ಪ್ರಶಾಂತ್ ನೀಲ್ 'ಸಲಾರ್' ಚಿತ್ರಕ್ಕೆ ಸಹಿ ಹಾಕಬಾರದು ಎಂದುಕೊಂಡಿದ್ದೆ; ನಟ ಪ್ರಭಾಸ್ ಶಾಕಿಂಗ್ ಹೇಳಿಕೆ!
ಅದೊಂದು ದಿನ ನಿರ್ಮಾಪಕರೊಬ್ಬರು ಬಂದು ಪ್ರಶಾಂತ್ ನೀಲ್ ನಿಮ್ಮನ್ನು ಭೇಟಿಯಾಗಬೇಕಂತೆ ಎಂದ್ರು. ಆದರೆ ನಾನು ನಂಬಲಿಲ್ಲ. ಕಾರಣ, ಹಲವು ನಿರ್ಮಾಪಕರು ಬೇರೆಯದೇ ಕಾರಣಕ್ಕೆ ಇಂತಹ ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ.
ಭಾರೀ ನಿರೀಕ್ಷೆ ಮೂಡಿಸಿರುವ ಪ್ರಭಾಸ್-ಪ್ರಶಾಂತ್ ನೀಲ್ ಜೋಡಿಯ ಸಲಾರ್ ಚಿತ್ರವು ನಾಡಿದ್ದು, ಅಂದರೆ 22 ಡಿಸೆಂಬರ್ 2023ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಈ ವರ್ಷದ ಭಾರೀ ನಿರೀಕ್ಷೆಯ ಚಿತ್ರ ಎಂದೇ ಹೇಳಲಾಗುತ್ತಿರುವ ಸಲಾರ್ ಚಿತ್ರದ ಬಿಡುಗಡೆಯನ್ನು ಹಲವರು ಎದುರು ನೋಡುತ್ತಿದ್ದಾರೆ. ಇನ್ನೇನು ಎರಡೇ ದಿನಗಳಲ್ಲಿ ಬಿಡುಗಡೆ ಆಗಲಿರುವ ಸಲಾರ್ ಚಿತ್ರದ ಬಗ್ಗೆ ಸಂದರ್ಶನವೊಂದರಲ್ಲಿ Actro Prabhas ಅವರು ಕೆಲವು ಸೀಕ್ರೆಟ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟ ಪ್ರಭಾಸ್ ' Prashanth Neel ಸಲಾರ್ ಚಿತ್ರಕ್ಕೆ nAnu 'ನೋ' ಎನ್ನಲೇಬೇಕು ಎಂದುಕೊಂಡಿದ್ದೆ. ಕಾರಣ, ನನಗೆ ಆಗ ಡೇಟ್ಸ್ ಸಮಸ್ಯೆ ಇತ್ತು. ಆದಿಪುರುಷ್ ಮತ್ತು ಕಲ್ಕಿ ಚಿತ್ರಗಳಿಗೆ ನಾನು ಡೇಟ್ಸ್ ಕೊಟ್ಟಿದ್ದೆ. ಅವೆರಡೂ ಚಿತ್ರಗಳೂ ಬಿಗ್ ಬಜೆಟ್ ಚಿತ್ರಗಳೇ ಆಗಿದ್ದವು. ಜತೆಗೆ, ಆದಿಪುರುಷ್ ಚಿತ್ರಕ್ಕೆ ತುಂಬಾ ಡೇಟ್ಸ್ ಬೇರೆ ಅಗತ್ಯವಿತ್ತು. ಹೀಗಾಗಿ ನಾನು ಪ್ರಶಾಂತ್ ನೀಲ್ ಚಿತ್ರಕ್ಕೆ ನೋ ಎನ್ನಲೇಬೇಕು ಎಂದುಕೊಂಡಿದ್ದೆ. ಆದರೆ ಆಗಿದ್ದೇ ಬೇರೆ.
ಅದೊಂದು ದಿನ ನಿರ್ಮಾಪಕರೊಬ್ಬರು ಬಂದು ಪ್ರಶಾಂತ್ ನೀಲ್ ನಿಮ್ಮನ್ನು ಭೇಟಿಯಾಗಬೇಕಂತೆ ಎಂದ್ರು. ಆದರೆ ನಾನು ನಂಬಲಿಲ್ಲ. ಕಾರಣ, ಹಲವು ನಿರ್ಮಾಪಕರು ಬೇರೆಯದೇ ಕಾರಣಕ್ಕೆ ಇಂತಹ ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ. ಆದರೆ, ಅದೊಂದು ದಿನ ನಾನು ಮತ್ತು ಪ್ರಶಾಂತ್ ನೀಲ್ ಬೇಟಿ ಆದೆವು. ಇಬ್ಬರೂ ತುಸು ಸಂಕೋಚ ಸ್ವಭಾವದವರು. ಹೀಗಾಗಿ ನಮ್ಮ ಮೊದಲ ಭೇಟಿಯಲ್ಲಿ ಸಿನಿಮಾ ಬಗ್ಗೆ ಮಾತುಕತೆ ಆಗಲಿಲ್ಲ.
ನಿನ್ನಣ್ಣನ್ನ ಹೇಗೆ ಕಂಟ್ರೋಲ್‌ನಲ್ಲಿ ಇಟ್ಕೊಂಡಿದೀನಿ ನೋಡು; ಅತ್ತಿಗೆ ಮಾತು ಕೇಳಿ ಪುಷ್ಪಾಗೆ ಶಾಕ್ ಆಯ್ತಾ?
ಮತ್ತೊಂದು ದಿನ ನಾವಿಬ್ಬರೂ ಭೇಟಿಯಾಗಿ ಸಿನಿಮಾ ಬಗ್ಗೆ ಮಾತುಕತೆ ನಡೆಸಿದೆವು. ಅದು ಹೊಂಬಾಳೆ ನಿರ್ಮಾಣ ಸಂಸ್ಥೆಯೇ ಕಾಲ್ ಮಾಡಿ ಕರೆದು ಮಾಡಿದ ಮೀಟಿಂಗ್. 45 ದಿನಗಳ ಕಾಲ್‌ಶೀಟ್ ಸಾಕು ಎಂದು ಹೊಂಬಾಳೆ ಸಂಸ್ಥೆ ಹೇಳಿದಾಗ ನಾನು ಪ್ರಶಾಂತ್ ಜತೆ ಸಿನಿಮಾ ಮಾಡುವ ಬಗ್ಗೆ ಒಲವು ತೋರಿಸಿದೆ. ನಾನು ನನ್ನ ಮ್ಯಾನೇಜರ್ ಬಳಿ ಮಾತನಾಡಿ ಹೇಗಾದರೂ 45 ದಿನಗಳ ಕಾಲ್‌ಶೀಟ್ ಅಡ್ಜೆಸ್ಟ್ ಮಾಡಲು ಸಾಧ್ಯವೇ ನೋಡಿ ಎಂದೆ.
ಬಾಘ್‌ಬನ್ ಚಿತ್ರಕ್ಕೆ ರವಿ ಚೋಪ್ರಾ ಮೊದಲ ಆಯ್ಕೆ ಅಮಿತಾಭ್-ಹೇಮಾ ಮಾಲಿನಿ ಅಲ್ಲ, ಬೇರೆ ಯಾರೋ ಆಗಿತ್ತು!
ಆದಿಪುರುಷ್ ಸಿನಿಮಾ ಶೂಟಿಂಗ್ ಮಧ್ಯೆ ಇರುವ ಗ್ಯಾಪ್ ದಿನಗಳಲ್ಲಿ ಈ ಸಲಾರ್ ಚಿತ್ರಕ್ಕೆ ಡೇಟ್ಸ್ ಕೊಟ್ಟು ಶೂಟಿಂಗ್ ಮುಗಿಸಿದೆ. ಈಗ ಸಿನಿಮಾ ಮುಗಿದು ಇನ್ನೇನು ಪ್ರೇಕ್ಷಕರ ಮುಂದೆ ಬರಲಿದೆ' ಎಲ್ಲವೂ ಅಂದುಕೊಂಡಂತೆ ತುಂಬಾ ಶಿಸ್ತುಬದ್ಧವಾಗಿ ನಡೆದಿದೆ. ಪ್ರೇಕ್ಷಕರಿಗೆ ಈ ಸಿನಿಮಾ ಖಂಡಿತ ಇಷ್ಟವಾಗಲಿದೆ ಎಂಬ ಭರವಸೆ ನನ್ನದು' ಎಂದಿದ್ದಾರೆ ನಟ ಪ್ರಭಾಸ್.