ಬಾಲಿವುಡ್ ಮೇಲೆ ಸ್ಯಾಂಡಲ್ ವುಡ್ ಎಸೆದ ಅಣುಬಾಂಬ್; KGF 2 ಬಗ್ಗೆ RGV ಪ್ರತಿಕ್ರಿಯೆ
ತೆಲುಗಿನ ಖ್ಯಾತ ನಿರ್ದೇಶಕ, ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ರಾಮ್ ಗೋಪಾಲ್ ವರ್ಮಾ(Ram Gopal Varma) ಕೆಜಿಎಫ್-2 ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಬಾಲಿವುಡ್ ಮೇಲೆ ಸ್ಯಾಂಡಲ್ ವುಡ್ ಎಸೆದ ಅಣುಬಾಂಬ್ ಆಗಿದೆ ಎಂದು ಆರ್ ಜಿ ವಿ ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಹೀರೋ, ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ವಿಶ್ವದಾದ್ಯಂತ ಕೆಜಿಎಫ್-2 ಸಿನಿಮಾದೇ ಸದ್ದು. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಕೆಜಿಎಫ್2 ಏಪ್ರಿಲ್ 14ರಂದು ಅದ್ದೂರಿಯಾಗಿ ತೆರೆಗೆ ಬಂದಿದ್ದು ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳು ಭರ್ಜರಿ ಸ್ವಾಗತ ಮಾಡಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಕೆಜಿಎಫ್-2 ಮೊದಲ ದಿನ ಬಾಕ್ಸ್ ಆಫೀಸ್ ನಲ್ಲ ದಾಖಲೆಯ ಕಲೆಕ್ಷನ್ ಮಾಡಿದೆ (KGF 2 box office collection). ಅಭಿಮಾನಿಗಳು ಮಾತ್ರವಲ್ಲದೆ ಬೇರ ಬೇರೆ ಭಾಷೆಯ ಸಿನಿ ಗಣ್ಯರು ಸಹ ಹಾಡಿಹೊಗಳಿದ್ದಾರೆ.
ಕನ್ನಡದ ಸಿನಿಮಾವೊಂದು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿರುವ ರೀತಿ ನೋಡಿ ಅನೇಕರು ಅಚ್ಚರಿ ಪಟ್ಟಿದ್ದಾರೆ. ಕನ್ನಡ ಸಿನಿಮಾರಂಗ ಬೆಳೆದ ರೀತಿಯನ್ನು ಅನೇಕ ಸೆಲೆಬ್ರಿಟಿಗಳು ಕೊಂಡಾಡಿದ್ದಾರೆ. ಇದೀಗ ತೆಲುಗಿನ ಖ್ಯಾತ ನಿರ್ದೇಶಕ, ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿ ಗಳಿಸಿರುವ ರಾಮ್ ಗೋಪಾಲ್ ವರ್ಮಾ(Ram Gopal Varma) ಸಹ ಸ್ಯಾಂಡಲ್ ವುಡ್ ಅನ್ನು ಹಾಡಿಹೊಗಳಿದ್ದಾರೆ. ಕನ್ನಡದ ನಟ ರಾಕಿ ಭಾಯ್ ಯಶ್ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇದನ್ನು ರಾಮ್ ಗೋಪಾಲ್ ವರ್ಮಾ, 'ವಿಲನ್ ಗಳಿಗೆ ಗುಂಡಿಕ್ಕಲು ರಾಕಿ ಭಾಯ್ ಹೇಗೆ ಮುಂಬೈಗೆ ಬರುತ್ತಾರೋ ಹಾಗೆ ಎಲ್ಲಾ ಬಾಲಿವುಡ್ ಸ್ಟಾರ್ ಗಳ ಓಪನಿಂಗ್ ಕಲೆಕ್ಷನ್ ಮೇಲೆ ಗುಂಡಿಕ್ಕಿದ್ದಾರೆ. ಇದರ ಫೈನಲ್ ಕಲೆಕ್ಷನ್ ಬಾಲಿವುಡ್ ಮೇಲೆ ಸ್ಯಾಂಡಲ್ ವುಡ್ ಎಸೆದ ಅಣುಬಾಂಬ್ ಆಗಿರುತ್ತದೆ' ಎಂದು ಹೇಳಿದ್ದಾರೆ.
'ಪ್ರಶಾಂತ್ ನೀಲ್ ಅವರ ಕೆಜಿಎಪ್-2 ಕೇವಲ ಗ್ಯಾಂಗ್ ಸ್ಟರ್ ಸಿನಿಮಾವಲ್ಲ. ಇದು ಬಾಲಿವುಡ್ ಚಿತ್ರರಂಗಕ್ಕೆ ಹಾರರ್ ಸಿನಿಮಾವಾಗಿದೆ. ಈ ಸಿನಿಮಾದ ಯಶಸ್ಸು ಬಾಲಿವುಡ್ ಮಂದಿಗೆ ಅನೇಕ ವರ್ಷಗಳ ಕಾಲ ದುಃಸ್ವಪ್ನವಾಗಿ ಕಾಡಲಿದೆ' ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
KGF 2; ಹೃತಿಕ್, ಆಮೀರ್ ಸಿನಿಮಾಗಳನ್ನು ಹಿಂದಿಕ್ಕಿ ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆದ ಯಶ್
ಇನ್ನು ಕೆಜಿಎಫ್-2 ಸಿನಿಮಾ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 134.5 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಇದು ಭಾರತದ ಬಾಕ್ಸ್ ಆಫೀಸ್ ಗಳಿಕೆಯಲ್ಲೇ ಅತೀ ದೊಡ್ಡ ಮಟ್ಟದ ಗಳಿಕೆಯಾಗಿದೆ. ಮೂಲಕ ಎಲ್ಲಾ ಸಿನಿಮಾಗಳ ಕಲೆಕ್ಷನ್ ಅನ್ನು ಧೂಳಿಪಟ ಮಾಡಿದೆ. ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಹೃತಿಕ್ ರೋಷನ್ ನಟನೆಯ ವಾರ್, ಆಮೀರ್ ನಟನೆಯ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿ ಕೆಜಿಎಫ್-2 ಹೊಸ ದಾಖಲೆ ಬರೆದಿದೆ. ಅಂದಹಾಗೆ ಯಶ್ ನಟನೆಯ ಕೆಜಿಎಫ್-2 ಮೊದಲ ದಿನ ಹಿಂದಿಯಲ್ಲಿ ಬರೋಬ್ಬರಿ 53.95 ಕೋಟಿ ರೂ. ಗಳಿಕೆ ಮಾಡಿದೆ.
KGF 2: ಜೈಹೋ ರಾಕಿಭಾಯ್ ಎಂದ ಫ್ಯಾನ್ಸ್, ವಿಮರ್ಶಕರಿಂದ 4 ಸ್ಟಾರ್ ರೇಟಿಂಗ್
ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 3ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.