KGF 2; ಬಿಡುಗಡೆಯಾಗಿ ಎರಡೇ ದಿನಕ್ಕೆ ಹಿಂದಿಯಲ್ಲಿ 100 ಕೋಟಿ ಕ್ಲಬ್ ಸೇರಿದ ಯಶ್ ಸಿನಿಮಾ

ಕೆಜಿಎಫ್-2 ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಲಿವುಡ್ ನಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದೆ.

Yash starrer kgf 2 cross 100 crore club in Hindi

ಬಾಲಿವುಡ್ ನಲ್ಲಿ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಸುನಾಮಿ ಎಬ್ಬಸಿದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ. ಕೆಜಿಎಫ್-2 ಬಿಡುಗಡೆಯಾಗಿ ಎರಡೇ ದಿನಕ್ಕೆ ಬಾಲಿವುಡ್ ನಲ್ಲಿ 100 ಕೋಟಿ ಕ್ಲಬ್(KGF2 Cross 100 Crore Club) ಸೇರುವ ಮೂಲಕ ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದೆ. ಬಾಲಿವುಡ್ ನ ಘಟಾನುಘಟಿ ಸ್ಟಾರ್ ಗಳ ದಾಖಲೆ ಕಲೆಕ್ಷನ್ ಯಶ್ ನಟನೆಯ ಕೆಜಿಎಫ್-2 ಸಿನಿಮಾ ಧೂಳಿಪಟ ಮಾಡಿದೆ. ಇದೀಗ ಚಿತ್ರದ ಎರಡನೇ ದಿನದ ಕಲೆಕ್ಷನ್ ವರದಿ ಬಹಿರಂಗವಾಗಿದ್ದು ಎರಡನೇ ದಿನವೂ ಭರ್ಜರಿ ಕಮಾಯಿ ಮಾಡಿದೆ.

ಕೆಜಿಎಫ್-2 ಹಿಂದಿ ಭಾಗದ ಕಲೆಕ್ಷನ್ ವರದಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದೆ. ಈ ಬಗ್ಗೆ ತರಣ್ ಆದರ್ಶ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಕೆಜಿಎಫ್-2 2ನೇ ದಿನ 46.79 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡು ದಿನಕ್ಕೆ ಹಿಂದಿಯಲ್ಲಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎಂದು ತರಣ್ ಆದರ್ಶ್ ಹೇಳಿದ್ದಾರೆ.

'ಕೆಜಿಎಫ್-2 ಹಿಂದಿಯಲ್ಲಿ ಸುನಾಮಿ ಎಬ್ಬಿಸಿದೆ. ಎರಡನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಹುಬಲಿ-2 ಮತ್ತು ದಂಗಲ್ ದಾಖಲೆಯನ್ನು ಮುರಿದಿದೆ. ಮೊದಲ ವಾರಾಂತ್ಯದಲ್ಲಿ 185 ಕೋಟಿ ರೂಪಾಯಿ ನಿರೀಕ್ಷೆ ಮಾಡಲಾಗಿದೆ. ಮೊದಲ ದಿನ 53.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಶುಕ್ರವಾರ 46.79 ಕೋಟಿ ರೂಪಾಯಿ ಬಾಚಿಕೊಂಡಿದೆ. ಒಟ್ಟು 100.47 ಕೋಟಿ ಕಲೆಕ್ಷನ್ ಮಾಡಿದೆ' ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್2 ಸಿನಿಮಾದ್ದೇ ಸದ್ದು. ಟ್ವಿಟ್ಟರ್ ನಲ್ಲಿ ಯಶ್ ಮತ್ತು ಕೆಜಿಎಫ್2 ಹೆಸರು ಟ್ರೆಂಡಿಂಗ್ ನಲ್ಲಿದೆ. ಅಭಿಮಾನಿಗಳು ಯಶ್ ಬಾಸ್ ಎಂದು ಕರೆದು ಸಂಭ್ರಮಿಸುತ್ತಿದ್ದಾರೆ. #KGFChpater2, #Yash, KGF3 ಹೆಸರುಗಳು ಟ್ವಿಟ್ಟರ್ ನಲ್ಲಿ ರಾರಾಜಿಸುತ್ತಿವೆ. ಈಗಾಗಲೇ 100 ಕೋಟಿ ಕ್ಲಬ್ ದಾಟಿ ಮುನ್ನುಗ್ಗುತ್ತಿರುವ ಕೆಜಿಎಫ್-2 ಮೊದಲ ವಾರಾಂತ್ಯದಲ್ಲಿ ಎಷ್ಟು ಕೋಟಿ ಬಾಚಿಕೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಇನ್ನು ಭಾರತದಾದ್ಯಂತ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವ ವರದಿ ಇನ್ನು ಬಹಿರಂಗವಾಗಬೇಕಿದೆ.

ಇನ್ನು ಕೆಜಿಎಫ್-2 ಸಿನಿಮಾ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 134.5 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಹೃತಿಕ್ ರೋಷನ್ ನಟನೆಯ ವಾರ್, ಆಮೀರ್ ನಟನೆಯ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿ ಕೆಜಿಎಫ್-2 ಹೊಸ ದಾಖಲೆ ಬರೆದಿದೆ. ಅಂದಹಾಗೆ ಯಶ್ ನಟನೆಯ ಕೆಜಿಎಫ್-2 ಮೊದಲ ದಿನ ಹಿಂದಿಯಲ್ಲಿ ಬರೋಬ್ಬರಿ 53.95 ಕೋಟಿ ರೂ. ಗಳಿಕೆ ಮಾಡಿದೆ.

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios