ ಇನ್ಮುಂದೆ ನಿಮ್ಮ ಜೀವನವು ಒಂದೇ ಆಗಿರುವುದಿಲ್ಲ. ನೀವು ಊಹಿಸಲಾಗದ ದ್ವೇಷವನ್ನು ಸ್ವೀಕರಿಸುತ್ತೀರಿ. ನೀವು ಉಸಿರುಗಟ್ಟಿದ ಅನುಭವ ಪಡೆಯುತ್ತೀರಿ. ಅನೇಕ ಬಾರಿ ನೀವು ಗೊಂದಲಕ್ಕೊಳಗಾಗಬಹುದು ಮತ್ತು ಖಿನ್ನತೆಗೆ ಒಳಗಾಗಬಹುದು' ಎಂದು ಹೇಳಿದ್ದಾರೆ.