ಮಾಸ್ಟರ್ ಸಿನಿಮಾ ಟೀಸರ್ ಭಾರತದ ಯೂಟ್ಯೂಬ್‌ನಲ್ಲಿ ಮೋಸ್ಟ್ ಲೈಕ್ಡ್ ಟೀಸರ್ ಆಗಿ ಮೂಡಿ ಬಂದಿದೆ. ನವೆಂಬರ್ 14ರಂದು ದಳಪತಿ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಟೀಸರ್ ರಿಲೀಸ್ ಆಗಿತ್ತು.

ಆಗಿನಿಂದಲೂ ಸಿನಿಮಾ ಟೀಸರ್ ವೈರಲ್ ಆಗಿದ್ದು, ಟ್ರೆಂಡಿಂಗ್‌ನಲ್ಲಿದೆ. ಟೀಸರ್‌ಗೆ ಮೆಚ್ಚುಗೆ ಮತ್ತು ಟೀಕೆಯೂ ವ್ಯಕ್ತವಾಗುತ್ತಿದೆ. ಇದೀಗ ಮಾಸ್ಟರ್ ಸಿನಿಮಾ ನಿರ್ಮಾಪಕರು ಎಕ್ಸ್‌ಬಿ ಕ್ರಿಯೇಷನ್ಸ್ ಮಾಸ್ಟರ್ ಹೊಸ ಮೈಲುಗಲ್ಲು ತಲುಪಿರುವುದನ್ನು ತಿಳಿಸಿದ್ದಾರೆ.

ಬಾಲಿವುಡ್‌ ಬಾದ್‌ಶಾ ಪತ್ನಿಯೂ ಡ್ರಗ್ಸ್ ಅಡಿಕ್ಟ್..! ಮಾದಕ ವ್ಯಸನಿಗಳಾಗಿದ್ದ ಟಾಪ್ ಸೆಲೆಬ್ರೆಟಿಗಳು!

ಸದ್ಯ ಮಾಸ್ಟರ್ 16 ಗಂಟೆಯಲ್ಲಿ 1.6 ಮಿಲಿಯನ್ ಲೈಕ್ಸ್ ಪಡೆಯುವ ಮೂಲಕ ಮೋಸ್ಟ್ ಲೈಕ್ಡ್ ಟೀಸರ್ ಆಗಿ ಮೂಡಿ ಬಂದಿದೆ. ಗುಡ್ ಮಾರ್ನಿಂಗ್ ನನ್ಬ, 16 ಗಂಟೆ 16 ಮಿಲಿಯನ್ ವ್ಯೂಸ್ 1.6 ಲೈಕ್ಸ್ ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಅತ್ಯಧಿಕ ಲೈಕ್ ಪಡೆದ ಟೀಸರ್ ಎಂದು ಚಿತ್ರತಂಡ ಟ್ವೀಟ್ ಮಾಡಿದ್ದಾರೆ.

ಇದೀಗ ಚಿತ್ರಮಂದಿರಗಳು ತೆರೆಯಲಾರಂಭಿಸಿದ್ದು, ಶನಿವಾರ ಟೀಸರ್ ರಿಲೀಸ್ ಆಗಿದೆ. ನಟ ವಿಜಯ್ ಟ್ವಿಟರ್ ಮೂಲಕ ಟೀಸರ್ ಲಿಂಕ್ ಶೇರ್ ಮಾಡಿದ್ದರು. ಮಾಸ್ಟರ್ ಟೀಸರ್ ಎಂದು ಬರೆದಿದ್ದರು.

ಧರಂಶಾಲಾದಲ್ಲಿ ಸೈಫೀನಾ..! ನೋ ಫೋಟೋ ಎಂದ ಪುಟ್ಟ ತೈಮೂರ್..!

ಶನಿವಾರದಿಂದಲೂ ಮಾಸ್ಟರ್ ಟೀಸರ್ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ. ಸಿನಿಮಾದಲ್ಲಿ ವಿಜಯ್ ಕಾಲೇಜು ಪ್ರೊಫೆಸರ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ವಿಜಯ್ ಸೇತುತಿ ವಿಲನ್ ಆಗಿ ಕಾಣಿಸಿಕೊಂಡಿರೋದು ಇನ್ನಷ್ಟು ವಿಶೇಷ. ಸಿನಿಮಾ ಎಪ್ರಿಲ್‌ನಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾಗಿದೆ.