Asianet Suvarna News Asianet Suvarna News

ರಶ್ಮಿಕಾಗೆ ಬುದ್ದಿ ಹೇಳಿದ ತೆಲುಗು ಮಂದಿ... ಅಲ್ಲೇನು ಮಾಡಿದ್ರು ಕಿರಿಕ್ ಬೆಡಗಿ

ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಬಗ್ಗೆ ತೆಲುಗು ಸಿನಿಮಾ ರಂಗದ ಬರಹಗಾರ ಖ್ಯಾತ ಸಿನಿಮಾ ಪತ್ರಕರ್ತ, ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ ಕೂಡ ರಶ್ಮಿಕಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. 

Telugu film industry writer, famous film journalist film critic Thota Prasad also expressed displeasure with Rashmika akb
Author
First Published Dec 2, 2022, 9:17 PM IST

ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಬಗ್ಗೆ ಇತ್ತೀಚೆಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಸೇರಿದಂತೆ ಜನಸಾಮಾನ್ಯರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಕನ್ನಡದ ಬಗೆಗಿನ ರಶ್ಮಿಕಾ ತಾತ್ಸಾರ ಹಾಗೂ ಬೆಳೆದು ಬಂದ ಹಾದಿ ಮರೆತರೆಂಬ ಆರೋಪ. ಈ ಮಧ್ಯೆ ತೆಲುಗು ಸಿನಿಮಾ ರಂಗದ ಬರಹಗಾರ ಖ್ಯಾತ ಸಿನಿಮಾ ಪತ್ರಕರ್ತ, ಸಿನಿಮಾ ವಿಮರ್ಶಕ ತೋಟಾ ಪ್ರಸಾದ್ ಕೂಡ ರಶ್ಮಿಕಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. 

ತೆಲುಗಿನ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತೋಟಾ ಪ್ರಸಾದ್(Tota prasad), ಬೇಡಿಕೆ ಇರುವ ಕಲಾವಿದರನ್ನು ಯಾವುದೇ ಸಿನಿಮಾ ಉದ್ಯಮದಲ್ಲಿ ಬ್ಯಾನ್ ಮಾಡಲು ಆಗುವುದಿಲ್ಲ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ, ಕನ್ನಡದವರನ್ನು ಮಾತ್ರವಲ್ಲ ತೆಲುಗಿನವರನ್ನು ಕೂಡ ನಿರ್ಲಕ್ಷಿಸಿದ್ದಾರೆ. ಚಲೋ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ, ಆ ಚಿತ್ರದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆ ಚಿತ್ರದ ಹಾಗೂ ತಾವು ನಟಿಸಿದ ಮೊದಲ ತೆಲುಗು ಸಿನಿಮಾದ ಹೀರೋ ನಾಗಶೌರ್ಯ (Naga shourya) ಅವರನ್ನು ಕಡೆಗಣಿಸಿದ್ದರು. ಕೇವಲ ಚಲೋ (Chalo) ಸಿನಿಮಾದ ನಿರ್ದೇಶಕರ ಹೆಸರನ್ನು ಮಾತ್ರ ಉಲ್ಲೇಖಿಸಿ ರಶ್ಮಿಕಾ ಟ್ವಿಟ್ ಮಾಡಿದ್ದರು. 

ನ್ಯಾಷನಲ್ ಕ್ರಶ್‌ಗೆ ಹಿನ್ನೆಡೆ: 'ರಶ್ಮಿಕಾ'ರನ್ನು ವಜಾ ಮಾಡಿದ ಆಭರಣ ಕಂಪನಿ

ಯಾರೇ ಆದರೂ ಎಂದಿಗೂ ತಮಗೆ ಅವಕಾಶ ನೀಡಿ ಬೆಳೆಸಿದವರನ್ನು ಮರೆಯಬಾರದು, ಅವಮಾನಿಸಬಾರದು, ಚಿತ್ರರಂಗದಲ್ಲಿ ಯಶಸ್ಸು ಎಂಬುದು ಶಾಶ್ವತವಲ್ಲ. ಅದರಲ್ಲೂ ನಾಯಕಿಯರಿಗೆ 30 ವರ್ಷದ ನಂತರ ಅಥವಾ ವಿವಾಹದ(Marriage) ನಂತರ ಬೇಡಿಕೆ ಕುಸಿಯುತ್ತದೆ. ನಂತರ ಅವರು ಪೋಷಕ ಪಾತ್ರಕ್ಕೆ ಮಾತ್ರ ಸೂಟ್ ಆಗುತ್ತಾರೆ. ಅವರನ್ನು ನಾಯಕಿಯರಾಗಿ ಮುಂದುವರಿಸುವುದು ತೀರಾ ವಿರಳ. ಆದರಿಂದ ತಮಗೆ ಜನಪ್ರಿಯತೆ (popularity) ಬಂದಿರುವಂತಹ ಸಮಯದಲ್ಲಿ ಆದನ್ನು ಜೋಪಾನವಾಗಿ ಕಾಯಬೇಕು. ಒಬ್ಬರ ಬಗ್ಗೆ ವೈಯಕ್ತಿಕವಾಗಿ ಅಸಮಾಧಾನ ಇರುವುದು ವೈಯಕ್ತಿಕ ವಿಚಾರ. ಆದರೆ ಮಾಧ್ಯಮಗಳ ಮುಂದೆ ಮಾತನಾಡುವಾಗ ಇವುಗಳನ್ನೆಲ್ಲ ತೋರಿಸುವಂತಿಲ್ಲ. ಸೆಲೆಬ್ರಿಟಿ ಎನಿಸಿರುವ ತನ್ನನ್ನು ಕೋಟ್ಯಾಂತರ ಜನ ನೋಡುತ್ತಾರೆ ಎಂಬುದರ ಅರಿವಿರಬೇಕು ಎಂದು ತೋಟಾ ಪ್ರಸಾದ್ ಅವರು ಕಿರಿಕ್ ಬೆಡಗಿ ರಶ್ಮಿಕಾಗೆ (Rashmika Mandanna) ಕಿವಿಮಾತು ಹೇಳಿದ್ದಾರೆ.

ಮಹೇಶ್ ಬಾಬು ಜೊತೆ ಪೂಜಾ ಹೆಗ್ಡೆ, ಶ್ರೀಲೀಲಾ: ಸೊಂಟ ಬಳುಕಿಸಲು ರಶ್ಮಿಕಾ ಸಜ್ಜು

ಇತ್ತ ಕನ್ನಡ ಚಿತ್ರರಂಗದಲ್ಲಿ ರಶ್ಮಿಕಾ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅತ್ತ ತೆಲುಗಿ ಮಾಧ್ಯಮಗಳು ಕೂಡ ರಶ್ಮಿಕಾ ಬಗ್ಗೆ ಚರ್ಚೆ ನಡೆಸುತ್ತಿವೆ. ಇತ್ತೀಚೆಗೆ ರಶ್ಮಿಕಾ ಹಿಂದಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಸಿನಿಮಾರಂಗಕ್ಕೆ ಬರಲು ಕಾರಣವಾದ ಕನ್ನಡದ ಕಿರಿಕ್ ಪಾರ್ಟಿಯ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಅವಮಾನ ಮಾಡಿದ್ದರು. ಕೈಗಳಲ್ಲಿ ಸನ್ನೆ ಮಾಡಿ ಒಂದು ಪ್ರೊಡಕ್ಷನ್ ಹೌಸ್ ಮೂಲಕ ಸಿನಿಮಾಗೆ ಬಂದೆ ಎಂದು ಹೇಳಿಕೊಂಡಿದ್ದರು. ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಹೆಸರು ಹೇಳಲು ಇಷ್ಟವಿಲ್ಲದಿದ್ದರೆ, ಕನಿಷ್ಠ ಪ್ರೊಡಕ್ಷನ್ ಹೌಸ್ ಹೆಸರು ಹೇಳಬಹುದಿತ್ತು ಎಂದು ತೋಟಾ ಪ್ರಸಾದ್ ಹೇಳಿದ್ದಾರೆ. 

ರಶ್ಮಿಕಾ ಕನ್ನಡ ವಿಚಾರದಲ್ಲಿ ಮಾಡಿಕೊಂಡಿರುವ ವಿವಾದಗಳು ಒಂದೆರಡಲ್ಲ. ಇದಕ್ಕೆ ಮೊದಲು ಟಿವಿ ಸಂದರ್ಶನದಲ್ಲಿ ಚೆನ್ನಾಗಿ ತಮಿಳು ಮಾತನಾಡಿದ ರಶ್ಮಿಕಾ ನನಗೆ ಕನ್ನಡ ಕಷ್ಟ ಎಂದಿದ್ದರು. ಇದಷ್ಟೇ ಅಲ್ಲದೇ ಇತ್ತೀಚೆಗೆ ಸಲ್ಮಾನ್ ಖಾನ್ (Salman Khan) ಜೊತೆ ಸ್ಟೇಜ್ ಹಂಚಿಕೊಂಡ ರಶ್ಮಿಕಾ ಆತನಿಗೆ ಸ್ವತಃ ಕನ್ನಡದವಳಾಗಿದ್ದು, ತೆಲುಗು ಹೇಳಿಕೊಡುವ ಪ್ರಯತ್ನ ಮಾಡಿದ್ದಳು. ಹೀಗೆ ರಶ್ಮಿಕಾ ಒಂದಾದ ಮೇಲೊಂದರಂತೆ ಮಾಡಿದ ಹಲವು ವಿವಾದಿತ ನಡೆಗಳು ಆಕೆಯ ವಿರುದ್ಧ ಕನ್ನಡಿಗರ ರೋಷ ಉಕ್ಕುವಂತೆ ಮಾಡಿದ್ದವು. 

Follow Us:
Download App:
  • android
  • ios