ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಪುತ್ರ ತೈಮೂರ್ ಸದ್ಯ ವೈರಲ್ ಆಗಿದ್ದಾನೆ. ಧರಂಶಾಲಾಗೆ ಭೇಟಿ ಕೊಟ್ಟ ಸಂದರ್ಭ ಫೋಟೋ ತೆಗೀಬೇಡಿ ಎಂದಿರುವ ಪುಟ್ಟ ಹುಡುಗ ತೈಮೂರ್ ವಿಡಿಯೋ ವೈರಲ್ ಆಗಿದೆ

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮಗ ತೈಮೂರ್ ವಿಡಿಯೋ ಮೂಲಕ ಟ್ರೆಂಡ್ ಆಗಿದ್ದಾನೆ. ಧರಂಶಾಲಾದಲ್ಲಿ ತೈಮೂರ್ ವಿಡಿಯೋ ಇಂಟರ್‌ನೆಟ್‌ನಲ್ಲಿ ಹರಿದಾಡ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರೀನಾ ಕಳೆದ ವಾರ ಹಿಮಾಚಲ ಪ್ರದೇಶಕ್ಕೆ ಬಂದಿದ್ದರು. ಪತಿ ಸೈಫ್ ಜೊತೆ ಧರಂಶಾಲಾದಲ್ಲಿ ದೀಪಾವಳಿ ಆಚರಿಸಿದ್ದಾರೆ. ಸೈಫ್ ಅರ್ಜುನ್ ಜೊತೆ ಅಲ್ಲಿಯೇ ಭೂತ್ ಪೊಲೀಸ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.

ಶಾಹಿದ್‌ ಕಪೂರ್‌ಗಾಗಿ ಬಾಬಿ ಡಿಯೊಲ್‌ ಕೆರಿಯರ್‌ ಹಾಳು ಮಾಡಿದ್ರಾ ಕರೀನಾ?

ಮಲೈಕಾ, ಅರ್ಜುನ್, ಸೈಫ್, ಕರೀನಾ, ತೈಮೂರ್ ದೀಪಾವಳಿ ಆಚರಿಸಿದ್ದಾರೆ. ತನ್ನ ಮತ್ತು ತನ್ನ ಪೋಷಕರ ಫೋಟೋ ತೆಗೆಯೋದನ್ನು ನೋಡಿದ ತೈಮೂರ್ ನಫ ಫೋಟೋ ಎಂದು ಕಿರುಚಿದ್ದಾನೆ.

View post on Instagram

ತೈಮೂರ್‌ನ ಕೈ ಹಿಡಿದುಕೊಂಡು ಕರೀನಾ ನಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಸದ್ಯ ಇನ್‌ಸ್ಟಾಗ್ರಾಂ ಸೇರಿ ಇತರ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ನಲ್ಲಿ ವೈರಲ್ ಆಗಿದೆ. ಮಲೈಕಾ ರೋರಾ ಧರಂಶಾಲಾ ದಿನಗಳ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಧರಂಶಾಲಾದಲ್ಲಿ ಫ್ಯಾಮಿಲಿ ಜೊತೆ ಸಿಂಪಲ್ ಆಗಿ ಹಬ್ಬ ಆಚರಿಸಿದ್ದಾರೆ ಕರೀನಾ 

View post on Instagram