Asianet Suvarna News Asianet Suvarna News

100 ಕೋಟಿ ದಾಟಿದ ವಿಜಯ್ ಸಂಭಾವನೆ; 'ವಾರಿಸು' ಚಿತ್ರಕ್ಕೆ ದಾಖಲೆ ಸಂಭಾವನೆ ಪಡೆದ ದಳಪತಿ

ದಳಪತಿ ವಿಜಯ್ ದಾಖಲೆ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ವಾರಿಸು ಸಿನಿಮಾಗೆ ವಿಜಯ್ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. 

Thalapathy Vijay Receives Record Salary for Varisu sgk
Author
First Published Dec 3, 2022, 12:40 PM IST

ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಭಾರತೀಯ ಸಿನಿಮಾರಂಗದ ಖ್ಯಾತ ನಟರಲ್ಲಿ ಒಬ್ಬರು. ದಕ್ಷಿಣ ಭಾರತದ ಈ ಸ್ಟಾರ್ ಖ್ಯಾತಿ ಜೊತೆಗೆ ಸಂಭಾವನೆ ವಿಚಾರದಲ್ಲೂ ಟಾಪ್ ಒನ್. ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟರಲ್ಲಿ ವಿಜಯ್ ದಳಪತಿ ಕೂಡ ಒಬ್ಬರು. ವಿಜಯ್ ಸಂಭಾವನೆ ಯಾವಾಗಲೂ ಕೋಟಿ ಕೋಟಿಗಳಲ್ಲೇ ಇರುತ್ತದೆ. ಅಂದಹಾಗೆ ಈ ಹಿಂದೆಯೇ ವಿಜಯ್ 90 ರಿಂದ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದೀಗ ವಿಜಯ್ ವಾರಿಸು ಸಿನಿಮಾಗೆ ದಾಖಲೆ ಸಂಭಾವನೆ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ದಳಪತಿ ವಿಜಯ್ ಸದ್ಯ ವಾರಿಸು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ. 

ಸದ್ಯ ವಿಜಯ್ ವಾರಿಸು ಸಿನಿಮಾಗೆ ಪಡೆದ ಸಂಭಾವನೆ ವಿಚಾರ ಸದ್ದು ಮಾಡುತ್ತಿದೆ. ಹೌದು ದಳಪತಿ ವಿಜಯ್ ವಾರಿಸು ಸಿನಿಮಾಗೆ ಬರೋಬ್ಬರಿ 105 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 105 ಕೋಟಿ  ರೂಪಾಯಿಲ್ಲಿ ನಿರ್ಮಾಪಕರು GST ಮೊತ್ತವನ್ನು ಪಾವತಿಸುತ್ತಾರೆ.  ಇದು ಸುಮಾರು 19 ಕೋಟಿ ರೂಪಾಯಿ ಆಗಲಿದೆ. ಈ ಎಲ್ಲಾ ವ್ಯವಹಾರಗಳು ಬ್ಯಾಂಕ್ ಮೂಲಕ ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಅಂದಹಾಗೆ ವಾರಿಸು ಸಿನಿಮಾದ ಹೀರೋ ಮಾತ್ರವಲ್ಲದೇ ಉಳಿದ ಪಾತ್ರವರ್ಗ ಮತ್ತು ನಿರ್ದೇಶಕರು ಕೂಡ ಉತ್ತಮ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 

ನಿಯಮ ಉಲ್ಲಂಘನೆ: ಕಾನೂನು ತೊಂದರೆಗೆ ಸಿಲುಕಿದ ದಳಪತಿ ವಿಜಯ್

ವಾರಿಸು ಸಿನಿಮಾದ ನಿರ್ದೇಶಕ ವಂಶಿ ಪೈಡಿಪಲ್ಲಿ 15 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಸಂಗೀತ ನಿರ್ದೇಶಕ ಥಮನ್ ಅವರಿಗೂ ಉತ್ತಮ ಸಂಭಾವನೆ ಸಿಕ್ಕಿದೆಯಂತೆ. ಅಲ್ಲದೇ ನಾಯಕಿ ರಶ್ಮಿಕಾ ಮಂದಣ್ಣ ಕೂಡ ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅಂದಹಾಗೆ ವಾರಿಸು ಸಿನಿಮಾ 250 ಕೋಟಿ ಬಜೆಟ್‌ನಲ್ಲಿ ತಯಾರಿಗುತ್ತಿದೆ. ಇದರಲ್ಲಿ ಕಲಾವಿದರ ಸಂಭಾವನೆಯೇ ಹೆಚ್ಚಾಗಿದೆ. ವಾರಿಸು ಚಿತ್ರ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಸಾರಥ್ಯದಲ್ಲಿ ಮೂಡಿಬರುತ್ತಿದೆ.  

ದಳಪತಿ ವಿಜಯ್ ತೋಳಲ್ಲಿ ಪುಟ್ಟ ಕಂದ; ವೈರಲ್ ಫೋಟೋದಲ್ಲಿರುವ ಮಗು ಯಾರದ್ದು?

ತೆಲುಗು ಸ್ಟಾರ್‌ಗಳಾದ ಬಾಲಕೃಷ್ಣ 12ಕೋಟಿ ಸಂಭಾವನೆ ಪಡೆಯುತ್ತಾರಂತೆ. ವೀರಾ ಸಿಂಹ ರೆಡ್ಡಿ ಸಿನಿಮಾಗಾಗಿ ಬಾಲಯ್ಯ 12 ಪಡೆದರೆ, ಮೆಗಾಸ್ಟಾರ್ ಚಿರಂಜೀವಿ ವೀರಯ್ಯ ಸಿನಿಮಾಗೆ ಬರೋಬ್ಬರಿ 35 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ವಿಶೇಷ ಎಂದರೆ ಈ ಎಲ್ಲಾ ಸಿನಿಮಾಗಳು ಮುಂದಿನ ವರ್ಷ ಸಂಕ್ರಾಂತಿಗೆ ಬರಲು ಸಜ್ಜಾಗಿವೆ. ಕೋಟಿ ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾಗಳು ಭರ್ಜರಿ ಕಮಾಯಿ ಮಾಡುತ್ತಾ, ನಿರ್ಮಾಪಕರಿಗೆ ಲಾಭ ತಂದು ಕೊಡುತ್ತಾ ಎಂದು ಕಾದು ನೋಡಬೇಕಿದೆ. 

ದಳಪತಿ ವಿಜಯ್ ಸಿನಿಮಾ ವಿಚಾರಕ್ಕೆ ಬರುವುದಾರೆ ಕೊನೆಯದಾಗಿ ರಿಲೀಸ್ ಆದ ಬೀಸ್ಟ್ ಸಿನಿಮಾ ಹೀನಾಯ ಸೋಲು ಕಂಡಿತ್ತು. ಕನ್ನಡದ ಕೆಜಿಎಫ್2 ರಿಲೀಸ್ ಸಮಯದಲ್ಲೇ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮಾ  ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಯಿತು. ಬಾಕ್ಸ್ ಆಫೀಸ್ ನಲ್ಲೂ ಹೆಚ್ಚು ಕಲೆಕ್ಷನ್ ಮಾಡಿಲ್ಲ. ಹಾಗಾಗಿ ವಿಜಯ್ ವಾರಿಸು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

   

     

Follow Us:
Download App:
  • android
  • ios