ತೆಲುಗು ನಟ ಮೋಹನ್ ಬಾಬು ಕುಟುಂಬದ ಬಗ್ಗೆ ಗಾಸಿಪ್ ಹರಡಿದ್ದು, ಮಗಳು ಮಂಚು ಲಕ್ಷ್ಮಿ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಲಕ್ಷ್ಮಿ ಈ ವದಂತಿಯನ್ನು ತಳ್ಳಿಹಾಕಿದ್ದಾರೆ. ಪತಿ ಶ್ರೀನಿವಾಸ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ತಾವು ಅನ್ಯೋನ್ಯವಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆ ನೀಡಿದ್ದು, ಮಗಳು ತಂದೆಯೊಂದಿಗೆ ಇದ್ದಾಳೆ. ಸಿನಿಮಾ ಹಾಗೂ ಹೂಡಿಕೆಗಳಲ್ಲಿ ಲಕ್ಷ್ಮಿ ಸಕ್ರಿಯರಾಗಿದ್ದಾರೆ.

ತೆಲುಗು ನಟ ಮೋಹನ್ ಬಾಬು ಫ್ಯಾಮಿಲಿ ಒಂದಲ್ಲ ಒಂದು ಕಾರಣಕ್ಕೆ ವಿಚಾರದಲ್ಲಿ ಇರುತ್ತದೆ. ಸಿನಿಮಾ ಹೊರತು ಪಡಿಸಿ ಆಸ್ತಿ ವಿಚಾರ, ಅಣ್ಣ ತಮ್ಮ ಜಗಳ ಅಂತಲೇ ಸುದ್ದಿಯಾಗಿರುವುದ. ಕೆಲವು ದಿನಗಳ ಹಿಂದೆ ಕಿರಿ ಮಗ ಮಂಚು ಮಂಜು ಜೊತೆ ದೊಡ್ಡ ಜಗಳ ಮಾಡಿಕೊಂಡು ಆನಂತರ ಮಾಧ್ಯಮಗಳ ಎದುರು ಕ್ಷಮೆ ಕೇಳಿದ್ದರು. ಆಸ್ತಿ ವಿಚಾರಕ್ಕೆ ಅಂತ ಮಕ್ಕಳು ಹೇಳಿದೂ ಇಲ್ಲ ಇಲ್ಲ ಸಣ್ಣ ಮಾತಿನಿಂದ ಅಂತ ಫ್ಯಾಮಿಲಿ ಗುಟ್ಟು ಬಿಟ್ಟು ಕೊಡಲು ರೆಡಿಯಾಗಿ ಇರಲಿಲ್ಲ.ೀ ನಡುವೆ ಪುತ್ರಿ ಮಂಚು ಲಕ್ಷ್ಮಿ ಫ್ಯಾಮಿಲಿ ಡಿವೋರ್ಸ್‌ಗೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಮಗಳು ಕೂಡ ಜೊತೆಯಲ್ಲಿ ಇಲ್ಲ ಅಂತಿದ್ದಾರೆ. ಗಾಸಿಪ್ ನೆಗೆಟಿವ್ ಆಗಿ ಬದಲಾಗುವ ಮುನ್ನ ಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

'ನನ್ನ ಪತಿ ಶ್ರೀನಿವಾಸ್ ವಿದೇಶದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ನಾವು ಬಹಳ ಅನ್ಯೋನ್ಯವಾಗಿ ಇದ್ದೀವಿ ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಸುಳ್ಳು. ನಾವಿಬ್ಬರು ಸಮಾಜದಲ್ಲಿ ಪ್ರಶಾಂತವಾಗಿರುವ ಸ್ವಾತಂತ್ರ್ಯ ಕೊಟ್ಟು ತೆಗೆದುಕೊಳ್ಳುತ್ತೇವೆ. ನ್ಯೂಕ್ಲಿಯರ್ ಫ್ಯಾಮಿಲಿ ರೀತಿ ಬದುಕುತ್ತೇವೆ. ಸ್ವೇಚ್ಛೆ, ಪ್ರೈವೆಸು ವ್ಯಕ್ತಿಗಳ ಜವಾಬ್ದಾರಿಗಳಿಗೆ ನಾವು ಪ್ರಾಮುಖ್ಯತೆ ಕೊಡುತ್ತೇವೆ. ನಮಗೆ ಬೇಕಾದರಂತೆ ಬದುಕುತ್ತೇವೆ. ಬೇರೆಯವರು ಏನು ಅಂದುಕೊಳ್ಳುತ್ತಾರೆ ಎಂಬ ಯೋಚಿಸುತ್ತಾ ನಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದಿಲ್ಲ. ಈಗ ಮಗಳು ಕೂಡ ತಂದೆಯ ಜೊತೆ ಇದ್ದಾಳೆ. 

ನಟಿ ರಮೋಲಾ ಮಾತಿನಿಂದ ವೇದಿಕೆ ಮೇಲೆ ರಕ್ಷಕ್‌ಗೆ ಮುಜುಗರ; ಗಪ್‌ ಚುಪ್‌ ಆಗಿ ನಿಂತ ಮರಿ ಬುಲೆಟ್

ಅನಗನಗ ಓ ಧೀರುಡು, ದೊಂಗಾಟ, ಗುಂಡೆಲ್ಲೋ ಗೋದಾರಿ, ಚಂದಮಾಮ ಕಥಲು ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಲಕ್ಷ್ಮಿ ಅಭಿನಯಿಸಿದ್ದಾರೆ. ಅಲ್ಲದೆ ತಂದೆ ಮಾಡಿರುವ ಆಸ್ತಿಯನ್ನು ಬೆಳೆಸಿಕೊಂಡು ಹೋಗುತ್ತಿದ್ದಾರೆ. ಸಾಕಷ್ಟು ಕಡೆ ಇನ್ವೆಸ್ಟ್‌ ಕೂಡ ಮಾಡಿದ್ದಾರೆ. ಸಿನಿಮಾ ಮಾಡಿಲ್ಲ ಅಂದ್ರೂ ಸಿನಿಮಾ ಕ್ಷೇತ್ರದಲ್ಲಿ ಆಕ್ಟಿವ್ ಆಗಿರಬೇಕು ಎಂದು ವಿಶೇಷ ಪಾತ್ರಗಳು, ಕಿರುತೆರೆ ರಿಯಾಲಿಟಿ ಶೋ ಹಾಗೂ ಫೋಟೋಶೂಟ್‌ ಮೂಲಕ ಲಕ್ಷ್ಮಿ ಆಕ್ಟಿವ್ ಆಗಿರುತ್ತಾರೆ. ಪತಿ ವಿದೇಶದಲ್ಲಿ ಇರುವ ಕಾರಣ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಯಾವುದೇ ವಿಡಿಯೋ ಮಾಡಿದ್ದರೂ ಕಾಣಿಸಿಕೊಳ್ಳುತ್ತಿಲ್ಲ. ನಿಮ್ಮ ಗಂಡ ಭಾರತಕ್ಕೆ ಬಂದಾಗ ಒಮ್ಮೆ ತೋರಿಸಿ ಕ್ಲಾರಿಟಿ ಕೊಡಿ ಎಂದಿದ್ದಾರೆ ಅಭಿಮಾನಿಗಳು. 

ಮದ್ವೆ ಆದ್ಮೇಲೆ ಗಂಡನ ಬಗ್ಗೆ ಕೆಲವೊಂದು ವಿಚಾರ ಗೊತ್ತಾಗಿ ಅಮ್ಮ ಬಿಟ್ಟು ಬಂದರು: ಫ್ಯಾಮಿಲಿ ವಿಚಾರ ಬಿಚ್ಚಿಟ್ಟ ಅಮೃತಾ