ದಳಪತಿ ವಿಜಯ್ ತೋಳಲ್ಲಿ ಪುಟ್ಟ ಕಂದ; ವೈರಲ್ ಫೋಟೋದಲ್ಲಿರುವ ಮಗು ಯಾರದ್ದು?

ದಳಪತಿ ವಿಜಯ್ ತೋಳಲ್ಲಿ ಪುಟ್ಟ ಕಂದ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Thalapathy Vijay holding baby on the sets of Varisu is going viral on social media sgk

ತಮಿಳು ಸ್ಟಾರ್ ನಟ ದಳಪತಿ ವಿಜಯ್ ಸದ್ಯ ಬಹುನಿರೀಕ್ಷೆಯ ವರಿಸು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬೀಸ್ಟ್ ಹೀನಾಯ ಸೋಲಿನ ಬಳಿಕ ವಿಜಯ್ ವರಿಸು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೆ ಚಿತ್ರದ ಒಂದಿಷ್ಟು ಮೇಕಿಂಗ್ ಫೋಟೋಗಳು ವೈರಲ್ ಆಗಿತ್ತು. ಇದೀಗ ವಿಜಯ್ ಅವರ ಮತ್ತೊಂದು ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ನಟ ವಿಜಯ್ ತನ್ನ ತೋಳಿನಲ್ಲಿ ಪುಟ್ಟಕಂದನನ್ನು ಎತ್ತಿಕೊಂಡಿದ್ದಾರೆ. ವಿಜಯ್ ತೋಳಲ್ಲಿ ಮುದ್ದು ಮಗುವಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. 

ವರಿಸು ಸಿನಿಮಾ ಸೆಟ್‌ಗೆ ಆಗಮಿಸಿದ ವಿಶೇಷ ಅತಿಥಿ ಅವರು. ಆ ವಿಶೇಷ ಅತಿಥಿ ಜೊತೆ ವಿಜಯ್ ಕೆಲವು ಸಮಯ ಕಾಲ ಕಳೆದಿದ್ದಾರೆ. ಅಂದಹಾಗೆ ಪುಟ್ಟ ಮಗು ಮತ್ಯಾರು ಅಲ್ಲ ಖ್ಯಾತ ನಿರ್ಮಾಪಕ ದಿಲ್ ರಾಜು ಅವರ ಮಗು. ವಿಜಯ್ ತೋಳಲ್ಲಿ ದಿಲ್ ರಾಜು ಮಗುವಿರುವ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ಪುಟ್ಟ ಮಗುವಿನೆ ಜೊತೆಗಿನ ವಿಜಯ್ ಬಾಂಧವ್ಯ ಗಮನ ಸೆಳೆಯುತ್ತಿದೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬರುತ್ತಿದೆ. ಅನೇಕರು ಹಾರ್ಟ್ ಇಮೇಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. 

ಶಾರುಖ್‌ಗೆ ರುಚಿಯಾದ ಅಡುಗೆ ಕಳುಹಿಸಿದ ದಳಪತಿ; ಚಿಕನ್ 65 ರೆಸಿಪಿ ಕಲಿಬೇಕೆಂದ ಕಿಂಗ್ ಖಾನ್

ಇನ್ನು ವರಿಸು ಸಿನಿಮಾದ ಬಗ್ಗೆ ಹೇಳುವುದಾದರೆ ಈ ಸಿನಿಮಾಗೆ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ಅವರಿಗೆ ನಾಯಕಿಯಾಗಿ ರಶ್ಮಿಕಾಮಂದಮ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ದಳಪತಿ ವಿಜಯ್ ಜೊತೆ ನಟಿಸುತ್ತಿದ್ದಾರೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ಪ್ರಭು, ಶರತ್ ಕುಮಾರ್, ಪ್ರಕಾಶ್ ರಾಜ್, ಶ್ರೀಕಾಂತ್, ಯೋಗಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವಿದೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರುತ್ತಿದೆ.

ಮತ್ತೆ ಒಂದಾದ ದಳಪತಿ ವಿಜಯ್-ತ್ರಿಷಾ; 14 ವರ್ಷದ ಬಳಿಕ ಒಟ್ಟಿಗೆ ಬರ್ತಿದೆ ಈ ಸೂಪರ್ ಹಿಟ್ ಜೋಡಿ

ವಿಜಯ್ ನಟನೆಯ ಬೀಸ್ಟ್ ಸಿನಿಮಾ ಹಿನಾಯ ಸೋಲು ಕಂಡಿದೆ. ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ವಿಫಲವಾಗಿದ್ದ ಬೀಸ್ಟ್ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿಲ್ಲ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ -2 ರಿಲೀಸ್ ಸಮಯದಲ್ಲಿ ತೆರೆಗೆ ಬಂದ ಬೀಸ್ಟ್ ನಿರೀಕ್ಷೆಯ ಗೆಲುವು ದಾಖಲಿಸಲು ಸೋಲು ಕಂಡಿತ್ತು.         

Latest Videos
Follow Us:
Download App:
  • android
  • ios