ಜೀ ಕನ್ನಡದಲ್ಲಿ 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಆರಂಭವಾಗಿದ್ದು, ರವಿಚಂದ್ರನ್, ರಚಿತಾ ರಾಮ್ ತೀರ್ಪುಗಾರರಾಗಿದ್ದಾರೆ. ನಿರಂಜನ್ ನಿರೂಪಣೆ ಮಾಡುತ್ತಿದ್ದಾರೆ. ರಕ್ಷಕ್ ಮತ್ತು ರಮೋಲಾ ಜೋಡಿಯಾಗಿದ್ದು, ಮೊದಲ ಎಪಿಸೋಡ್‌ನಲ್ಲಿ ರಮೋಲಾ, ರಕ್ಷಕ್ ಲುಕ್ ಬದಲಾಯಿಸಿದ್ದಾರೆ. ರಕ್ಷಕ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಡ್ರೋನ್ ಪ್ರತಾಪ್ ಸೇರಿದಂತೆ ಹಲವು ಬ್ಯಾಚುಲರ್ ಹುಡುಗರು ಈ ಸೀಸನ್‌ನಲ್ಲಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಆರಂಭವಾಗಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ತೀರ್ಪುಗಾರರ ಸ್ಥಾನದಲ್ಲಿದ್ದಾರೆ ಹಾಗೂ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ. ಈ ಸೀಸನ್‌ನಲ್ಲಿ ಹೆಚ್ಚಾಗಿ ಜನಪ್ರಿಯತೆ ಪಡೆದಿರುವ ಹುಡುಗ-ಹುಡುಗಿಯರು ಭಾಗಿಯಾಗಿದ್ದಾರೆ. ಸಿನಿಮಾ ಮಾಡಬೇಕು ಎಂದು ಓಡಾಡುತ್ತಿರುವ ರಕ್ಷಕ್ ಈಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಆದರೆ ಅವರ ಜೋಡಿಯಿಂದ ಆಗಿರುವ ಎಡವಟ್ಟು ಮುಜುಗರ ಆಗುವಂತೆ ಮಾಡಿದೆ.
ಮೊದಲ ಎಪಿಸೋಡ್‌ನಲ್ಲಿ ಬ್ಯಾಚುಲರ್‌ಗಳು ಮತ್ತು ಪಾರ್ಟನರ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ಕನ್ನಡತಿ ಧಾರಾವಾಹಿ ಖ್ಯಾತಿಯ ರಮೋಲಾ ಮತ್ತು ರಕ್ಷಕ್ ಬುಲೆಟ್ ಜೋಡಿಯಾಗಿ ಆಯ್ಕೆ ಆಗಿದ್ದಾರೆ. ರಕ್ಷಕ್ ಬಯಸಿದ್ದಕ್ಕಿಂತ ಬಂಪರ್ ಜೋಡಿ ಸಿಕ್ಕಿದೆ. ಮೊದಲ ಎಪಿಸೋಡ್‌ನಲ್ಲಿ ಬ್ಯಾಚುಲರ್ ಹುಡುಗರ ಲುಕ್‌ನ ಸುಂದರಿಯರು ಬದಲಾಯಿಸಬೇಕು. ಹೀಗಾಗಿ ಪಾರ್ಲರ್‌ಗೆ ರಕ್ಷಕ್‌ನ ಕರೆದುಕೊಂಡು ಹೋಗಿ ಹೇರ್‌ಸ್ಟೈಲ್, ಫೇಷಿಯಲ್, ಐ ಬ್ರೂ, ಶೇವಿಂಗ್, ಪೆಡಿಕ್ಯೂರ್, ಮೆನಿಕ್ಯೂರ್ ಮಾಡಿಸಿದ್ದಾರೆ. ಅಲ್ವ ಸ್ವಲ್ಪ ವ್ಯಾಕ್ಸಿಂಗ್ ಕೂಡ ಮಾಡಿಸಿಕೊಂಡಿದ್ದಾರೆ. ರಕ್ಷಕ್ ನಿಜಕ್ಕೂ ಸಂಪೂರ್ಣವಾಗಿ ಬದಲಾಗಿದ್ದಾರೆ. ವೇದಿಕೆ ಮೇಲೆ ರಕ್ಷಕ್ ಮತ್ತು ರಮೋಲಾ ನಡೆದುಕೊಂಡು ಬರುತ್ತಿದ್ದಂತೆ ಬುಲೆಟ್ ತರ ಇದ್ದೋರು ಈಗ ಬಟರ್ ಫ್ಲೈ ಅಗಿಬಿಟ್ಟಿದ್ದೀರಲ್ಲ ಎಂದು ನಿರಂಜನ್ ಕಾಲೆಳೆಯುತ್ತಾರೆ.
ಮದ್ವೆ ಆದ್ಮೇಲೆ ಗಂಡನ ಬಗ್ಗೆ ಕೆಲವೊಂದು ವಿಚಾರ ಗೊತ್ತಾಗಿ ಅಮ್ಮ ಬಿಟ್ಟು ಬಂದರು: ಫ್ಯಾಮಿಲಿ ವಿಚಾರ ಬಿಚ್ಚಿಟ್ಟ ಅಮೃತಾ
ಹುಡುಗಿ ಜೀವನದಲ್ಲಿ ಇಲ್ಲ ಅಂದರೆ ಲೈಫ್ ಝೀರೋ. ಮೇಡಂ ಅವರು ನಮ್ಮನ್ನು ಸಂಪೂರ್ಣವಾಗಿ ಬದಲಾಯಿಸಿದ್ದರು ಎಂದು ರಕ್ಷಕ್ ಹೇಳಿದ್ದಾರೆ. ಆಗ ರಕ್ಷಕ್ ಹೆಸರನ್ನು ರಕ್ಷಿತ್ ಅಂತ ಹೇಳಿ ರಮೋಲಾ ಕನ್ಫ್ಯೂಸ್ ಆಗಿರುವುದು ಪ್ರೋಮೋದಲ್ಲಿ ವೈರಲ್ ಆಗಿದೆ. ತಕ್ಷಣವೇ ರಮೋಲಾ ಸರಿ ಮಾಡಿಕೊಂಡು ಮಾತು ಮುಂದುವರೆಸುತ್ತಾರೆ. ಈ ಸಲ ಬ್ಯಾಚುಲರ್ ಹುಡುಗರಾಗಿ ರಕ್ಷಕ್ ಬುಲೆಟ್, ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ಪ್ರವೀಣ್ ಜೈನ್, ಭುವನೇಶ್, ಸುನೀತ್, ದರ್ಶನ್ ನಾರಾಯಣ್, ಪ್ರೇಮ್ ತಾಪ, ಸೂರ್ಯ ಉಲ್ಲಾಸ್ ಇದ್ದಾರೆ. ಹುಡುಗರ ಬದಲಾದ ಲುಕ್ ನೋಡಿ ರಚಿತಾ ರಾಮ್ ಥ್ರಿಲ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಎಪಿಸೋಡ್‌ಗಳು ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ಜನರಿಗೆ ಹುಟ್ಟಿಕೊಂಡಿದೆ.
ಪವಿತ್ರಾ ಗೌಡ ಅಂಗಡಿಯಲ್ಲಿ ಸ್ಪೆಷಲ್ ಗಿಫ್ಟ್ ಖರೀದಿಸಿದ 'ಕಾಮಿಡಿ ಕಿಲಾಡಿಗಳು' ಮಂಥನ; ಎಲ್ಲರೂ ಶಾಕ್
