Asianet Suvarna News Asianet Suvarna News

ನಿನ್ನಣ್ಣನ್ನ ಹೇಗೆ ಕಂಟ್ರೋಲ್‌ನಲ್ಲಿ ಇಟ್ಕೊಂಡಿದೀನಿ ನೋಡು; ಅತ್ತಿಗೆ ಮಾತು ಕೇಳಿ ಪುಷ್ಪಾಗೆ ಶಾಕ್ ಆಯ್ತಾ?

ಪುಷ್ಪಾಳ ಬಳಿ ಯಾವುದೋ ರಹಸ್ಯ ತಿಳಿದುಕೊಳ್ಳಬೇಕು ಎಂದೇ ಹೊಂಚು ಹಾಕುತ್ತಿರುವಂತೆ ಪುಷ್ಪಾಳ ಅತ್ತಿಗೆ ಪುಷ್ಪಾ ಬಳಿ ಮಾತನಾಡುತ್ತಾಳೆ. ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ಆಕೆ ಪುಷ್ಪಾಗೆ ಟಿಪ್ಸ್ ಕೊಡುತ್ತಾಳೆ. 

You should control your husband says pushpa sister in law in Brundavana serial srb
Author
First Published Dec 20, 2023, 6:02 PM IST

ಪುಷ್ಪಾ ತವರುಮನೆಗೆ ಬಂದಿದ್ದಾಳೆ. ತಾಯಿ ಇಲ್ಲದ ತಬ್ಬಲಿ ಪುಷ್ಪಾಗೆ ಅಣ್ಣ-ಅತ್ತಿಗೆಯೇ ತಾಯಿ-ತಂದೆ ಎಂಬಂತಾಗಿದೆ. ತವರಿಗೆ ಗಂಡ ಆಕಾಶ್ ಜತೆ ಮೊದಲ ಬಾರಿಗೆ ಬಂದಿರುವ ಪುಷ್ಪಗೆ ಅತ್ತಿಗೆ ಕೆಲವು ಕಿವಿಮಾತುಗಳನ್ನು ಹೇಳುತ್ತಾಳೆ. 'ಅತ್ತೆ ಮನೆಯಲ್ಲಿ ಎಲ್ಲವೂ ಒಕೆ ತಾನೆ? ಗಂಡ ಆಕಾಶ್‌ ಜತೆ ಏನೇನು ಆಗ್ಬೇಕೋ ಅದೆಲ್ಲ ಆಗಿದೆ ತಾನೇ? ಗಂಡ ನಿನ್ನ ಚೆನ್ನಾಗಿ ನೋಡ್ಕೋತಾ ಇದಾರೆ ತಾನೆ? ನೀನು ನನ್ನ ತಾಯಿ ಅಂದ್ಕೊಂಡು ಯಾವ್ದನ್ನೂ ಮುಚ್ಚುಮರೆ ಮಾಡದೇ ಹೇಳ್ಬೇಕು ಪುಷ್ಪಾ. ನಿಜವಾಗಿಯೂ ಹೇಳು ಪುಷ್ಪಾ' ಎನ್ನುತ್ತಾಳೆ. 

ಅತ್ತಿಗೆಯ ಮಾತು ಕೇಳಿ ನಿಜವಾಗಿಯೂ ಪುಷ್ಪಾ ಗಾಬರಿಯಾಗುತ್ತಾಳೆ. ಅತ್ತಿಗೆಗೆ ಎಲ್ಲವೂ ಗೊತ್ತಾಗಿಬಿಟ್ಟಿದೆಯಾ? ನಿಜ ಹೇಳಲಾ ಅಥವಾ ಸುಳ್ಳು ಹೇಳಲಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಮನದಲ್ಲಿ ಮೂಡುತ್ತವೆ. ಆದರೆ, ತನ್ನ ಎಲ್ಲ ನೋವನ್ನೂ ಮನದಲ್ಲೇ ಬಚ್ಚಿಟ್ಟುಕೊಂಡು ಪುಷ್ಪಾ 'ಅತ್ತಿಗೇ, ನಿಜವಾಗ್ಲೂ ನಾನು ನನ್ ಗಂಡನ ಮನೆಯಲ್ಲಿ ಸುಖವಾಗಿ ಇದೀನಿ. ನನ್ ಗಂಡನ ಮನೆ ದೇವಸ್ಥಾನ ಇದ್ದಂಗೆ. ನಾನು ಅಲ್ಲಿ ತುಂಬಾ ಚೆನ್ನಾಗಿ ಇದೀನಿ. ನನ್ ಗಂಡ ಆಕಾಶ್ ನಿಜವಾಗಿಯೂ ದೇವ್ರಂಥವ್ರು' ಎನ್ನುತ್ತಾಳೆ. 

ರೋಡ್‌ನಲ್ಲಿ ಚಾರು-ರಾಮಾಚಾರಿ ರೊಮಾನ್ಸ್ ; ನಾವೂ ಎಳನೀರು ಮಾರೋಕೆ ಹೋಗ್ತೀವಿ ಅಂತಿದಾರೆ ಕಾಲೇಜ್ ಹುಡುಗ್ರು!

ಪುಷ್ಪಾಳ ಬಳಿ ಯಾವುದೋ ರಹಸ್ಯ ತಿಳಿದುಕೊಳ್ಳಬೇಕು ಎಂದೇ ಹೊಂಚು ಹಾಕುತ್ತಿರುವಂತೆ ಪುಷ್ಪಾಳ ಅತ್ತಿಗೆ ಪುಷ್ಪಾ ಬಳಿ ಮಾತನಾಡುತ್ತಾಳೆ. ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬ ಬಗ್ಗೆ ಆಕೆ ಪುಷ್ಪಾಗೆ ಟಿಪ್ಸ್ ಕೊಡುತ್ತಾಳೆ. ಗಂಡಸರು ನಮ್ಮ ಬಳಿ ಇದ್ದಾಗ ನಾವು ಅವರನ್ನು ಸತಾಯಿಸುತ್ತಿರಬೇಕು. ಆದರೆ ಅವರು ನಮ್ಮಿಂದ ದೂರ ಹೋಗುತ್ತಿದ್ದಾರೆ ಅಂದರೆ ಆಗ ನಾವು ಸುಮ್ಮನಿರಬಾರದು, ಅವರು ದೂರ ಹೋಗದಂತೆ ನಾವು ಶತಾಯಗತಾಯ ಪ್ರಯತ್ನಿಸಬೇಕು. ಗಂಡ ಯಾವತ್ತೂ ನಮ್ಮ ಹದ್ದುಬಸ್ತಿನಲ್ಲಿಯೇ ಇರಬೇಕು. ನಿಮ್ಮ ಅಣ್ಣ ಮದುವೆಯಾದ ಹೊಸದರಲ್ಲಿ ಸಿಡುಕು ಮೂತಿ ಸಿದ್ದಣ್ಣನ ತರ ಇದ್ದ. ಆದರೆ ಈಗ ನಾನು ಹದ್ದುಬಸ್ತಿನಲ್ಲಿ ಇಟ್ಕೊಂಡಿಲ್ವಾ' ಎಂದು ಅತ್ತಿಗೆ ಪುಷ್ಪಾಗೆ ಹೇಳುತ್ತಾಳೆ. 

ಬಾಘ್‌ಬನ್ ಚಿತ್ರಕ್ಕೆ ರವಿ ಚೋಪ್ರಾ ಮೊದಲ ಆಯ್ಕೆ ಅಮಿತಾಭ್-ಹೇಮಾ ಮಾಲಿನಿ ಅಲ್ಲ, ಬೇರೆ ಯಾರೋ ಆಗಿತ್ತು!

ಒಟ್ಟಿನಲ್ಲಿ, ಅತ್ತಿಗೆಯ ಮಾತು ಕೇಳುತ್ತಿದ್ದಂತೆ ಪುಷ್ಪಾಗೆ ತನ್ನ ಗಂಡನ ಬಗ್ಗೆ ಆತಂಕ ಶುರುವಾಗುತ್ತದೆ. ತಾನು ಏನು ಮಾತನಾಡಬೇಕು, ಏನು ಮಾತನಾಡಬಾರದು ಎಂಬುದನ್ನೆಲ್ಲ ಒಮ್ಮೆ ಯೋಚಿಸುತ್ತಾಳೆ. ಆದರೆ, ಪುಷ್ಪಾ ಅತ್ತಿಗೆ ಮಾತ್ರ ತಾನೇನು ಹೇಳಬೇಕು ಎಂಬುದನ್ನು ಹೇಳಿ ಮುಗಿಸಿದ್ದಾಳೆ. ಆದರೆ, ಪುಷ್ಪಾ ಮಾತ್ರ ಏನನ್ನೂ ಹೇಳಬಾರದು ಎಂದು ನಿರ್ಧರಿಸಿ ಅದರಂತೆ ಯಾವುದೇ ಗುಟ್ಟು ಬಿಟ್ಟು ಕೊಡದೇ ತನ್ನ ಗಂಡ ಮತ್ತು ಗಂಡನ ಮನೆಯವರ ಗೌರವ ಕಾಪಾಡಲು ನೋಡುತ್ತಾಳೆ. ಅಂದಹಾಗೆ, ಬೃಂದಾವನ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೋಮವಾರದಂದ ಶನಿವಾರ ರಾತ್ರಿ 8.00ಕ್ಕೆ ಪ್ರಸಾರವಾಗಲಿದೆ. 

Follow Us:
Download App:
  • android
  • ios