ತಮಿಳು ಚಿತ್ರರಂಗ ಬಹು ನಿರೀಕ್ಷಿತ ಸಿನಿಮಾ 'ಮಾಸ್ಟರ್‌' ಈಗಾಗಲೇ  ರಿಲೀಸ್‌ ಆಗಬೇಕಿತ್ತು. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ . 

'ಪೇಟ' ಚಿತ್ರದ ಮೂಲಕ ಕಾಲಿವುಡ್‌ಗೆ ಕಾಲಿಟ್ಟ ಮಾಳವಿಕಾ ಮೂಹನನ್‌ ವಿಜಯ್ ದಳಪತಿ ಹಾಗೂ ವಿಜಯ್ ಸೇತುಪತಿ ಅಭಿನಯದ 'ಮಾಸ್ಟರ್' ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ. ಈಗಾಗಲೇ  ಪೋಸ್ಟರ್‌ ಹಾಗೂ ಟ್ರೈಲರ್‌ ಮೂಲಕ ಸಾಕಷ್ಟು ಸದ್ದು ಮಾಡಿರುವ ಸಿನಿಮಾ ಬಗ್ಗೆ ಅಭಿಮಾನಿಗಳು ಫ್ಯಾನ್ ಪೇಜ್ ಕ್ರಿಯೇಟ್‌ ಮಾಡಿ ಕ್ರೇಜ್‌ ಹೆಚ್ಚಿಸುತ್ತಿದ್ದಾರೆ ಹಾಗೂ ಬೇಗ ರಿಲೀಸ್‌ ಮಾಡುವುದಕ್ಕೆ ಚಿತ್ರತಂಡವನ್ನು ಒತ್ತಾಯ ಮಾಡುತ್ತಿದ್ದಾರೆ.

ಮಾಸ್ಟರ್ ಚಿತ್ರಕ್ಕೆ 100 ಕೋಟಿ ಪಡೆದ ವಿಜಯ್; ರಜನಿನೂ ಮೀರಿಸಿದ ಸಂಭಾವನೆ!

ಕೊರೋನಾ ವೈರಸ್‌ನಿಂದ ಮನೆಯಲ್ಲೇ  ಕಾಲ ಕಳೆಯುತ್ತಿರುವ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರು ಈಗ ಮನೆಯಲ್ಲಿ ಹೇಗಿರುತ್ತಾರೆ ಎಂದು ಕಾರ್ಟೂನ್‌ ರೀತಿಯಲ್ಲಿ ಅಭಿಮಾನಿಯೊಬ್ಬ ಚಿತ್ರಿಸಿ ಪೋಟೋ ರಿಲೀಸ್‌ ಮಾಡಿದ್ದಾರೆ ಅದರಲ್ಲಿ ನಟಿ ಮಾಳವಿಕಾ ದುಃಖದಲ್ಲಿ ಅಡುಗೆ ಮಾಡುತ್ತಾ ನಿಂತಿದ್ದಾರೆ. ಇದಕ್ಕೆ ಮಾಳವಿಕಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

'ಕಾರ್ಟೂನ್‌ನಲ್ಲಿಯೂ ನಾಯಕಿಗೆ ಅಡುಗೆ ಮಾಡುವ ಕೆಲಸವನ್ನೇ ನೀಡಿದ್ದಾರೆ. ಪ್ರಪಂಚದಲ್ಲಿ ಯಾವಾಗ ಲಿಂಗಭೇದ  ಅಂತ್ಯವಾಗುತ್ತದೆ ಎಂದು ಗೊತ್ತಿಲ್ಲ' ಎಂದು ಕಾಮೆಂಟ್‌ ಮಾಡಿದ ಮಾಳವಿಕಾ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಹೆಣ್ಣಾಗಿ  ನಿಮಗೆ  ಎಲ್ಲಾ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರೆ ಇನ್ನೂ ಕೆಲವರು ಒಂದಲ್ಲಾ ಒಂದು ದಿನ ನೀವು ಅದನ್ನೇ ಮಾಡಬೇಕು ಎಂದು ಬರೆದಿದ್ದಾರೆ. ಪೋಟೋಗೆ ಮಾಳವಿಕಾ ಕಾಮೆಂಟ್‌ ಮಾಡಿ ಕೆಲವೇ ನಿಮಿಷಗಳಲ್ಲಿ ವೈರಲ್‌ ಆಗಿ ವಿಜಯ್ ಫ್ಯಾನ್‌ ಪೇಜ್ ಮಾಳವಿಕಾ ಮೇಲೆ  ಮುಗಿಬಿದ್ದಿದಾರೆ. 

'ಮಾಸ್ಟರ್‌' ಸಂಭ್ರಮ; ವಿಜಯ್‌ ದಳಪತಿ ಮುತ್ತಿಟ್ಟ ವಿಡಿಯೋ ವೈರಲ್!

ಅಭಿಮಾನಿಗಳ ಮೆಸೇಜ್‌, ಟ್ವೀಟ್‌ ಹಾಗೂ ಫೋನ್‌ ಕಾಲ್‌  ತಡೆಯಲಾಗದೆ ಮಾಳವಿಕಾ ಟ್ಟೀಟರ್‌ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಅಭಿಮಾನಿಗಳು ಆಕೆಯ ಕಾಮೆಂಟ್‌ ಸ್ಕ್ರೀನ್‌ ಶಾಟ್ ವೈರಲ್ ಮಾಡಿದ್ದಾರೆ.  ಮಾಳವಿಕಾ ಪರವಾಗಿ ಗಾಯಕಿ  ಚಿನ್ಮಯಿ ಶ್ರೀಪಾದ ಪ್ರಶ್ನೆ ಮಾಡಿದ್ದಾರೆ.'ಒಬ್ಬ ನಟಿ ಅಭಿಮಾನಿ ಸೃಷ್ಟಿ ಮಾಡಿರುವ ಪಾತ್ರದಲ್ಲಿ ಕಾಣಿಸಿಕೊಂಡ ರೀತಿ ಇಷ್ಟವಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆಕೆಯನ್ನು ಅವಮಾನಿಸಿ, ಕೆಟ್ಟ ಪದಗಳನ್ನು ಬಳಸಿ, ಹೆದರಿಸಿ ಡಿಲೀಟ್ ಮಾಡಿಸಲಾಗಿದೆ. ಆದರೆ 'ಸೆಕ್ಸೀಷ್ಟ್' ಎಂದು ಮಾಡಿರುವ ಕಾಮೆಂಟ್‌ 1000ಕ್ಕೂ ರೀಟ್ಟೀಟ್‌ ಆಗಿದೆ. ನಮ್ಮ ನಟಿಯರ ಪರ ನಾವೇ ಇಲ್ವಾ?' ಎಂದು ಬರೆದುಕೊಂಡಿದ್ದಾರೆ.

ಮಾಳವಿಕಾ ವ್ಯಕ್ತ ಪಡಿಸಿದ ಅಭಿಪ್ರಾಯವನ್ನು ಯಾರೂ ಒಪ್ಪಿಕೊಳ್ಳದೇ ಆಕೆ ಆಡಿದ ಮಾತುಗಳನ್ನು  ತಪ್ಪು ಎಂದು ಅದನ್ನ ವೈರಲ್‌ ಮಾಡುತ್ತಿರುವ ಜನರನ್ನು ವಿರೋಧಿಸಿ ತಮಿಳು ಚಿತ್ರರಂಗದ ನಟಿಯರು ಒಟ್ಟಾಗಿ ನಿಂತಿದ್ದಾರೆ.

ವಿಜಯ್ ದಳಪತಿ 'ಮಾಸ್ಟರ್‌' ಹಾಡಿನಲ್ಲಿ ವಿಜಯ್‌ ಸೇತುಪತಿ; ವಿಡಿಯೋ ವೈರಲ್‌!

ನಟಿ ಮಾಳವಿಕಾ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಪ್ರೀತಂ ಗುಬ್ಬಿ ನಿರ್ದೇಶನದ ಕನ್ನಡ ಸಿನಿಮಾ 'ನಾನು ಮತ್ತು ವರಮಹಾಲಕ್ಷ್ಮಿ' ಚಿತ್ರದಲ್ಲಿ  ನಟಿಸಿದ್ದಾರೆ.  ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲೂ ಕೂಡ  ಅವಕಾಶಗಳು ಹರಿದು ಬರುತ್ತಿವೆ .