ಜನ ನಾಯಗನ್ ವಿಜಯ್ ರ ಸಿನಿ ಕರಿಯರ್ ಗೆ ಇತಿಶ್ರೀ ಹಾಡೋ ಕೊನೇಯ ಚಿತ್ರ. ಈ ಮೂವಿ ಮೇಲೆ ವಿಜಯ್ ಕುಲ ಕೋಟಿ ಅಭಿಮಾನಿಗಳ ಕಣ್ಣು ಇದೆ. ಇದೀಗ ಜನ ನಾಯಗನ್ ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್​ಆಗಿದೆ.

ಸಿಎಂ ವಿಜಯ್ ಕೊನೆ ಚಿತ್ರ ರಿಲೀಸ್​ಗೆ ಕೌಂಟ್​ಡೌನ್; ಜುಲೈ 24ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಂತೆ ಜನನಾಯಗನ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳುನಾಡು ಸಿಎಂ ವಿಜಯ್ (Vijay Joseph) ನಟನೆಯ 'ಜನನಾಯಗನ್' (Jana Nayagan) ಸಿನಿಮಾ ಬಿಡುಗಡೆಗೆ ಎದುರಾದ ವಿಘ್ನಗಳು ಒಂದೆರಡಲ್ಲ. ಯಾರ ಶಾಪವೋ ಏನೋ ವಿಜಯ್​ಸಿನಿ ಖರಿಯರ್ ನ ಕೊನೆ ಚಿತ್ರಕ್ಕೆ ಈ ಗತಿ ಬಂದು ಬಿಡ್ತು. ಸಿನಿಮಾ ಬಿಡುಗಡೆಗೆ ಮೊದಲೇ ಆನ್ಲೈನ್​ನಲ್ಲಿ ಲೀಕ್​ಆಗಿತ್ತು. ಆದರೂ ಫಸ್ಟ್ ಡೇ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈಗ ಅದಕ್ಕೊಂದು ದಿನ ಫಿಕ್ಸ್ ಆಗಿದೆ. ಹಾಗಾದ್ರೆ ಜನ ನಾಯಗನ್ ಯಾವಾಗ ಬರುತ್ತೆ, ಇದ್ದ ಕಂಠಕ ಬಗೆ ಹರೀತಾ..? ನೋಡೋಣ ಬನ್ನಿ..

ದಳಪತಿ ವಿಜಯ್ ಈಗ ತಮಿಳುನಾಡು ಸಿಎಂ ಪಟ್ಟಕ್ಕೇರಿ ಎರಡು ತಿಂಗಳಾಯ್ತು. ವಿಜಯ್ ಈಗ ಮುಖ್ಯಮಂತ್ರಿ.ಇಂತಹ ಪವರ್ ಫುಲ್​ ವ್ಯಕ್ತಿಗೂ ಸವಾಲ್ ಆಗಿದ್ದು, ಜನ ನಾಯಗನ್ ಸಿನಿಮಾವನ್ನ ಬೆಳ್ಳಿ ಪರದೆ ಮೇಲೆ ತರೋದು..

ವಿಜಯ್ ಗೆ ದುಸ್ವಪ್ನವಾಗಿದ್ದ ಆ ದೊಡ್ಡ ಕಂಟಕ ಬಗೆ ಹರಿಯಿತು..!

ಈ ಸಲ ಮಿಸ್ಸೇ ಇಲ್ಲ.. 'ಜನನಾಯಗನ್' ರಿಲೀಸ್ ದಿನ ಫಿಕ್ಸ್..!

ಹೌದು, ಜನ ನಾಯಗನ್ ಸಿನಿಮಾ ದಳಪತಿ ವಿಜಯ್ ಮುಖ್ಯ ಮಂತ್ರಿ ಆಗೋ ಮೊದಲೇ ಬಿಡುಗಡೆ ಆಗಬೇಕಿತ್ತು. ಆದ್ರೆ ಸೆನ್ಸಾರ್​ನಲ್ಲಿ ಪಾಸ್​ಆಗದ ನೆಪದಲ್ಲಿ ಈ ಚಿತ್ರಕ್ಕೆ ಬಿಡುಗಡೆ ಭಾಗ್ಯವೇ ಸಿಕ್ಕಿರಲಿಲ್ಲ. ಎಲೆಕ್ಷನ್ ಟೈಮ್​ನಲ್ಲಿ ಚಿತ್ರ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ರೂ ಅದಕ್ಕೆ ಚುನಾವಣಾ ಆಯೋಗ ಆಸ್ಪದ ಕೊಡಲಿಲ್ಲ. ಕೊನೆಗೆ ಸಿನಿಮಾ ಲೀಕ್ ಆಗಿ ದೊಡ್ಡ ಅವಾಂತರಕ್ಕೆ ಕಾರಣ ಆಗಿತ್ತು. ಆದ್ರೆ ಈಗ ಎಲ್ಲಾ ಸಮಸ್ಯೆಗಳು ಸವಾಲುಗಳು ದೂರಾಗಿವೆ. ಈ ಸಲ ಮಿಸ್ಸೇ ಇಲ್ಲ, ಜನನಾಯಗನ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ...

ಸಿಎಂ. ವಿಜಯ್ ಕೊನೆ ಚಿತ್ರ ರಿಲೀಸ್​ಗೆ ಕೌಂಟ್​ಡೌನ್; ಜುಲೈ 24ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಂತೆ ಜನನಾಯಗನ್!

ಜನ ನಾಯಗನ್ ವಿಜಯ್ ರ ಸಿನಿ ಕರಿಯರ್ ಗೆ ಇತಿಶ್ರೀ ಹಾಡೋ ಕೊನೇಯ ಚಿತ್ರ. ಈ ಮೂವಿ ಮೇಲೆ ವಿಜಯ್ ಕುಲ ಕೋಟಿ ಅಭಿಮಾನಿಗಳ ಕಣ್ಣು ಇದೆ. ಇದೀಗ ಜನ ನಾಯಗನ್ ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್​ಆಗಿದೆ. ಜುಲೈ 24ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆ ಕಾಣುತ್ತೆ ಅಂತ ತಮಿಳುನಾಡು ಮಾಧ್ಯಮಗಳಲ್ಲಿ ಸುದ್ದಿ ಸದ್ದು ಮಾಡಿದೆ.

ಸಕ್ರಿಯ ರಾಜಕೀಯರಂಗದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಸ್ವಂತ ಪಕ್ಷ ಕಟ್ಟಿ ಗೆದ್ದು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ತಮ್ಮ ಪಾರದರ್ಶಕ ಆಡಳಿತದ ಮೂಲಕ ಸುದ್ದಿಯಾಗಿದ್ದಾರೆ. ವಿಜಯ್ ಸಿಎಂ ಆಗಿಬಿಟ್ಟರೆ 'ಜನನಾಯಗನ್' ಸಿನಿಮಾ ಬಿಡುಗಡೆ ಹಾದಿ ಸುಗಮವಾಗುತ್ತದೆ ಎಂದು ಭಾವಿಸಲಾಗ್ತಿತ್ತು. ಆದ್ರೆ ಎರಡೂ ತಿಂಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ದಳಪತಿ ವಿಜಯ್ ತಮ್ಮ ರಾಜಕೀಯರಂಗ ಪ್ರವೇಶಕ್ಕೆ 'ಜನನಾಯಗನ್' ಸಿನಿಮಾ ಬಳಸಿಕೊಳ್ಳಲು ಮನಸ್ಸು ಮಾಡಿದ್ರು. ಭ್ರಷ್ಟ ರಾಜಕಾರಣಿಗಳ ವಿರುದ್ಧದ ಹೋರಾಟದ ಸನ್ನಿವೇಶಗಳು ಚಿತ್ರದಲ್ಲಿತ್ತು. ಅದಕ್ಕೆ ಸಂಬಂಧಪಟ್ಟಂತೆ ಡೈಲಾಗ್ಸ್ ಸೇರಿಸಲಾಗಿತ್ತು. ಈಗ ವಿಜಯ್ ರಾಜಕೀಯಕ್ಕೆ ಬಂದು ಸಿಎಂ ಆಗಿಬಿಟ್ಟಿದ್ದಾರೆ. ಹಾಗಾಗಿ ಕೆಲ ದೃಶ್ಯಗಳನ್ನು ಬದಲಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಟೈಟಲ್‌ ಕಾರ್ಡ್‌ನಲ್ಲಿ ದಳಪತಿ ವಿಜಯ್ ಬದಲು ತಮಿಳುನಾಡು ಸಿಎಂ ವಿಜಯ್ ಎಂದು ಹೆಸರು ಬದಲಿಸಿದ್ದಾರಂತೆ. ಒಟ್ನಲ್ಲಿ ಕೆವಿಎನ್​ನಿರ್ಮಾಣದ ಜನ ನಾಯಗನ್ ಈಗ ತಮಿಳರ ಹಾಟ್ ಟಾಪಿಕ್ ಆಗಿರೋದಂತು ನಿಜ..

'ಸಿನಿಮಾ ಹಂಗಾಮ' ವಿಡಿಯೋ ನೋಡಿ...