Asianet Suvarna News Asianet Suvarna News

ಬಾಳಲ್ಲಿ ಬಂದಿದ್ದಕ್ಕೆ ಧನ್ಯವಾದ; ರಶ್ಮಿಕಾ ಮಂದಣ್ಣ ಪೋಸ್ಟ್ ನೋಡಿ ಫ್ಯಾನ್ಸ್ ಶಾಕ್!

ರಶ್ಮಿಕಾ ತನ್ನ ಬಾಳಲ್ಲಿ ಬಂದ ವ್ಯಕ್ತಿಗೆ ಗುಟ್ಟಾಗಿ ಧನ್ಯವಾದ ಹೇಳಿದ್ದಾರೆ. ಇದನ್ನು ನೇರವಾಗಿ ಹೇಳುವ ಬದಲು ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಮಾಡಿದ್ದಾರೆ. 

Thanks for entering in my life says Actress Rashmika Mandanna srb
Author
First Published Dec 20, 2023, 8:03 PM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫುಲ್ ಖುಷಿಯಲ್ಲಿದ್ದಾರೆ. ಯಾಕಂದ್ರೆ ಒಂದೆಡೆ ಶ್ರೀವಲ್ಲಿ ನಟಿಸಿದ್ದ ಅನಿಮಲ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಬಿಗ್ ಹಿಟ್ ಆಗ್ತಿದೆ. ಮತ್ತೊಂದೆಡೆ ಈಕೆಯ ಬಾಳಲ್ಲಿ ಒಬ್ಬ ವ್ಯಕ್ತಿಯ ಪ್ರವೇಶವೂ ಆಗಿದೆ. ಹೀಗೆ ಎಂಟ್ರಿ ಕೊಟ್ಟವರ ಬಗ್ಗೆ ರಶ್ಮಿಕಾ ಪ್ರೀತಿಯ ಮಾತುಗಳನ್ನೂ ಆಡಿದ್ದಾರೆ. ಅದನ್ನ ಕೇಳಿದ್ರೆ ಓಹೋ ಹೌದಾ ಆಲ್ ದಿ ಬೆಸ್ಟ್ ಲಿಲ್ಲಿ ಅಂತೀರಾ..
 
‘ನನ್ನ ಜೀವನಕ್ಕೆ ಬಂದಿದ್ದಕ್ಕೆ ಧನ್ಯವಾದ’ರಶ್ಮಿಕಾ ಮಂದಣ್ಣ ಪ್ರೀತಿ ಸಂದೇಶ ಯಾರಿಗೆ.? ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದ ಈ ಮಾತನ್ನು ಸ್ವತಃ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಯಾಗಿ ಬರೆದುಕೊಂಡಿದ್ದಾರೆ. ರಶ್ಮಿಕಾ ಬರೆದಿರುವುದು ಎರಡೇ ಎರಡು ಸಾಲುಗಳು. ಆದ್ರೆ ಈ ಸಾಲುಗಳಲ್ಲಿ ತುಂಬಾ ಪ್ರೀತಿ ತುಂಬಿದೆ. ರಶ್ಮಿಕಾ ಬರೆದ ಆ ಪ್ರೀತಿಯ ಪತ್ರ ಏನು ಅಂತ ಒಮ್ಮೆ ನೋಡ್ ಬಿಡಿ.. ರಶ್ಮಿಕಾ ಪತ್ರದ ರೈಟಿಂಗ್ ಹೀಗಿದೆ 'ನಿನ್ನಲ್ಲಿ ನನಗೆ ಹೇಳಲಿಕ್ಕಿರೋದು ಇಷ್ಟೇ.. ನನ್ನ ಬಾಳಲ್ಲಿ ಬಂದಿರುವುದಕ್ಕಾಗಿ ಧನ್ಯವಾದಗಳು. ರಶ್ಮಿಕಾ ಮಂದಣ್ಣ, ನಟಿ

ರಶ್ಮಿಕಾ ತನ್ನ ಬಾಳಲ್ಲಿ ಬಂದ ವ್ಯಕ್ತಿಗೆ ಗುಟ್ಟಾಗಿ ಧನ್ಯವಾದ ಹೇಳಿದ್ದಾರೆ. ಇದನ್ನು ನೇರವಾಗಿ ಹೇಳುವ ಬದಲು ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಮಾಡಿದ್ದಾರೆ. ‘ಬಾಳಲ್ಲಿ ಬಂದಿದ್ದಕ್ಕೆ ಧನ್ಯವಾದ’ ಅನ್ನೋ ಮಾತನ್ನ ಸಾಮಾನ್ಯವಾಗಿ ಪ್ರೀತಿ, ಅಥವಾ ಮದುವೆಯಾದ ಜೋಡಿ ಹೇಳಿಕೊಳ್ಳೋದು ಸಹಜ. ಹಾಗಾದ್ರೆ, ರಶ್ಮಿಕಾ ಧನ್ಯಾದ ಹೇಳಿದ್ದಾದರೂ ಯಾರಿಗೆ.? ರಶ್ಮಿಕಾ ಮಂದಣ್ಣ ಲೈಫ್ಗೆ ಎಂಟ್ರಿ ಕೊಟ್ಟವರಾರು ಅನ್ನೋದೇ ಈಗ ಕುತೂಹಲ..

ಶ್ರೀವಲ್ಲಿ ಬಾಳಲ್ಲಿ ಬಂದ ಆ ವ್ಯಕ್ತಿ ಯಾರು..? ರಶ್ಮಿಕಾ ಮಂದಣ್ಣ ಬಾಳಲ್ಲಿ ಎಂಟ್ರಿಕೊಟ್ಟವರ ಪಟ್ಟಿ ತೆಗೆದ್ರೆ ಇಲ್ಲಿ ರಿವಿಲ್ ಆಗೋದು ಇಬ್ಬರ ಹೆಸರು ಮಾತ್ರ.  ರಶ್ಮಿಕಾಗೆ ಪರದೆ ಜೊತೆಗೆ ಬಾಳಲ್ಲಿಯೂ ಬಂದ ಮೊದಲ ಹೀರೋ ರಕ್ಷಿತ್ ಶೆಟ್ಟಿ.. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ರಶ್ಮಿಕಾ ಜೊತೆ ಆದ್ರು. ಬರೀ ಜತೆಯಾಗಿಲ್ಲ ಸಿನಿಮಾ ಮುಗೋ ಹೊತ್ತಿಗೆ ಪ್ರೀತಿಯಲ್ಲಿ ಬಿದ್ದು ಉಂಗುರವನ್ನೂ ಬದಲಿಸಿಕೊಂಡ್ರು. ಆದ್ರೆ ರಕ್ಷಿತ್ ಶೆಟ್ಟಿ, ಬೆಳಗ್ಗೆದ್ದು ಅದ್ಯಾರ ಮುಖವನ್ನು ನೋಡಿದ್ರೋ ಗೊತ್ತಿಲ್ಲ. ಈ ಅಂದಗಾತಿ ಜೊತೆಗಿನ ಪ್ರೀತಿಗೆ ಎಳ್ಳು ನೀರೋ ಬಿಡಬೇಕಾಗಿ ಬಂತು. 

ಹಾಗಂತ ರಕ್ಷಿತ್ ರಶ್ಮಿಕಾ ಇನ್ನೂ ಮಾತು ಬಿಟ್ಟಿಲ್ಲ. ಆದ್ರೆ ರಕ್ಷಿತ್ಗೆ ರಶ್ಮಿಕಾ ಈ ಲೆಟರ್ ಹಾಕೋಕು ಸಾಧ್ಯವೂ ಇಲ್ಲ. ರಶ್ಮಿಕಾ ಲವ್ ಲೆಟರ್ಗೆ ಫ್ಯಾನ್ಸ್ ಕಟ್ಟುತ್ತಿರೋ ಹೆಸರೇ ಬೇರೆ. ಆ ಹೆಸರೇ ವಿಜಯ್ ದೇವರಕೊಂಡ.. ಹಾಗಿದರೆ ವಿಜಯ್ ದೇವರಕೊಂಡಾಗೆ ಪತ್ರ ಬರೆದ್ರಾ ರಶ್ಮಿಕಾ..?

ಪ್ರಶಾಂತ್ ನೀಲ್ 'ಸಲಾರ್' ಚಿತ್ರಕ್ಕೆ ಸಹಿ ಹಾಕಬಾರದು ಎಂದುಕೊಂಡಿದ್ದೆ; ನಟ ಪ್ರಭಾಸ್ ಶಾಕಿಂಗ್ ಹೇಳಿಕೆ!

ರಶ್ಮಿಕಾ ಟಾಲಿವುಡ್ಗೆ ಕಾಲಿಟ್ಟ ಮೇಲೆ ತೆರೆ ಮೇಲೆ ಪ್ರೀತಿ ಮುತ್ತಿನ ಮಳೆ ಸುರಿಸಿದ್ದು ವಿಜಯ್ ದೇವರಕೊಂಡ ಜತೆಗೆ ಹೆಚ್ಚು. ಪರದೆ ಮೇಲೆ ಮತ್ತು ಆಚೆ ರಶ್ಮಿಕಾ ವಿಜಯ್ ಕೆಮಿಸ್ಟ್ರಿ ನೋಡಿ ಇವರಿಬ್ರದ್ರ ಸೂಪರ್ ಪೇರ್, ಇವರಿಬ್ರು ಲವರ್ಸ್ ಅಂತ ಹೇಳ್ತಾ ಅದಕ್ಕೆ ಬೇಕಾದ ಪುರಾವೆಗಳನ್ನೂ ಕೊಟ್ಟಿದ್ರು. ರಶ್ಮಿಕಾ ಇಡೋ ಪ್ರತಿ ಹೆಜ್ಜೆಯ ಹಿಂದೆ ವಿಜಯ್ ದೇವರಕೊಂಡ ಇದ್ದಾರೆ ಅಂತಾನು ಹೇಳಿದ್ರು. 

ನಿನ್ನಣ್ಣನ್ನ ಹೇಗೆ ಕಂಟ್ರೋಲ್‌ನಲ್ಲಿ ಇಟ್ಕೊಂಡಿದೀನಿ ನೋಡು; ಅತ್ತಿಗೆ ಮಾತು ಕೇಳಿ ಪುಷ್ಪಾಗೆ ಶಾಕ್ ಆಯ್ತಾ?

ಈಗ ರಶ್ಮಿಕಾ ಈ ಪೋಸ್ಟ್ ಹಾಕಿದ್ದು, ಇದು ವಿಜಯ್ ದೇವರಕೊಂಡಾಗೆ ಹೇಳಿದ್ದು ಅಂತ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಎನಿ ವೇ ರಶ್ಮಿಕಾ ಪತ್ರದ ಬಗ್ಗೆ ಸಿನಿಮಾ ಭಾಷೆಯಲ್ಲಿ ಹೇಳೋದಾದ್ರೆ, ಇದು ಜೆಸ್ಟ್ ಫಸ್ಟ್ ಲುಕ್. ಮುಂದೆ ಟೀಸರ್, ಟ್ರೈಲರ್ ಎಲ್ಲವೂ ಲಿಲ್ಲಿ ಇಲ್ಲಿ ಹೇಳಿಕೊಳ್ತಾರೆ ಅನ್ನೋದು ಗೊತ್ತಾಗ್ತಿದೆ. ಈ ಮೂಲಕ ಲಿಲ್ಲಿ ಬಾಳಲ್ಲಿ ಯಾರೋ ಇದ್ದಾರೆ ಅನ್ನೋದಂತು ಮಾತ್ರ ಕನ್ಫರ್ಮ್ ಆಗ್ತಿದೆ. 

Follow Us:
Download App:
  • android
  • ios