ಪದೇ ಪದೇ ಚರ್ಚೆಯಾಗುತ್ತಿದೆ ನಟಿ ಸುಕನ್ಯಾ ಡಿವೋರ್ಸ್‌ ವಿಚಾರ ಮತ್ತು ಮಗಳ ಫೋಟೋ. ಸ್ಪಷ್ಟನೆ ಕೊಟ್ಟು ಬೇಸತ್ತ ನಟಿ.... 

ಕನ್ನಡದಲ್ಲಿ ಗುರು-ಬ್ರಹ್ಮ ಮತ್ತು ಚಂದ್ರ ಸಿನಿಮಾದಲ್ಲಿ ನಟಿಸಿರುವ ಸುಕನ್ಯಾ ಗಾಯಕಿ ಕೂಡ. ತಮಿಳು ಮತ್ತು ತೆಲುಗು ಸೂಪರ್ ಸ್ಟಾರ್‌ಗಳ ಜೊತೆ ನಟಿಸಿರುವ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 2002ರಲ್ಲಿ ಶ್ರೀಧರ್‌ ರಾಜಗೋಪಾಲ್‌ ಎಂಬುವವರನ್ನು ಮದುವೆ ಮಾಡಿಕೊಂಡ ಸುಕನ್ಯಾ ಕೆಲವೇ ದಿನಗಳಲ್ಲಿ ಡಿವೋರ್ಸ್‌ ಬೇಕೆಂದು ಕುಂತರು. ಇದುವರೆಗೂ ಡಿವೋರ್ಸ್‌ಗೆ ಕಾರಣವೇನು ಎಂದು ತಿಳಿದಿಲ್ಲ ಆದರೆ ಕೋರ್ಟ್‌ ತುಂಬಾ ಕಡವಾಗಿ ಡಿವೋರ್ಸ್‌ಗೆ ಅನುಮತಿ ನೀಡಿತ್ತು. ಈ ನಡುವೆ ಸುಕನ್ಯಾ ಮಗಳು ಎಂದು ಹುಡುಗಿ ಫೋಟೋ ವೈರಲ್ ಆಗುತ್ತಿದೆ. ಇದರ ಬಗ್ಗೆ ಸ್ವತಃ ಸುಕನ್ಯಾ ಸ್ಪಷ್ಟನೆ ನೀಡಿದ್ದಾರೆ. 

ನಾನು ಕೂಡ ಆ ಫೋಟೋಗಳನ್ನು ನೋಡಿದ್ದೀನಿ. ಆದರೆ ಆಕೆ ನನ್ನ ಮಗಳಲ್ಲ. ಅದು ನನ್ನ ಸಹೋದರಿ ಮಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿವರಣೆ ನೀಡಿದ್ದೀನಿ. ಆಕೆ ನನ್ನ ಸಹೋದರಿ ಮಗಳು ಎಂದು ಟ್ವಿಟರ್‌ನಲ್ಲಿ ಕೂಡ ಫೋಟೋಗಳನ್ನು ಹಾಕಿದ್ದೀನಿ. ಅದೊಂದು ಫೋಟೋ ಅಲ್ಲ ಹಲವು ಫೋಟೋಗಳನ್ನು ಸಾಕ್ಷಿಯಾಗಿ ಹಾಕಿದ್ದೀನಿ. ದಯವಿಟ್ಟು ನೋಡಿ ಎಂದು ಸುಕನ್ಯಾ ಹೇಳಿದ್ದಾರೆ. 

ಗರ್ಭಿಣಿ ಆಗಿದ್ದಾಗಲೆ ಮಗುವಿನ ಲಿಂಗ ತಿಳಿದುಕೊಂಡ್ರಾ?;ನಟಿ ಕಾವ್ಯಾ ಗೌಡ ಸಹೋದರಿ ಮೇಲೆ ನೆಟ್ಟಿಗರ ಆಕ್ರೋಶ

ನನಗೆ ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್‌ ಆಯ್ತು. ಒಂದು ವರ್ಷ ಕೂಡ ನಾವು ಒಟ್ಟಿಗೆ ಜೀವನ ಮಾಡಿಲ್ಲ ಒಟ್ಟಿಗೆ ಇರಲಿಲ್ಲ. ಅದು ಮುಗಿದ ಅಧ್ಯಾಯ. ಕೆಲ ತಿಂಹಳ ಬಳಿಕ ನಾವು ವಿಚ್ಛೇದನಕ್‌ಕಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವು ಆದರೆ ವಿಚ್ಛೆದನ ಪಡೆಯಲು ಬಹಳ ಸಮಯವಾಯಿತ್ತು. ಆದರೆ ನನ್ನ ಸಹೋದರಿ ಮಗಳ ಫೋಟೋ ಹಾಕಿ ನನ್ನ ಮಗಳು ಎಂದು ಪ್ರಚಾರ ಮಾಡುತ್ತಿದ್ದಾರೆ. ಕೆಲವೊಮ್ಮೆ ಇದನ್ನು ನೋಡಿ ಆಕೆ ದೊಡ್ಡಮ್ಮ ನಿಮ್ಮಿಂದ ನಾನು ಫುಲ್ ಫೇಮಸ್ ಅಗಿಬಿಟ್ಟಿದ್ದೀನಿ ಎಂದು ಹೇಳುತ್ತಿರುತ್ತಾಳೆ ಎಂದು ಸುಕನ್ಯಾ ಮಾತನಾಡಿದ್ದಾರೆ. 

ಅಬ್ಬಬ್ಬಾ! ರಾಧಿಕಾ ಕುಮಾರಸ್ವಾಮಿ ಆಸ್ತಿ ಕೇಳಿ ನಟಿಮಣಿಯರು ಶಾಕ್; 34 ಚಿತ್ರಕ್ಕೆ ಇಷ್ಟೊಂದು ಹಣ ಎಲ್ಲಿಂದ ಬಂತು?

'ಎಷ್ಟೇ ಹೇಳಿದರೂ ಸುಳ್ಳು ಸುದ್ದಿ ಹಬ್ಬಿಸುವುದು ನಿಲ್ಲಿಸುವುದಿಲ್ಲ. ನನಗೂ ಹೇಳಿ ಹೇಳಿ ಸಾಕಾಗಿದೆ. ಇದಕ್ಕಿಂತ ಮೇಲೆ ಏನೂ ಹೇಳೋಕೆ ಸಾಧ್ಯವಿಲ್ಲ ಎಂದಿದ್ದಾರೆ ಸುಕನ್ಯಾ.